ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಚಿಗುರುತ್ತಲೇ ಇದೆ ಸಂಯುಕ್ತರಂಗದ ಕನಸು!

|
Google Oneindia Kannada News

ಹೈದರಾಬಾದ್, ಜನವರಿ 16: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಹೊರಗಿಟ್ಟು ಸಂಯುಕ್ತ ಕೂಟ ರಚಿಸುವ ತನ್ನ ಕನಸಿಗೆ ತೆಲಂಗಾಣ ರಾಷ್ಟ್ರ ಪಕ್ಷ ಮತ್ತೆ ನೀರೆರೆಯಲು ಆರಂಭಿಸಿದೆ.

ಅದಕ್ಕೆ ಸಾಕ್ಷಿ ಎಂಬಂತೆ ಟಿಆರ್ ಎಸ್ ಮುಖಂಡ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆ ಟಿ ರಾಮರಾವ್ ಅವರು ವೈಎಸ್ ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಸಂಯುಕ್ತರಂಗದ ಬಗ್ಗೆ ಮಾತುಕತೆ ನಡೆಸಿದ್ದಾರೆ.

KCRs son meets Jaganmohan Reddy, talks on federal front

ಮೋದಿ-ಕೆಸಿಆರ್ ಮಾತುಕತೆ: ನಾಯ್ಡು ಮನಸಲ್ಲಿ ಕಸಿವಿಸಿ!ಮೋದಿ-ಕೆಸಿಆರ್ ಮಾತುಕತೆ: ನಾಯ್ಡು ಮನಸಲ್ಲಿ ಕಸಿವಿಸಿ!

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ.ವೈ ಎಸ್ ರಾಜಶೇಖರ ರೆಡ್ಡಿ ಅವರ ಪುತ್ರ ಜಗನ್ಮೋಹನ ರೆಡ್ಡಿ ಅವರು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ.

ಕುತೂಹಲ ಕೆರಳಿಸಿದ ಮೋದಿ-ಕೆಸಿಆರ್ ಭೇಟಿ, ಉಭಯ ನಾಯಕರು ಚರ್ಚಿಸಿದ್ದೇನು?ಕುತೂಹಲ ಕೆರಳಿಸಿದ ಮೋದಿ-ಕೆಸಿಆರ್ ಭೇಟಿ, ಉಭಯ ನಾಯಕರು ಚರ್ಚಿಸಿದ್ದೇನು?

ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಹೊರಗಿಟ್ಟು ಸಂಯುಕ್ತಕೂಟ ರಚಿಸುವ ಬಗ್ಗೆ ಈಗಾಗಲೇ ಕೆ ಚಂದ್ರಶೇಖರ ರೆಡ್ಡಿ ಅವರು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ , ಎಸ್ಪಿ, ಅಖಿಲೇಶ್ ಯಾದವ್ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್, ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಕೆ ಚಂದ್ರಶೇಖರ್ ರಾವ್ ಅವರೇ ಖುದ್ದಾಗಿ ಭೇಟಿಯಾಗಿದ್ದಾರೆ. ಮಹಾಘಟಬಂಧನದ ಗುಲ್ಲೇಳುತ್ತಿರುವ ಹೊತ್ತಲ್ಲಿ, ಸಂಯುಕ್ತ ರಂಗದ ಸುದ್ದಿ ಎಲ್ಲೆಡೆ ಹಬ್ಬುತ್ತಿರುವುದು ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

English summary
Continuing his efforts to forge a non-BJP, non-Congress front ahead of the coming Lok Sabha polls, Telangana Rashtra Samithi (TRS) Chief K Chandrasekhar Rao decided to hold talks with YSR Congress to try and rope it into the proposed coalition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X