• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ತಂದೆ, ನಿವೃತ್ತ ಐಎಎಸ್ ಯುಗಂಧರ್ ನಿಧನ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 13: ಮೈಕ್ರೋಸಾಫ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸತ್ಯ ನಾದೆಲ್ಲಾ ಅವರ ತಂದೆ- ಮಾಜಿ ಐಎಎಸ್ ಅಧಿಕಾರಿ ಬಿ. ಎನ್. ಯುಗಂಧರ್ (82) ಶುಕ್ರವಾರ ನಿಧನರಾಗಿದ್ದಾರೆ. ಬುಕ್ಕಾಪುರಂ ನಾದೆಲ್ಲಾ ಯುಗಂಧರ್ ಅವರು ನಿವೃತ್ತ ಐಎ ಎಸ್ ಅಧಿಕಾರಿ. ಅವರು ಪ್ರಧಾನಿ ಕಾರ್ಯಾಲಯ ಹಾಗೂ ಯೋಜನಾ ಆಯೋಗದಲ್ಲಿ ಸೇವೆ ಸಲ್ಲಿಸಿದ್ದರು.

ಹೈದರಾಬಾದ್ ನ ಬಂಜಾರಹಿಲ್ಸ್ ನಲ್ಲಿ ಇರುವ ಮನೆಯಲ್ಲಿ ಯುಗಂಧರ್ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಂತ್ಯಸಂಸ್ಕಾರ ಯಾವಾಗ ನಡೆಯಲಿದೆ ಹಾಗೂ ಅದರಲ್ಲಿ ಸತ್ಯ ನಾದೆಲ್ಲಾ ಭಾಗವಹಿಸುತ್ತಾರಾ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ.

ಯುಗಂಧರ್ ಅವರು ಅವಿಭಜಿತ ಆಂಧ್ರಪ್ರದೇಶ ಹಾಗೂ ಕೇಂದ್ರದಲ್ಲಿ ಹಲವು ಮುಖ್ಯ ಹುದ್ದೆಗಳನ್ನು ನಿರ್ವಹಿಸಿದ್ದರು. ಸಮಾಜದಲ್ಲಿನ ಬಡವರು, ದೀನ- ದಲಿತ ವರ್ಗಕ್ಕೆ ಸರಕಾರ ರೂಪಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪರಿಣಾಮಕಾರಿ ಕೆಲಸ ಮಾಡಿದ್ದರು. ತಮ್ಮ ಸೇವಾವಧಿ ಉದ್ದಕ್ಕೂ ಕಳಂಕರಹಿತವಾದ ಸೇವೆ ಸಲ್ಲಿಸಿದವರು ಯುಗಂಧರ್.

Microsoft CEO Satya Nadella Father Passed Away In Hyderabad

ಯುಗಂಧರ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರು. ತಾವು ಹುಟ್ಟಿದ ಬುಕ್ಕಾಪುರಂ ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದರು. ಯುಗಂಧರ್ ನಿಧನಕ್ಕೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸಂತಾಪ ಸೂಚಿಸಿದ್ದಾರೆ.

English summary
B. N. Yugandhar (80), former IAS officer and Microsoft CEO Satya Nadella father passed away in Hyderabad on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X