ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಮಂಗಳಯಾನಕ್ಕೆ ಕ್ಷಣಗಣನೆ ಆರಂಭ

|
Google Oneindia Kannada News

ಹೈದರಾಬಾದ್, ನ.3 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಹು ನಿರೀಕ್ಷಿತ, ಬಹುಕೋಟಿ ವೆಚ್ಚದ ಮಂಗಳಯಾನಕ್ಕೆ ಕ್ಷಣಗಣನೆ ಆರಂಭವಾಗಿದೆ, ನವೆಂಬರ್ 5ರ ಮಂಗಳವಾರ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹ ಉಡಾವಣೆಯಾಗಲಿದೆ. ಭಾನುವಾರ ಉಪಗ್ರಹ ಉಡಾವಣೆಯ ಕೌಂಟ್ ಡೌನ್ ಪ್ರಾರಂಭವಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮಿಷನ್ ಮಾರ್ಸ್‌ಗೆ ಸುಮಾರು 430 ಕೋಟಿ ವೆಚ್ಚವಾಗಿದ್ದು, ಮಂಗಳವಾರ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.

ISRO

ಮಂಗಳಯಾನ ಯೋಜನೆಯ ಸಿದ್ದತೆ ಪೂರ್ಣಗೊಂಡಿದ್ದು, ಮಂಗಳವಾರ ಮಿಷನ್ ಮಾರ್ಸ್ ಉಪಗ್ರಹವನ್ನು ಹೊತ್ತ ಉಪಗ್ರಹ ಉಡಾವಣಾ ವಾಹಕ ಪಿಎಸ್‌ಎಲ್‌ವಿ-ಸಿ25 ಶ್ರೀಹರಿಕೋಟಾದಿಂದ ಮಂಗಳನಲ್ಲಿಗೆ ಹಾರಲಿದೆ. ನ.5ರ ಮಂಗಳವಾರ ಮಧ್ಯಾಹ್ನ 2.38ಕ್ಕೆ ಪಿಎಸ್‌ಎಲ್‌ವಿ-ಸಿ25ಯನ್ನು ಉಡಾಯಿಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಈ ಹಿಂದೆ ಚಂದ್ರಯಾನ ಯೋಜನೆ ಕೈಗೊಂಡಿದ್ದ ಇಸ್ರೋ ಚಂದ್ರನ ಮೇಲ್ಮೈ ಕುರಿತು ಸುದೀರ್ಘ ಅಧ್ಯಯನ ನಡೆಸಿತ್ತು. ಅದರಂತೆಯೇ ಮಂಗಳ ಗ್ರಹದ ಕುರಿತು ಸಂಶೋಧನೆ ನಡೆಸಲು ಮುಂದಾಗಿದ್ದ ಇಸ್ರೋ, ಇದಕ್ಕಾಗಿ ಮಿಷನ್ ಮಾರ್ಸ್ ಯೋಜನೆಯನ್ನು ಸಿದ್ಧಪಡಿಸಿತ್ತು. ಉಡಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಕಾರ್ಯಗಳು ಪೂರ್ಣಗೊಂಡಿದ್ದು, ಉಪಗ್ರಹದ ಉಡಾವಣೆಗೆ ಸಿದ್ಧವಾಗಿದೆ.

ಶುಭ ಕೋರಿದ ನಾಸಾ : ಅಮೆರಿಕಾದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾ ಇಸ್ರೋದ ಮಂಗಳಯಾನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದೆ. ನೀವು ಎಲ್ಲಾ ಸಿದ್ಧತೆ ಪೂರ್ಣಗೊಳಿಸಿದ್ದೀರಿ, ಕೊನೆಯ ಪ್ರತಿಕ್ಷಣವೂ ಅತಿ ಮುಖ್ಯ. ನಿಮ್ಮ ಯೋಜನೆ ಯಶಸ್ವಿಯಾಗಲಿ ಎಂದು ನಾಸಾ ತನ್ನ ಶುಭಾಶಯ ಸಂದೇಶಲ್ಲಿ ತಿಳಿಸಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

English summary
The 56 and-a-half hour countdown for the launch of India’s first space mission to Mars, slated for 5 November, commenced on Sunday. Nov 3 at the Satish Dhawan Space Center in Sriharikota. The 56 hours and 30 minutes countdown started as per schedule at 06.08 AM. It is proceeding smoothly said Indian Space Research Organization(Isro).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X