ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಆಘಾತ,TRS ತೆಕ್ಕೆಗೆ ಕಾಂಗ್ರೆಸ್ ನಾಯಕ

|
Google Oneindia Kannada News

ಹೈದರಾಬಾದ್, ಜನವರಿ 18: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಟಿಆರ್ ಎಸ್ ಮುಖಂಡ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ವಂತೆರು ಪ್ರತಾಪ್ ರೆಡ್ಡಿ, ಇದೀಗ ಟಿಆರ್ ಎಸ್ ತೆಕ್ಕೆಗೆ ಜಾರುತ್ತಿರುವುದು ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆ ಎನ್ನಿಸಿದೆ.

ತೆಲಂಗಾಣದಲ್ಲಿ ಕಳೆದ ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ಅವರ ವಿರುದ್ಧ ಗಾಜ್ವೇಲ್ ಕ್ಷೇತ್ರದಿಂದ ಪ್ರತಾಪ್ ರೆಡ್ಡಿ ಸ್ಪರ್ಧಿಸಿದ್ದರು.

ಮೈತ್ರಿಗಾಗಿ ಕಾಲಹರಣ: ನಾಯ್ಡು-ಕೆಸಿಆರ್ ಗೆ ಬಿಜೆಪಿ ತಪರಾಕಿ ಮೈತ್ರಿಗಾಗಿ ಕಾಲಹರಣ: ನಾಯ್ಡು-ಕೆಸಿಆರ್ ಗೆ ಬಿಜೆಪಿ ತಪರಾಕಿ

2014 ರಲ್ಲೂ ಅವರು ಕೆಸಿಆರ್ ಅವರ ವಿರುದ್ಧ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆದರೆ ಆಗ ಅವರು ತೆಲುಗು ದೇಶಂ ಪಕ್ಷದಲ್ಲಿದ್ದರು. ನಂತರ ಕಾಂಗ್ರೆಸ್ ಸೇರಿ ಅದೃಷ್ಟ ಪರೀಕ್ಷೆ ಮಾಡಿದ್ದರು. ವೈರಿಯನ್ನು ಸೋಲಿಸಲಾಗದೆ ಇದೀಗ ವೈರಿ ಪಾಳೇಯದಲ್ಲೇ ಗುರುತಿಸಿಕೊಳ್ಳಲು ಅವರು ಮುಂದಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಶುಕ್ರವಾರವೇ ಅವರು ಟಿಆರ್ ಎಸ್ ಸೇರಲಿದ್ದಾರೆ.

KCRs opponent to join TRS in Telangana

ತೆಲಂಗಾಣದಲ್ಲಿ ಚಿಗುರುತ್ತಲೇ ಇದೆ ಸಂಯುಕ್ತರಂಗದ ಕನಸು! ತೆಲಂಗಾಣದಲ್ಲಿ ಚಿಗುರುತ್ತಲೇ ಇದೆ ಸಂಯುಕ್ತರಂಗದ ಕನಸು!

ಅವರ ಟಿಆರ್ ಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರೂ ಉಪಸ್ಥಿತರಿರುವ ನಿರೀಕ್ಷೆಯಿದೆ. 2014 ರಲ್ಲಿ ಗಜ್ವೆಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಟಿ ನರಸಾ ರೆಡ್ಡಿ ಸಹ ಟೀಆರ್ ಎಸ್ ಸೇರಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Former MLA and Congress leader Vanteru Pratap Reddy, who contested against Chief Minister K. Chandrasekhar Rao from Gajwel in the recent Telangana state Assembly elections, has decided to join the Telangana Rashtra Samiti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X