ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಸ್ಪರ್ಧಿಸದಿರಲು ನಾಯ್ಡು ಅವರ ಟಿಡಿಪಿ ನಿರ್ಧಾರ!

|
Google Oneindia Kannada News

ಹೈದರಾಬಾದ್, ಮಾರ್ಚ್ 25: ತೆಲಂಗಾಣದಲ್ಲಿ ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸದಿರಲು ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಿರ್ಧರಿಸಿದೆ. 1982ರ ನಂತರ ಇದೇ ಮೊದಲ ಬಾರಿಗೆ ತೆಲಂಗಾಣ ಪ್ರಾಂತ್ಯದಲ್ಲಿ ಟಿಡಿಪಿ ಸ್ಪರ್ಧಿಸುತ್ತಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ, ತೆಲಂಗಾಣದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಹಾಗೂ ಭಾರತೀಯ ಜನತಾ ಪಕ್ಷ(ಬಿಜೆಪಿ) ಸಂಭಾವ್ಯ ಮೈತ್ರಿಯಿಂದ ಟಿಡಿಪಿಗೆ ಪ್ರತಿರೋಧ ಹೆಚ್ಚಿದೆ ಎಂದು ಟಿಡಿಪಿ ಮೂಲಗಳೇ ಸ್ಪಷ್ಟಪಡಿಸಿವೆ.

ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?

ಇತ್ತೀಚೆಗೆ ಟಿಡಿಪಿ ತೊರೆದು ಟಿಆರ್ ಎಸ್ ಸೇರಿದ್ದಾರೆ. ಇದರಿಂದಾಗಿ ತೆಲಂಗಾಣದಲ್ಲಿ ಚುನಾವಣೆ ನಿಂತರೂ ಹೆಚ್ಚಿನ ಪರಿಣಾಮ ಬೀರಲ್ಲ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.

Lok Sabha polls 2019: TDP will not contest in Telangana

ಟಿಡಿಪಿ ಪಾಲಿಟ್ ಬ್ಯೂರೋ ಸದಸ್ಯ, ಪಕ್ಷದ ಶ್ರೀಮಂತ ಮುಖಂಡ ನಮಾ ನಾಗೇಶ್ವರ ರಾವ್ ಅವರು ಇತ್ತೀಚೆಗೆ ಟಿಆರ್ ಎಸ್ ಸೇರಿದವರಾಗಿದ್ದಾರೆ. ಖಮ್ಮಂ ಕ್ಷೇತ್ರದ ಅಭ್ಯರ್ಥಿಯಾಗುವ ನಿರೀಕ್ಷೆಯಿತ್ತು.

ಆಂಧ್ರ: ಅಭ್ಯರ್ಥಿ ಪಟ್ಟಿ ಬಿಡುಗಡೆ, ಸಿಎಂ ನಾಯ್ಡು ಮತ್ತು ಮಗ ಸ್ಪರ್ಧೆಆಂಧ್ರ: ಅಭ್ಯರ್ಥಿ ಪಟ್ಟಿ ಬಿಡುಗಡೆ, ಸಿಎಂ ನಾಯ್ಡು ಮತ್ತು ಮಗ ಸ್ಪರ್ಧೆ

ಎನ್ಡಿಎ ಮೈತ್ರಿ ಮುರಿದುಕೊಂಡ ಬಳಿಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರುತ್ತಾ ಬಂದಿರುವ ಚಂದ್ರಬಾಬು ನಾಯ್ಡು ಅವರು, ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಕಾಂಗ್ರೆಸ್, ಸಿಪಿಐ, ಟಿಜೆಎಸ್ ಮೈತ್ರಿಯೊಂದಿಗೆ ಸ್ಪರ್ಧಿಸಿದ್ದ ಟಿಡಿಪಿ ಕೇವಲ 2 ಸ್ಥಾನ ಹಾಗೂ ಕಾಂಗ್ರೆಸ್ 19 ಸ್ಥಾನಗಳನ್ನು ಗಳಿಸಿತ್ತು.

English summary
The Telugu Desam Party (TDP) on Monday decided not to contest the Lok Sabha elections in Telangana, a first since its formation in 1982.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X