ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ ಸ್ವೀಕಾರ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 13: ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿ ಟಿಆರ್ ಎಸ್ (ತೆಲಂಗಾಣ ರಾಷ್ಟ್ರ ಸಮಿತಿ)ಪಕ್ಷದ ಕೆ.ಚಂದ್ರಶೇಖರ್ ರಾವ್ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

1985 ರಿಂದಲೂ ಗಾಜ್ವೆಲ್ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದ ಕೆಸಿಆರ್ ಅವರು ಈ ಬಾರಿಯೂ ಇದೇ ಕ್ಷೇತ್ರದಿಂದ ಗೆಲ್ಲುವ ಮೂಲಕ, ಇದುವರೆಗೂ ಒಂದು ಚುನಾವಣೆಯಲ್ಲೂ ಸೋಲು ಕಾಣದ ನಾಯಕರಾಗಿ ದಾಖಲೆ ಬರೆದರು.

K Chandrashekhar Rao takes oath as Telangana CM

ವ್ಯಕ್ತಿಚಿತ್ರ : ತೆಲಂಗಾಣ ಸಿಎಂ ಹೋರಾಟಗಾರ ಕೆ ಚಂದ್ರಶೇಖರ ರಾವ್ವ್ಯಕ್ತಿಚಿತ್ರ : ತೆಲಂಗಾಣ ಸಿಎಂ ಹೋರಾಟಗಾರ ಕೆ ಚಂದ್ರಶೇಖರ ರಾವ್

ಹೈದರಾಬಾದಿನ ರಾಜಭವನದಲ್ಲಿ ವಿಧಾನಪರಿಷತ್ ಸದಸ್ಯ ಮೊಹಮ್ಮದ್ ಮೆಹ್ಮೂದ್ ಅಲಿ ಅವರೊಂದಿಗೆ ಕೆಸಿಆರ್ ಪ್ರಮಾಣ ವಚನ ಸ್ವೀಕರಿಸಿದರು.

ಬುಧವಾರದಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಸಿಆರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ

119 ಕ್ಷೇತ್ರಗಳ ತೆಲಂಗಾಣದಲ್ಲಿ ಡಿಸೆಂಬರ್ 07 ರಂದು ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್ ಎಸ್ ಪಕ್ಷ 88 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್-ಟಿಡಿಪಿ ಮೈತ್ರಿಪಕ್ಷ 21, ಬಿಜೆಪಿ 1 ಮತ್ತು ಎಐಎಂಐಎಂ ಒಟ್ಟು 7 ಸ್ಥಾನಗಳಲ್ಲಿ ಜಯಗಳಿಸಿತ್ತು.

English summary
TRS president K Chandrashekar Rao (KCR) was sworn-in as the Chief Minister of Telangana for the second consecutive term on Thursday. The oath-taking ceremony was held in Hyderabad's Raj Bhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X