• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಪ್ಪಿನ ಅರಿವಾಗಿ ಅಮೃತಾ ಕ್ಷಮೆ ಕೇಳಲು ಬಯಸಿದ್ದ ಮಾರುತಿರಾವ್!

|

ಹೈದರಾಬಾದ್, ಮಾರ್ಚ್ 11 : ಪುತ್ರಿ ದಲಿತ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ ಅಳಿಯನನ್ನು ಕೊಲ್ಲಿಸಿದ್ದ ಮಾರುತಿರಾವ್ ಜೈಲು ಸೇರಿದ ಮೇಲೆ ಬದಲಾಗಿದ್ದರು. ಪುತ್ರಿಯ ಕ್ಷಮೆ ಕೇಳಲು ಮುಂದಾಗಿದ್ದಾರೆ. ಆದರೆ, ಅಸಹಾಯಕರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

   ಜಯಲಲಿತಾರವರು ಯಾವತ್ತೂ ಗರ್ಭಿಣಿಯಾಗಿರಲಿಲ್ಲ | ತಮಿಳುನಾಡು ಸರ್ಕಾರ ಹೇಳಿಕೆ | Oneindia Kannada

   ಪ್ರಣಯ್ ಪೆರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಖೈರತಾಬಾದ್‌ ಆರ್ಯವೈಶ್ಯ ಭವನದಲ್ಲಿ ಶನಿವಾರ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಶವ ಪತ್ತೆಯಾಗಿತ್ತು.

   ಮಾರುತಿರಾವ್ ಆತ್ಮಹತ್ಯೆ; 200 ಕೋಟಿ ಆಸ್ತಿ ವಿವಾದ ಕಾರಣ?

   ಮಾರುತಿರಾವ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಪ್ರಣಯ್ ಪೆರುಮಲ್ಲಾ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ 10 ದಿನದಲ್ಲಿ ಆರಂಭವಾಗಬೇಕಿತ್ತು. ಈ ಪ್ರಕರಣದಲ್ಲಿ ಶಿಕ್ಷೆಯಾಗುವುದು ಖಚಿತ ಎಂದು ತಿಳಿದ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

   ಮಾರುತಿರಾವ್ ಡೆತ್ ನೋಟ್‌; ಅಮೃತಾಗೆ ಭಾವನಾತ್ಮಕ ಸಂದೇಶ

   ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಮಾರುತಿರಾವ್‌ಗೆ ನೆಮ್ಮದಿ ಇರಲಿಲ್ಲ. ಪ್ರಣಯ್ ಪೆರುಮಲ್ಲಾ ವಿವಾಹ, ಹತ್ಯೆ ಪ್ರಕರಣದ ಬಳಿಕ ಮಗಳು ಅಮೃತಾ ಜೊತೆಗಿನ ಸಂಬಂಧ ಹಳಸಿತ್ತು. ಆದರೆ, ತಂದೆ ತನ್ನ ತಪ್ಪನ್ನು ಒಪ್ಪಿಕೊಂಡು ಮಗಳ ಬಳಿ ಕ್ಷಮೆ ಕೇಳಲು ಮುಂದಾಗಿದ್ದರು.

   ಮರ್ಯಾದಾ ಹತ್ಯೆಗೆ ತಿರುವು; ಅಮೃತಾ ತಂದೆ ಆತ್ಮಹತ್ಯೆ

   ತಾನು ಮಾಡಿದ ತಪ್ಪಿನ ಅರಿವಾಗಿತ್ತು

   ತಾನು ಮಾಡಿದ ತಪ್ಪಿನ ಅರಿವಾಗಿತ್ತು

   2018ರ ಸೆಪ್ಟೆಂಬರ್ 14ರಂದು ಮಾರುತಿರಾವ್ ಅಳಿಯ ಪ್ರಣಯ್ ಪೆರುಮಲ್ಲಾ ಹತ್ಯೆ ನಡೆದಿತ್ತು. ಕೆಲವೇ ದಿನಗಳಲ್ಲಿ ಇದು ಮರ್ಯಾದಾ ಹತ್ಯೆ, ಹತ್ಯೆಗೆ ಸುಪಾರಿ ಕೊಟ್ಟಿದ್ದು ಮಾರುತಿರಾವ್ ಎಂಬುದು ಬಯಲಾಗಿತ್ತು. ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಜೈಲು ಸೇರಿದ ಮೇಲೆ ಅವರಿಗೆ ತಪ್ಪಿನ ಅರಿವಾಗಿತ್ತು. ಮಗಳ ಬಳಿ ಕ್ಷಮೆ ಕೇಳಲು ಮುಂದಾಗಿದ್ದರು.

   ಮಧ್ಯವರ್ತಿಗಳನ್ನು ಕಳಿಸಿದ್ದರು

   ಮಧ್ಯವರ್ತಿಗಳನ್ನು ಕಳಿಸಿದ್ದರು

   ಮಾಡಿದ ಎಲ್ಲಾ ತಪ್ಪಿನ ಅರಿವಾಗಿದ್ದ ಮಾರುತಿರಾವ್ ಪುತ್ರಿ ಅಮೃತಾ ಬಳಿ ಕ್ಷಮೆ ಕೇಳಲು ಮುಂದಾಗಿದ್ದರು. ಜೈಲಿನಲ್ಲಿದ್ದಾಗಲೇ ಇದಕ್ಕಾಗಿ ಅಮೃತಾ ಜೊತೆ ಮಾತನಾಡಲು ಮಧ್ಯವರ್ತಿಗಳನ್ನು ಕಳಿಸಿದ್ದರು. ಆದರೆ, ಅಮೃತಾ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಮಾರುತಿರಾವ್ ಇದರಿಂದಾಗಿ ನೊಂದು ಹೋಗಿದ್ದರು.

   ಶಿಕ್ಷೆಯ ಭಯದಿಂದ ಆತ್ಮಹತ್ಯೆ

   ಶಿಕ್ಷೆಯ ಭಯದಿಂದ ಆತ್ಮಹತ್ಯೆ

   ಪ್ರಣಯ್ ಪೆರುಮಲ್ಲಾ ಹತ್ಯೆ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ 10 ದಿನದಲ್ಲಿ ಆರಂಭವಾಗುತ್ತಿತ್ತು. ಈ ಪ್ರಕರಣದಲ್ಲಿ ಶಿಕ್ಷೆಯಾಗುವುದು ಖಚಿತ ಎಂದು ತಿಳಿದಿದ್ದ ಮಾರುತಿರಾವ್ ಅಸಹಾಯಕರಾಗಿ ನೊಂದು ಹೋಗಿದ್ದರು. ಪುತ್ರಿಯ ಕಡೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದರು.

   ಆಸ್ತಿಯನ್ನು ಹಂಚಲು ಬಯಸಿದ್ದರು

   ಆಸ್ತಿಯನ್ನು ಹಂಚಲು ಬಯಸಿದ್ದರು

   ಆಂಧ್ರಪ್ರದೇಶದ ವಿರ್ಯಾಲಗೂಡು ನಿವಾಸಿ ಮಾರುತಿರಾವ್ ಹೈದರಾಬಾದ್ ಮತ್ತು ವಿರ್ಯಾಲಗೂಡು ಸುತ್ತ-ಮುತ್ತ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದರು. ತಮ್ಮ ಆಸ್ತಿಯನ್ನು ಪತ್ನಿ ಗಿರಿಜಾ ಮತ್ತು ಪುತ್ರಿ ಅಮೃತಾಗೆ ಸಮವಾಗಿ ಹಂಚಲು ಅವರು ಬಯಸಿದ್ದರು. ಆದರೆ, ಪ್ರಣಯ್ ಹತ್ಯೆ ಬಳಿಕ ಅಮೃತಾ ತಂದೆ ಮನೆ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದರು.

   ಭಾವನಾತ್ಮಕ ಸಂದೇಶ ಬರೆದಿಟ್ಟಿದ್ದ ತಂದೆ

   ಭಾವನಾತ್ಮಕ ಸಂದೇಶ ಬರೆದಿಟ್ಟಿದ್ದ ತಂದೆ

   ಆರ್ಯವೈಶ್ಯ ಭವನದಲ್ಲಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಪೊಲೀಸರಿಗೆ ಡೆತ್ ನೋಸ್ ಸಿಕ್ಕಿತ್ತು. ಅದರಲ್ಲಿನ ಬರಹದಲ್ಲಿ ಪತ್ನಿ ಗಿರಿಜಾ ಬಳಿ ಕ್ಷಮೆ ಕೋರಿದ್ದ ಮಾರುತಿರಾವ್ ತಾಯಿಯ ಬಳಿ ಹೋಗುವಂತೆ ಪುತ್ರಿ ಅಮೃತಾಳಿಗೆ ಸಂದೇಶ ನೀಡಿದ್ದರು. ಆದರೆ, ಅಮೃತಾ ತಂದೆಯ ಶವದ ಅಂತಿಮ ದರ್ಶನಕ್ಕೆ ಬಂದಿದ್ದಾಗ ಸಂಬಂಧಿಕರು ಅಡ್ಡಿಪಡಿಸಿದ್ದರು. ಇದರಿಂದಾಗಿ ದರ್ಶನ ಸಿಗದೇ ಅಮೃತಾ ಮಗುವಿನ ಜೊತೆ ವಾಪಸ್ ಹೋಗಿದ್ದರು.

   English summary
   Amrutha father Maruthi Rao made unsuccessful attempts to compromise with his daughter through some persons from jail. But there was no positive response from his daughter side. Maruthi Rao committed suicide on March 7th, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more