ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಗೌಪ್ಯ ರಕ್ಷಣಾ ಮಾಹಿತಿ ಸೋರಿಕೆ: ಹೈದರಾಬಾದ್‌ನಲ್ಲಿ ವ್ಯಕ್ತಿ ಬಂಧನ

|
Google Oneindia Kannada News

ಹೈದರಾಬಾದ್‌, ಜೂನ್ 18: ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಗೆ ಭಾರತದ ರಕ್ಷಣೆಗೆ ಸಂಬಂಧಪಟ್ಟ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಹೈದರಾಬಾದ್‌ನಲ್ಲಿರುವ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಲ್ಯಾಬೊರೇಟರಿಯ (ಡಿಆರ್‌ಡಿಎಲ್) ಗುತ್ತಿಗೆ ಆಧಾರಿತ ಉದ್ಯೋಗಿ ಡಿಆರ್‌ಡಿಎಲ್-ಆರ್‌ಸಿಐ ಕಾಂಪ್ಲೆಕ್ಸ್‌ನ ಅತ್ಯಂತ ಸುರಕ್ಷಿತ ಮತ್ತು ಗೌಪ್ಯ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಶಂಕಿತ ಐಎಸ್‌ಐ ಮಹಿಳಾ ಹ್ಯಾಂಡ್ಲರ್‌ಗೆ ಹಂಚಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರಾಚಕೊಂಡ ಪೊಲೀಸರು ತಿಳಿಸಿದ್ದಾರೆ.

ಮತ್ತೊಮ್ಮೆ ಬೂದು ಪಟ್ಟಿಯಲ್ಲೇ ಉಳಿದ ಪಾಕಿಸ್ತಾನಮತ್ತೊಮ್ಮೆ ಬೂದು ಪಟ್ಟಿಯಲ್ಲೇ ಉಳಿದ ಪಾಕಿಸ್ತಾನ

ಆರೋಪಿಯನ್ನು ದುಕ್ಕ ಮಲ್ಲಿಕಾರ್ಜುನ ರೆಡ್ಡಿ (29) ಅಲಿಯಾಸ್ ಅರ್ಜುನ್ ಬಿಟ್ಟು ಎಂದು ಗುರುತಿಸಲಾಗಿದೆ. ವಿಶೇಷ ಕಾರ್ಯಾಚರಣೆ ತಂಡ, ಎಲ್‌ಬಿ ನಗರ ವಲಯ, ರಾಚಕೊಂಡ, ಹೈದರಾಬಾದ್ ಮತ್ತು ಬಾಲಾಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.

"ಜೂನ್ 17, 2022 ರಂದು, ನಂಬಲರ್ಹ ಮಾಹಿತಿಯ ಮೇರೆಗೆ, ವಿಶೇಷ ಕಾರ್ಯಾಚರಣೆ ತಂಡ, ಎಲ್‌ಬಿ ನಗರ ವಲಯ, ರಾಚಕೊಂಡ, ಬಾಲಾಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ (ಡಿಆರ್‌ಡಿಎಲ್) ಗುತ್ತಿಗೆ ಉದ್ಯೋಗಿಯನ್ನು ಬಂಧಿಸಿದ್ದಾರೆ. ಡಿಆರ್‌ಡಿಎಲ್-ಆರ್‌ಸಿಐ ಕಾಂಪ್ಲೆಕ್ಸ್‌ನ ಗೌಪ್ಯ ಮಾಹಿತಿಯು ಸಾಮಾಜಿಕ ಮಾಧ್ಯಮದ ಮೂಲಕ ಶಂಕಿತ ಐಎಸ್‌ಐ ಮಹಿಳಾ ಹ್ಯಾಂಡ್ಲರ್‌ಗೆ ರಾಷ್ಟ್ರೀಯ ಸಮಗ್ರತೆ ಮತ್ತು ಭದ್ರತೆಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ," ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಡಿಮೆ ಚಹಾ ಕುಡಿಯಿರಿ, ಹಣ ಉಳಿಸಿ: ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪಾಕಿಸ್ತಾನ ಸರ್ಕಾರದ ಮನವಿಕಡಿಮೆ ಚಹಾ ಕುಡಿಯಿರಿ, ಹಣ ಉಳಿಸಿ: ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪಾಕಿಸ್ತಾನ ಸರ್ಕಾರದ ಮನವಿ

ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ

ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ

ಶಂಕಿತ ವ್ಯಕ್ತಿಯು ಡಿಆರ್‌ಡಿಎಲ್‌ನೊಂದಿಗಿನ ತನ್ನ ಕೆಲಸದ ಬಗ್ಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ ಮತ್ತು ಮಾರ್ಚ್ 2020 ರಲ್ಲಿ, ನತಾಶಾ ರಾವ್ ಎಂದು ಹೇಳಿಕೊಳ್ಳುವ ಮಹಿಳೆ ಅವನನ್ನು ಸಂಪರ್ಕಿಸಿದ್ದಾಳೆ.

ಆಕೆ ಆರೋಪಿ ರೆಡ್ಡಿ ಜೊತೆ ಮಾತನಾಡುವಾಗ ಯುಕೆ (UK) ಡಿಫೆನ್ಸ್ ಜರ್ನಲ್‌ನ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾಳೆ. ಯುಕೆ (UK) ಗೆ ಸ್ಥಳಾಂತರಗೊಳ್ಳುವ ಮೊದಲು ಅವಳ ತಂದೆ ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾಳೆ.

ಮಹಿಳೆ ಜೊತೆ ಹಲವು ಗೌಪ್ಯ ಮಾಹಿತಿ ಹಂಚಿಕೆ

ಮಹಿಳೆ ಜೊತೆ ಹಲವು ಗೌಪ್ಯ ಮಾಹಿತಿ ಹಂಚಿಕೆ

ನತಾಶಾ ರಾವ್ ಅಲಿಯಾಸ್ ಸಿಮ್ರಾನ್ ಚೋಪ್ರಾ ಅಲಿಯಾಸ್ ಒಮಿಶಾ ಅಡ್ಡಿ ಜೊತೆ ಮಾತನಾಡುವ ಸಮಯದಲ್ಲಿ, ಮಲ್ಲಿಕಾರ್ಜುನ ರೆಡ್ಡಿ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಮತ್ತು ಅವನ ಬ್ಯಾಂಕ್ ಖಾತೆ ವಿವರಗಳನ್ನು ಸಹ ಹಂಚಿಕೊಂಡಿದ್ದಾನೆ.

ಕಳೆದ ವರ್ಷ ಡಿಸೆಂಬರ್ ವರೆಗೂ ಆಕೆಯೊಂದಿಗೆ ಬಂಧಿತ ಆರೋಪಿ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಬಂಧಿತನಿಂದ ಎರಡು ಮೊಬೈಲ್, ಸಿಮ್ ಕಾರ್ಡ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.

ಎಂಬಿಎ ಪದವೀಧರ ಮಲ್ಲಿಕಾರ್ಜುನ ರೆಡ್ಡಿ

ಎಂಬಿಎ ಪದವೀಧರ ಮಲ್ಲಿಕಾರ್ಜುನ ರೆಡ್ಡಿ

ಪೊಲೀಸರ ಪ್ರಕಾರ, ಆರೋಪಿ ರೆಡ್ಡಿ ವಿಶಾಖಪಟ್ಟಣಂನ ನೇವಲ್ ಆರ್ಮಮೆಂಟ್ ಡಿಪೋ (NAD) ಕ್ವಾರ್ಟರ್ಸ್‌ನಲ್ಲಿ ಹುಟ್ಟಿ ಬೆಳೆದಿದ್ದಾನೆ. ಅವನ ತಂದೆ ನೇವಲ್ ಆರ್ಮಮೆಂಟ್ ಡಿಪೋ (NAD) ನಲ್ಲಿ ಚಾರ್ಜ್‌ಮೆನ್ ಸಿವಿಲಿಯನ್ ಆಗಿ ಕೆಲಸ ಮಾಡಿ 2014 ರಲ್ಲಿ ನಿವೃತ್ತರಾಗಿದ್ದಾರೆ. ಆರೋಪಿ ವಿಶಾಖಪಟ್ಟಣಂನಲ್ಲಿ ತಮ್ಮ B.Tech (ಮೆಕ್ಯಾನಿಕಲ್) ಮುಗಿಸಿದ್ದು ನಂತರ 2020 ರಲ್ಲಿ ಹೈದರಾಬಾದ್‌ನಲ್ಲಿ ಎಂಬಿಎ (ಮಾರ್ಕೆಟಿಂಗ್) ಪದವಿ ಪಡೆದಿದ್ದಾನೆ.

ಮಲ್ಲಿಕಾರ್ಜುನ ರೆಡ್ಡಿ ಬೆಂಗಳೂರಿನ ಮೂಲದ ಕಂಪನಿಯ ಪಟಂಚೇರು ಶಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಜನವರಿ 2020 ರವರೆಗೆ ಡಿಆರ್ ಡಿಎಲ್ (DRDL)ನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ್ದಾನೆ. ನಂತರ, ಆತ ನೇರವಾಗಿ ಡಿಆರ್ ಡಿಎಲ್ (DRDL) ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಭಾರತೀಯ ಪುನರ್ವಸತಿ ಮಂಡಳಿ (RCI) ಬಾಲಾಪುರದ ಯೋಜನೆಗೆ ಗುತ್ತಿಗೆ ಉದ್ಯೋಗಿಯಾಗಿ ಸೇರಿಕೊಂಡಿದ್ದಾನೆ.

ಹಲವು ಕಾಯಿದೆ ಅಡಿ ಪ್ರಕರಣ

ಹಲವು ಕಾಯಿದೆ ಅಡಿ ಪ್ರಕರಣ

ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 409 ಮತ್ತು ಅಧಿಕೃತ ರಹಸ್ಯ ಕಾಯಿದೆ-1923 ರ ಸೆಕ್ಷನ್ 3 (1) (C), 5 (3), 5 (1) (A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಚಕೊಂಡ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಎಂ ಭಾಗವತ್, ಹೆಚ್ಚುವರಿ ಪೊಲೀಸ್ ಕಮಿಷನರ್ ಜಿ ಸುಧೀರ್ ಬಾಬು, ಎಲ್ ಬಿ ನಗರ ಡಿಸಿಪಿ ಸನ್ಪ್ರೀತ್ ಸಿಂಗ್, ಡಿಸಿಪಿ (ಎಸ್ಒಟಿ) ಕೆ ಮುರಳೀಧರ್ ಮತ್ತು ರಾಚಕೊಂಡದ ವಿಶೇಷ ಕಾರ್ಯಾಚರಣೆ ತಂಡದ ಉಪ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ಬಂಧಿಸಲಾಗಿದೆ.

English summary
Dukka Mallikarjuna Reddy (29) alias Arjun Bittu was arrested on Friday at Hyderabad. he was contractual employee of the Defence Research and Development Laboratory (DRDL). He was arrested for allegedly sharing highly secured and confidential information about Defence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X