ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ಲೀಟರ್ ಮೇಲೆ 30ml ಕನ್ನ, ಐನಾತಿ 33 ಪೆಟ್ರೋಲ್ ಬಂಕ್ ಬಂದ್!

|
Google Oneindia Kannada News

ಹೈದರಾಬಾದ್, ಸೆ. 6: ತೆಲಂಗಾಣ ಹಾಗೂ ಆಂಧ್ರ ಪ್ರದೇಶದ 33 ಪೆಟ್ರೋಲ್ ಬಂಕ್ ಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಈ ಇಂಧನ ಕೇಂದ್ರಗಳಲ್ಲಿ ಇ-ಚಿಪ್ ಬಳಸಿಕೊಂಡು ಗ್ರಾಹಕರಿಗೆ ಮೋಸ ಮಾಡಲಾಗುತ್ತಿತ್ತು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಹೇಳಿದ್ದಾರೆ.

Recommended Video

ಹೇಳೋರಿಲ್ಲ ಕೇಳೋರಿಲ್ಲ ಸುವರ್ಣಸೌಧವನ್ನ!! ಪಾಚಿ ಕಟ್ಟಿ ಅದ್ವಾನವಾಗಿ ಹೋಗಿದೆ | Oneindia Kannada

33 ಪೆಟ್ರೋಲ್​ ಬಂಕ್​ಗಳನ್ನು ಸೈಬರಬಾದ್ ಪೊಲೀಸರು ಜಪ್ತಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಇಂಟಿಗ್ರೇಟೆಡ್ ಚಿಪ್, ತಂತ್ರಾಂಶ ಬಳಸಿಕೊಂಡು ಪೆಟ್ರೋಲ್​ ಬಂಕ್​ನಲ್ಲಿ ಇಂಧನ ತುಂಬುವಾಗ ಮೀಟರ್​ನಲ್ಲಿ ಸರಿಯಾದ ಲೆಕ್ಕ ತೋರಿಸಿ, ಗ್ರಾಹಕರ ವಾಹನಗಳಿಗೆ ಕಡಿಮೆ ಇಂಧನ ಭರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದಲ್ಲಿ ಎಷ್ಟಿದೆ ನೋಡಿ?ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದಲ್ಲಿ ಎಷ್ಟಿದೆ ನೋಡಿ?

ಎಲೆಕ್ಟ್ರಾನಿಕ್ಸ್​ ಚಿಪ್​ ಬಳಸುತ್ತಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್ ಬಂಧನದ ಬಳಿಕ ಈ ಪೆಟ್ರೋಲ್ ಕದಿಯುವ ಕತೆ ತಿಳಿದು ಬಂದಿದೆ. ಪ್ರತಿ 1000 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಪೂರೈಕೆಯಲ್ಲಿ 970 ಎಂಎಲ್ ಮಾತ್ರ ಗ್ರಾಹಕರಿಗೆ ತಲುಪುತ್ತಿತ್ತು ಎಂದು ಪತ್ತೆ ಹಚ್ಚಲಾಗಿದೆ. ಸೀಜ್ ಆಗಿರುವ ಪೆಟ್ರೋಲ್ ಪಂಪ್ ಗಳ ಪೈಕಿ 17 ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಆಂಧ್ರಪ್ರದೇಶ), 5 ತೆಲಂಗಾಣಕ್ಕೆ ಸೇರಿವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ(ಬಿಪಿಸಿಎಲ್) ನ 9, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ(ಎಚ್ ಪಿಸಿಎಲ್) 2 ಹಾಗೂ ಎಸ್ಸಾರ್ ಕಂಪನಿಯ 2 ಬಂಕ್ ಸೇರಿವೆ.

Major Bust: 33 fuel stations in Telangana and Andhra Pradesh

ಸುಮಾರು 9 ಪೆಟ್ರೋಲ್ ಬಂಕ್ ಮಾಲೀಕರನ್ನು ಈಗಾಗಲೇ ಬಂಧಿಸಲಾಗಿದೆ. ಎರಡು ರಾಜ್ಯದ ಪೊಲೀಸರು ಮತ್ತು ಕಾನೂನು ಮಾಪನಶಾಸ್ತ್ರ ವಿಭಾಗದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆ ಇದಾಗಿತ್ತು.

ಸೈಬರಾಬಾದ್, ನಂದಿಗಾಮ ಪೊಲೀಸರು ಬಂಧಿಸಿರುವ ಆರೋಪಿಗಳಿಂದ 14 ಇಂಟಿಗ್ರೇಟೆಡ್​ ಚಿಪ್ಸ್​, 8 ಡಿಸ್​ಪ್ಲೇಗಳು, ಮೂರು ಜಿಬಿಆರ್​ ಕೇಬಲ್​ಗಳು, ಒಂದು ಮದರ್​ ಬೋರ್ಡ್​ ಮತ್ತು ಒಂದು ಹುಂಡೈ ಐ20 ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಆಂಧ್ರ ಪ್ರದೇಶದ ಎಲೂರು ಪಟ್ಟಣದ ಸುಭಾನಿ ಬಾಬಾ, ಮದಸುಗುರಿ ಶಂಕರ ಮತ್ತು ಮಲ್ಲೇಶ್ವರ ರಾವ್​ ಎಂದು ಗುರುತಿಸಲಾಗಿದೆ.

ಸುಮಾರು 80, 000 ರು ನಿಂದ 1,20,000 ರು ನೀಡಿ ಇ-ಚಿಪ್ ಅಳವಡಿಸಿಕೊಂಡು ಕೋಟ್ಯಂತರ ರುಪಾಯಿ ಮೋಸ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

English summary
In a major bust, 33 petrol pumps in Telugu states shutdown. Fuel stations in Telangana and Andhra Pradesh allegedly cheated customers by using e-chips to give less fuel said Hyderabad Police Commissioner VC Sajjanar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X