ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ರಾಜಭವನದ 4 ಸಿಬ್ಬಂದಿ ಸಂಸದನ ಕುಟುಂಬದ 6 ಸದಸ್ಯರಿಗೆ ಕೊರೊನಾ ಸೋಂಕು

|
Google Oneindia Kannada News

ಅಮರಾವತಿ, ಏಪ್ರಿಲ್ 27: ಆಂಧ್ರಪ್ರದೇಶದಲ್ಲೂ ಕೊರೊನಾ ಅಟ್ಟಹಾಸ ಮುಂದುವರೆದಿದೆ.

ಆಡಳಿತಾ ರೂಢ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದನ ಕುಟುಂಬದ ಆರು ಸದಸ್ಯರಿಗೆ ಮತ್ತು ರಾಜಭವನದ ಸಿಬ್ಬಂದಿಗೇ ಸೋಂಕು ಕಾಣಿಸಿಕೊಂಡಿದೆ.

 ವೈರಲ್ ವಿಡಿಯೋ: ಪ್ರಾಣಿಗಳ ಜೀವ ಉಳಿಸಿದ ಪೊಲೀಸ್ ಪೇದೆಗಳು ವೈರಲ್ ವಿಡಿಯೋ: ಪ್ರಾಣಿಗಳ ಜೀವ ಉಳಿಸಿದ ಪೊಲೀಸ್ ಪೇದೆಗಳು

ಆಂಧ್ರ ಪ್ರದೇಶ ರಾಜಭವನದ 4 ಸಿಬ್ಬಂದಿಗಳಲ್ಲೂ ಕೊರೊನಾ ವೈರಸ್ ಪಾಸಿಟಿವ್ ದೃಢವಾಗಿದೆ. ಮುಖ್ಯ ಭದ್ರತಾ ಅಧಿಕಾರಿ ಮತ್ತು ಮೂವರು ರಾಜಭವನದ ಸಹಾಯಕ ನರ್ಸ್ ಗಳಲ್ಲಿ ವೈರಸ್ ಸೋಂಕು ದೃಢವಾಗಿದೆ.

Kin Of YSRCP MP Raj Bhavan Staffers Test Positive For Coronavirus

ಆಂಧ್ರ ಪ್ರದೇಶದ ಕರ್ನೂಲು ಕ್ಷೇತ್ರದ ವೈಎಸ್ ಆರ್ ಸಿಪಿ ಸಂಸದ ಡಾ.ಸಂಜೀವ್ ಕುಮಾರ್ ಅವರ ಕುಟುಂಬದ ಆರು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಸಂಜೀವ್ ಕುಮಾರ್ ಅವರ ತಂದೆ, ಸಹೋದರ ಮತ್ತು ಇತರೆ 4 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಎಲ್ಲರನ್ನೂ ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೀಗಾಗಿ ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಇನ್ನು ಸಂಸದ ಸಂಜೀವ್ ಕುಮಾರ್ ಅವರೇ ಸ್ವತಃ ವೈದ್ಯರಾಗಿದ್ದು, ಯೂರಾಲಜಿಸ್ಟ್ ಆಗಿದ್ದಾರೆ. ಅವರ ಪತ್ನಿ ಕೂಡ ವೈದ್ಯರೇ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದಲ್ಲಿ ಮತ್ತೆ 81 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,097ಕ್ಕೆ ಏರಿಕೆಯಾಗಿದೆ.

English summary
Six members of the family of a leader of the ruling party in Andhra Pradesh have tested positive for the novel coronavirus. The total number of confirmed cases in the state is now 1,097. A total of 81 of these cases were reported on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X