ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವನ್ ಕಲ್ಯಾಣ್ ಗೆ ಚಿರು ಕುಟುಂಬ ಬೆಂಬಲವಿಲ್ಲ

By ಜೇಮ್ಸ್ ಮಾರ್ಟಿನ್
|
Google Oneindia Kannada News

ಹೈದರಾಬಾದ್, ಮಾ.14: ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ನಡುವೆ ಕೇಂದ್ರ ಸಚಿವ ಚಿರಂಜೀವಿ ಅವರ ತಮ್ಮ ಪವನ್ ಕಲ್ಯಾಣ್ ಅವರ ಹೊಸ ರಾಜಕೀಯ ಪಕ್ಷಕ್ಕೆ ಯಾರು ಬೆಂಬಲ ನೀಡುತ್ತಾರೆ ಯಾರು ವಿರೋಧಿಸುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ಹೊಸ ಪಕ್ಷದ ಹೆಸರನ್ನು ಅಧಿಕೃತವಾಗಿ ನೋಂದಾಯಿಸಿ, ಕೇಂದ್ರ ಚುನಾವಣಾ ಆಯೋಗಕ್ಕೆ ಮಾನ್ಯತೆಗಾಗಿ ಪತ್ರ ಬರೆದಿರುವ ಪವನ್ ಮಿಕ್ಕ ವಿವರಗಳನ್ನು ಮಾ.14ರ ಸಂಜೆ 6 ಗಂಟೆಗೆ HITEX ಮಾಧಾಪುರದಲ್ಲಿ ನಡೆಯುವ ಸುದ್ದಿಗೋಷ್ಠಿಯಲ್ಲಿ ತಿಳಿಯಬಹುದು. ಈ ಮಧ್ಯೆ ಪವನ್ ಗೆ ಆರಂಭದಲ್ಲೆ ಕೊಂಚ ಹಿನ್ನಡೆ ಉಂಟಾಗಿದೆ.

ಅಣ್ಣ ಚಿರಂಜೀವಿ ಒಡೆದು ಹೋಗಿರುವ ರಾಜ್ಯಕ್ಕೆ ಅಧಿಪತಿಯಾಗುವ ಹೊತ್ತಿಗೆ ಸಮಗ್ರ ಆಂಧ್ರದ ಪ್ರತಿನಿಧಿಯಾಗಿ ಪವನ್ ಜನರ ಮುಂದೆ ಪ್ರಶ್ನೆ ಕೇಳುತ್ತಾ ಜನ ಸೇನ ಪಕ್ಷ ಕಟ್ಟಲು ತಯಾರಿ ನಡೆಸಿರುವುದು ಚಿರು ಕುಟುಂಬಕ್ಕೆ ಹಿಡಿಸಿಲ್ಲ. ಅಣ್ಣನ ವಿರುದ್ಧವೇ ಪವನ್ ನಿಲ್ಲುವುದನ್ನು ಮತ್ತೊಬ್ಬ ಅಣ್ಣ ನಾಗಾಬಾಬು ಖಂಡಿಸಿದ್ದಾರೆ. ತೆಲುಗು ಕಿರುತೆರೆಯ ಜನಪ್ರಿಯತೆ ಗಳಿಸಿರುವ 'ಜಬರ್ದಸ್ತ್' ಕಾರ್ಯಕ್ರಮ ಖ್ಯಾತಿಯ ನಟ ನಾಗ ಬಾಬು ಅವರು ಮೌನ ಮುರಿದಿದ್ದು, ಚಿರಂಜೀವಿ ಕುಟುಂಬ ಪವನ್ ವಿರುದ್ಧ ನಿಲ್ಲಲಿದೆ. ಚಿರಂಜೀವಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮಾತ್ರ ನಡೆಯಲಿದೆ ಎಂದಿದ್ದಾರೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ.. ಮೆಗಾ ಸ್ಟಾರ್ ಫ್ಯಾನ್ಸ್, ಮೆಗಾ ಸ್ಟಾರ್ ಕುಟುಂಬದ ಪ್ರತಿ ಸದಸ್ಯ ಕೂಡಾ ಪವನ್ ನಿಂದ ದೂರವುಳಿಯಲಿದ್ದಾರಂತೆ.

ಚಿರು ಜತೆ ಚೆರಿ, ಅಲ್ಲು ಅರ್ಜುನ್ ಸಾಥ್ ಇಲ್ಲ

ಚಿರು ಜತೆ ಚೆರಿ, ಅಲ್ಲು ಅರ್ಜುನ್ ಸಾಥ್ ಇಲ್ಲ

ನಾಗಾಬಾಬು ಅವರು ಗುರುವಾರ ನೀಡಿರುವ ಪತ್ರಿಕಾ ಹೇಳಿಕೆ ಪ್ರಕಾರ 'ನಾನು, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್ ಹಾಗೂ ಅಲ್ಲು ಅರವಿಂದ್ ಅವರು ಚಿರಂಜೀವಿ ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತೇವೆ. ಪವನ್ ಯೋಜನೆಗಳು ಏನೇ ಇದ್ದರೂ ನಮ್ಮ ಕುಟುಂಬದ ಒಗ್ಗಟ್ಟಿಗೆ ಏನು ತೊಂದರೆ ಇಲ್ಲ. ಚಿರಂಜೀವಿ ಜತೆ ಎಲ್ಲರೂ ಇದ್ದೇವೆ. ನಾನಂತೂ ರಾಜಕೀಯಕ್ಕೆ ಸೇರುವುದಿಲ್ಲ ಎಂದಿದ್ದಾರೆ.

ಮೆಗಾ ಸ್ಟಾರ್ ಫ್ಯಾನ್ ಗಳ ಕಥೆ ಏನು?

ಮೆಗಾ ಸ್ಟಾರ್ ಫ್ಯಾನ್ ಗಳ ಕಥೆ ಏನು?

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಇರುವ ಮೆಗಾ ಸ್ಟಾರ್ ಫ್ಯಾನ್ ಕ್ಲಬ್ ಗಳಿಗೆ ಕರೆ ನೀಡಿರುವ ನಾಗಬಾಬು, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅಭಿಮಾನಿಗಳ ಮನಸಿನಲ್ಲಿ ಗೊಂದಲ ಉಂಟಾಗಿದೆ. ಗೊಂದಲ ಪರಿಹಾರಕ್ಕಾಗಿ ಪತ್ರಿಕಾ ಹೇಳಿಕೆ ನೀಡಬೇಕಾಗಿ ಬಂತು. ಚಿರಂಜೀವಿ ಅಣ್ಣ ಹಾಕಿಕೊಟ್ಟಿರುವ ರಾಜಮಾರ್ಗದಲ್ಲೇ ನಾವೆಲ್ಲ ಸಾಗೋಣ. ಚಿರಂಜೀವಿ ಅವರಿಗೆ ನೀವೆಲ್ಲ ಎಂದಿನಂತೆ ಬೆಂಬಲ ನೀಡುತ್ತೀರಾ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ಚಿರಂಜೀವಿ ರಾಜಕೀಯ ಜೀವನ ಕವಲು ದಾರಿ

ಚಿರಂಜೀವಿ ರಾಜಕೀಯ ಜೀವನ ಕವಲು ದಾರಿ

ಸದ್ಯಕ್ಕೆ ಚಿರಂಜೀವಿ ಅವರ ರಾಜಕೀಯ ಭವಿಷ್ಯ ಕವಲುದಾರಿಯಲ್ಲಿದೆ. ಕೇಂದ್ರ ಪ್ರವಾಸೋದ್ಯಮ ಸಚಿವರಾಗಿದ್ದರೂ ತನ್ನೂರಿನಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ. ದಿವಂಗತ ಎನ್ ಟಿ ರಾಮರಾವ್ ರಂತೆ ಸಿನಿಮಾರಂಗದಿಂದ ರಾಜಕೀಯಕ್ಕೆ ಬಂದ ಚಿರಂಜೀವಿಗೆ ಅಪಾರ ಅಭಿಮಾನಿಗಳ ಶ್ರೀರಕ್ಷೆ ಸಿಕ್ಕಿತ್ತು. ಆದರೆ, ಪ್ರಜಾರಾಜ್ಯಂ ಹೇಳಿಕೊಳ್ಳುವಂಥ ಸಾಧನೆ ಮಾಡಲಿಲ್ಲ. ಸ್ವತಃ ಚಿರಂಜೀವಿ ಒಂದು ಕ್ಷೇತ್ರದಲ್ಲಿ ಸೋಲು ಕಂಡಿದ್ದಲ್ಲದೆ 18 ಸ್ಥಾನಗಳನ್ನು ಗೆದ್ದಿದ್ದ ಪಕ್ಷವನ್ನು ಕಾಂಗ್ರೆಸ್ ಗೆ ಮಾರಿ ಬಿಟ್ಟರು. ಮಾರಾಟದ ಬೆಲೆ ಸುಮಾರು 500 ಕೋಟಿ ಎಂಬ ಸುದ್ದಿ ಹಬ್ಬಿದ್ದೇ ಅಭಿಮಾನಿಗಳಿಗೆ ಶಾಕ್ ಆಯಿತು.
ಈಗ ಒಡೆದ ಆಂಧ್ರದ ಸಿಎಂ ಆಗುವ ಕನಸನ್ನು ಮೆಗಾ ಸ್ಟಾರ್ ಕಾಣುತ್ತಿದ್ದಾರೆ. ಪವನ್ ಹೊಸ ಪಕ್ಷದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಾರೆ.

ಕೂಸು ಹುಟ್ಟೋಕೂ ಮುಂಚೆ ಕುಲಾವಿ

ಕೂಸು ಹುಟ್ಟೋಕೂ ಮುಂಚೆ ಕುಲಾವಿ

ಪಕ್ಷ ಸ್ಥಾಪನೆಗೂ ಮುನ್ನವೇ ಪಕ್ಷದ ಚಿನ್ಹೆ, ಫ್ಯಾನ್ ಕ್ಲಬ್ ಸ್ಥಾಪಿಸಿ ಆಂಧ್ರದಲ್ಲಿ ಸಂಚಲನ ಮೂಡಿಸಿರುವ ಪವನ್ ಕಲ್ಯಾಣ್ ಅವರ ಜನಸೇನ ಪಾರ್ಟಿಗೆ ಚುನಾವಣಾ ಆಯೋಗದಿಂದ ಮಾನ್ಯತೆ ಸಿಗುವುದು ಅನುಮಾನವಾಗಿದೆ.

ಮಾ.10 ರಂದು ಜನಸೇನ ಪಾರ್ಟಿ ಹೆಸರಿನಲ್ಲಿ ಹೊಸ ಪಕ್ಷದ ಸ್ಥಾಪನೆಗಾಗಿ ಅರ್ಜಿ ಹಾಕಲಾಗಿದೆ. ಆದರೆ, ಆಯೋಗದ ನಿಯಮದ ಪ್ರಕಾರ ಕನಿಷ್ಠ ಮೂರು-ನಾಲ್ಕು ತಿಂಗಳುಗಳ ಮುಂಚಿತವಾಗಿ ಅರ್ಜಿ ಹಾಕಿದ್ದಾರೆ ಈ ವೇಳೆಗೆ ಮಾನ್ಯತೆ ಸಿಗುತ್ತಿತ್ತು. ಆದರೆ, ಈಗ ಸದ್ಯಕ್ಕಂತೂ ಹೊಸ ಪಕ್ಷ, ಹೆಸರು, ಲಾಂಛನಕ್ಕೆ ಮಾನ್ಯತೆ ಸಿಗಲು ಇನ್ನೂ ಕೆಲ ಕಾಲ ಕಾಯಬೇಕಾಗುತ್ತದೆ.

ಪವನ್ ಕಲ್ಯಾಣ್ ಜನಸೇನಾ ಫೇಸ್ ಬುಕ್

ಪವನ್ ಕಲ್ಯಾಣ್ ಜನಸೇನಾ ಫೇಸ್ ಬುಕ್

ಪವನ್ ಕಲ್ಯಾಣ್ ಅವರ ಹೊಸ ಪಕ್ಷ ಜನಸೇನಾ ಫೇಸ್ ಬುಕ್ ಎರಡು ಖಾತೆಗಳನ್ನು ಹೊಂದಿದೆ. ಜತೆಗೆ ಎನ್ನಾರೈಗಳಿಗೆ ಪ್ರತ್ಯೇಕ ಪುಟವಿದೆ. ಎಲ್ಲದರಲ್ಲೂ ಪಕ್ಷದ ಲಾಂಚನ 'ಪವರ್ ಗಾಗಿ ಅಲ್ಲ, ಪ್ರಶ್ನೆಮಾಡಲು' ಎಂಬ ಅಡಿಬರಹವಿದೆ. ಎಲ್ಲಾ ಪುಟಗಳು ಎರಡು ದಿನಗಳಲ್ಲೇ 10, 20, 30 ಸಾವಿರ ಲೈಕ್ ಗಳನ್ನು ದಾಟಿದೆ. ಪುಟಗಳಲ್ಲಿ ಪವನ್ ಕಲ್ಯಾಣ್ ಸುದ್ದಿಗೋಷ್ಠಿ ವಿವರಗಳನ್ನು, ಜನಸೇನ ಪಕ್ಷದ ಧ್ಯೇಯ ಗೀತೆಯ ಲಿಂಕ್ ಪ್ರಚಾರ ಮಾಡಲಾಗಿದೆ.

ಪವನ್ ಕಲ್ಯಾಣ್ ನಮ್ಮ ಚೇ ಗುವೆರಾ ಅಂತೆ !

ಪವನ್ ಕಲ್ಯಾಣ್ ನಮ್ಮ ಚೇ ಗುವೆರಾ ಅಂತೆ !

ಪವನ್ ಕಲ್ಯಾಣ್ ನಮ್ಮ ಚೇ ಗುವೆರಾ ಅಂತೆ ! ಹೀಗೆಂದು ಪವರ್ ಸ್ಟಾರ್ ಹುಚ್ಚು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಅಮೆರಿಕದ ವಿರುದ್ಧ ಸೆಟೆದು ನಿಂತಿದ್ದ 1928-1967 ಅವಧಿಯಲ್ಲಿದ್ದ ಮಾರ್ಕ್ಸ್ ವಾದಿ ಕ್ರಾಂತಿಕಾರಿ ಚೇ ಗುವೆರಾ ಸಿದ್ಧಾಂತಗಳು ಪವನ್ ಅವರ ಅನೇಕ ಸಿನಿಮಾಗಳಲ್ಲಿ ಬಳಕೆ ಮಾಡಲಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಎಲೆಕ್ಷನ್ ನಿಲ್ಲಾಕಾಗಲ್ಲ, ಮತ್ತೇನು ಮಾಡ್ತಾರೆ

ಎಲೆಕ್ಷನ್ ನಿಲ್ಲಾಕಾಗಲ್ಲ, ಮತ್ತೇನು ಮಾಡ್ತಾರೆ

ಪವನ್ ಕಲ್ಯಾಣ್ ಅವರ ಜನಸೇನ ಪಕ್ಷಕ್ಕೆ ಚುನಾವಣಾ ಆಯೋಗದ ಮಾನ್ಯತೆ ತಕ್ಷಣಕ್ಕೆ ಸಿಗದಿರುವ ಕಾರಣ ಹೊಸ ಪಕ್ಷದ ಅಡಿಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ, ಪವನ್ ಕಲ್ಯಾಣ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು. ಆದರೆ, ಪವನ್ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಲಭ್ಯ ಮಾಹಿತಿಯಂತೆ ಸುಮಾರು 40 ಶಾಸಕರು ಹಾಗೂ 7 ಸಂಸದರು ಈಗಾಗಲೇ ಜನಸೇನದತ್ತ ಮುಖ ಮಾಡಿದ್ದು, ಇವರ ಪರ ಪ್ರಚಾರ ಕೈಗೊಳ್ಳುವುದು ಪವನ್ ಅವರ ಮೊದಲ ಗುರಿ ಎನ್ನಲಾಗಿದೆ. ಯಾವುದಕ್ಕೂ ಸಂಜೆ ತನಕ ಕಾದು ನೋಡೋಣ..

English summary
Power Star Pawan Kalyan's political entry and his new outfit Jana Sena Party have created lot of confusion among the Mega family fans, but none from the family made an attempt to clear the air. A day after the announcement of the party, Chiranjeevi's brother Nagababu has finally broken his silence and released his video interview on YouTube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X