ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಪ್ರಧಾನಿ ಮೋದಿಯನ್ನು ಸ್ವಾಗತಿಸಿ ಈಗ ಪಂಥಾಹ್ವಾನ ನೀಡಿದ ಕೆಸಿಆರ್

|
Google Oneindia Kannada News

2016ರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಧಾನಿ ಮೋದಿಯನ್ನು ದೇಶದ ಅತ್ಯಂತ ಲೋಕಪ್ರಿಯ ನಾಯಕ ಎಂದು ಕರೆದಿದ್ದರು, ದೇಶದಲ್ಲಿ ಶೇ.100ರಷ್ಟು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದರು. ಆದರೆ ಇದೀಗ ಮೋದಿಯನ್ನು ಸ್ಥಾನದಿಂದ ಕೆಳಗಿಳಿಸುವ ಮಾತನಾಡಿದ್ದಾರೆ.

ಕೆಸಿಆರ್ ಅವರ ವಿಧಾನಸಭಾ ಕ್ಷೇತ್ರವಾದ ಗಜ್ವೆಲ್‌ಗೆ ಪ್ರಧಾನಿ ಮೋದಿ ಮೊದಲ ಭೇಟಿ ನೀಡಿದ್ದರು. ಭಗೀರಥ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಇದೀಗ ಪ್ರಧಾನಿ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ, ಉದ್ಯೋಗ ದರ, ಕೈಗಾರಿಕಾ ಬೆಳವಣಿಗೆ ಕುಗ್ಗಿದೆ ಎಂದು ಆರೋಪಿಸಿದ್ದಾರೆ.

ಕೆಸಿಆರ್ ಪ್ರಶ್ನೆಗೆ ಅಸ್ಸಾಂ ಸಿಎಂ ಉತ್ತರ; ಸರ್ಜಿಕಲ್ ಸ್ಟೈಕ್ ಬಗ್ಗೆ ಸಾಕ್ಷ್ಯ ಬಿಡುಗಡೆಕೆಸಿಆರ್ ಪ್ರಶ್ನೆಗೆ ಅಸ್ಸಾಂ ಸಿಎಂ ಉತ್ತರ; ಸರ್ಜಿಕಲ್ ಸ್ಟೈಕ್ ಬಗ್ಗೆ ಸಾಕ್ಷ್ಯ ಬಿಡುಗಡೆ

ಮೋದಿ ಸರ್ಕಾರ ನಡೆಸಿದ ಭ್ರಷ್ಟಾಚಾರದ ಪಟ್ಟಿ ನಮ್ಮ ಬಳಿ ಇದೆ, ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ, ಸರ್ಕಾರದ ಮುಖವಾಡ ಕಳಚುತ್ತೇನೆ ಎಂದು ಸವಾಲೆಸಿದಿದ್ದಾರೆ.

KCR Once Invited Modi Onto his Turf, Now He Wants To Invade Modi’s

ಚುನಾವಣೆಯ ಸಮಯವಾದರೆ ಗಡ್ಡ ಬಿಟ್ಟಿ ರವೀಂದ್ರನಾಥ ಠಾಗೋರರಂತೆ ಕಾಣಿಸಿಕೊಳ್ಳಬೇಕು. ತಮಿಳುನಾಡಾದರೆ ಲುಂಗಿ ತೊಡಬೇಕು, ಇದೇನಿದು?...ಈ ರೀತಿಯ ಗಿಮಿಕ್‌ಗಳಿಂದ ದೇಶಕ್ಕೆ ಏನು ಸಿಗುತ್ತದೆ. ಪಂಜಾಬ್ ಚುನಾವಣೆ ವೇಳೆ ಪಗ್ಡಿ (ಟರ್ಬನ್) ಧರಿಸುತ್ತಾರೆ.

ಮಣಿಪುರದಲ್ಲಿ, ಮಣಿಪುರಿ ಕ್ಯಾಪ್ ಹಾಕುತ್ತಾರೆ, ಉತ್ತರಾಖಂಡದಲ್ಲಿ ಇದು ಮತ್ತೊಂದು ಟೋಪಿ, ಈ ರೀತಿಯ ಎಷ್ಟು ಕ್ಯಾಪ್‌ಗಳನ್ನು ಧರಿಸುತ್ತಾರೆ ಎಂದು ಪ್ರಧಾನಿಯವರ ಹೈದರಾಬಾದ್‌ಗೆ ಭೇಟಿ ನೀಡುವ ಕೆಸಿಆರ್​ ಪ್ರಶ್ನಿಸಿದ್ದರು.

ಕೇಂದ್ರದ ಎನ್​ಡಿಎ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಬೆಂಬಲ ನೀಡಲು ವಿಫಲವಾದರೆ, ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅಗತ್ಯಬಿದ್ದರೆ ದೆಹಲಿ ರಾಷ್ಟ್ರ ರಾಜಕಾಣಕ್ಕೆ ಧುಮುಕುವುದಕ್ಕೆ ತಾವು ಸಿದ್ಧ.

ನರೇಂದ್ರ ಮೋದಿಯವರೇ ಹುಷಾರಾಗಿರಿ. ನಾನು ತೆಲಂಗಾಣದ ಮಗ ನಿಮ್ಮ ಬೆದರಿಕೆಗೆ ಹೆದರದ ಹುಲಿ. ನೀವು ನಮಗೆ ರಾಷ್ಟ್ರೀಯ ಯೋಜನೆಗಳನ್ನು ಕೊಡುಬೇಡಿ. ಮೆಡಿಕಲ್ ಕಾಲೇಜು ಕೊಡಬೇಡಿ. ನೀವು ನಮಗೆ ಬೆಂಬಲ ನೀಡದಿದ್ದರೂ ತೊಂದರೆ ಇಲ್ಲ. ನಾವು ನಿಮ್ಮನ್ನು ಅಧಿಕಾರದಿಂದ ಓಡಿಸಿ, ನಮಗೆ ನೆರವಾಗುವ ಸರ್ಕಾರವನ್ನು ತರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ತೆಲಂಗಾಣ ಮುಖ್ಯಮಂತ್ರಿಗೆ ಫೋನ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 2024 ರ ರಾಷ್ಟ್ರೀಯ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಡೆಗಳನ್ನು ಒಟ್ಟುಗೂಡಿಸುವ ತಮ್ಮ ಸಾಮಾನ್ಯ ಕಾರ್ಯಸೂಚಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು ಒಂದಾಗಿದ್ದಾರೆ. 2024ರಲ್ಲಿ ಬಿಜೆಪಿಯನ್ನು ಎದುರಿಸುವ ಸಾಧ್ಯತೆಯ ಬಗ್ಗೆ ಅವರು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿಯೊಂದಿಗಿನ ದಶಕಗಳ ಹಳೆಯ ಸಂಬಂಧವನ್ನು ಶಿವಸೇನೆ ಮುರಿದುಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರದಂದು ಕೆಸಿಆರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದಾರೆ.

ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಕೂಡಾ ಶೀಘ್ರದಲ್ಲೇ ಸಭೆ ನಡೆಸುವ ಸಾಧ್ಯತೆ ಇದೆ. ಫೆಬ್ರವರಿ 13 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್, ಮಮತಾ ಬ್ಯಾನರ್ಜಿ ತನಗೆ ಕರೆ ಮಾಡಿದ್ದಾರೆ ಅವರನ್ನು ಭೇಟಿ ಮಾಡಲು ಹೈದರಾಬಾದ್‌ಗೆ ಬರುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಪ್ರಧಾನಿ ವಿರುದ್ಧ ಕೆಲವು ದಿನಗಳಿಂದ ಹರಿಹಾಯುತ್ತಿರುವ ಅವರು ಬಿಜೆಪಿಯನ್ನು ಬಂಗಾಳ ಕೊಳ್ಳಿಗೆ ಎಸೆಯಿರಿ ಎಂದು ಟೀಕಿಸಿದ್ದರು. ಪ್ರಧಾನಿ ಗುರಿಯಾಗಿಸಿಕೊಂಡು ನಿರಂತರ ದಾಳಿ ಮಾಡುತ್ತಿರುವ ಕೆಸಿಆರ್​ ಚುನಾವಣಾ ಉದ್ದೇಶಕ್ಕಾಗಿ ಪ್ರಧಾನಿ ಜನರ ಓಲೈಕೆ ನಡೆಸಿದ್ದಾರೆ ಎಂಬ ಟೀಕೆಗಳು ಕೇಳಿ ನಡೆಸಿದ್ದರು.

English summary
August 2016, Telangana Chief Minister K Chandrasekhar Rao (KCR) called Prime Minister Narendra Modi “Bharat ke atyant lokpriya neta (the most popular leader in the country)” and thanked him for delivering a “historic, 100% corruption-free governance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X