• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಪ್ರಕಾರ ಕೆ. ಚಂದ್ರಶೇಖರ್ ರಾವ್ ಭಾರತದ 'ಚೋಟಾ ಮೋದಿ!'

|
   ಕಾಂಗ್ರೆಸ್ ಪ್ರಕಾರ ಕೆ. ಚಂದ್ರಶೇಖರ್ ರಾವ್ ಭಾರತದ ಚೋಟಾ ಮೋದಿ! | Oneindia Kannada

   ಹೈದರಾಬಾದ್, ಅಕ್ಟೋಬರ್ 03: 'ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ 'ಚೋಟಾ ಮೋದಿ' ಇದ್ದಂತೆ' ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಲೇವಡಿ ಮಾಡಿದ್ದಾರೆ.

   ಅಲ್ಲದೆ, ಟಿಆರ್ ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ)ಯನ್ನು ಬೆಂಬಲಿಸುತ್ತಿರುವ ಎಐಎಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಅವರನ್ನೂ ರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

   ಸಮೀಕ್ಷೆ: ತೆಲಂಗಾಣದಲ್ಲಿ ಮತ್ತೆ ಟಿಆರ್ ಎಸ್ ಅಧಿಕಾರಕ್ಕೆ

   "ಮುಸ್ಲಿಂ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗೊಳಿಸುವ ಇರಾದೆಯಿದ್ದರೆ ಮೊದಲು ತೆಲಂಗಾಣದಲ್ಲಿರುವ ಚೋಟಾ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಕೆ ಚಂದ್ರಶೇಖರ್ ರಾವ್ ಅವರಿಗೆ ಮತ ಹಾಕುವುದು ಎಂದರೆ ಪ್ರಧಾನಿ ಮೋದಿ ಅವರಿಗೆ ಮತಹಾಕಿದಂತೆ!" ಎಂದು ಅವರು ಹೇಳಿದ್ದಾರೆ.

   ಇಂಡಿಯಾ ಟುಡೇ ಸಮೀಕ್ಷೆ : ತೆಲಂಗಾಣದಲ್ಲಿ ಕೆಸಿಆರ್ ಗೆ ಸ್ಪರ್ಧಿಯೇ ಇಲ್ಲ

   "ಅಸಾದುದ್ದೀನ್ ಓವೈಸಿ ಅವರು ಟಿಆರ್ ಎಸ್ ಪಕ್ಷವನ್ನು ಕೆಲದಿನಗಳಿಂದ ಬೆಂಬಲಿಸುತ್ತಿದ್ದಾರೆ. 12 ಪ್ರತಿಶತ ಮೀಸಲಾತಿ ಎಂದು ಮುಸ್ಲಿಮರಿಗೆ ಅವರು ಇದುವರೆಗೂ ಮೋಸ ಮಾಡುತ್ತಲೇ ಬರುತ್ತಿದ್ದರೂ ಅವರನ್ನು ಅಸಾದುದ್ದೀನ್ ಓವೈಸಿ ಬೆಂಬಲಿಸುತ್ತಿರುವುದು ಸರಿಯಲ್ಲ. ಓವೈಸಿ ಟಿಆರ್ ಎಸ್ ಗೆ ಬೆಂಬಲ ನೀಡುತ್ತಿರುವುದು ತಮ್ಮ ಮತ್ತು ತಮ್ಮ ಸಹೋದರನ ಮೇಲಿರುವ ಪ್ರಕರಣಗಳನ್ನು ಮುಚ್ಚಿಹಾಕುವುದಕ್ಕೇ? ಅಥವಾ ತಾವು ಬಯಸುತ್ತಿರುವ 40 ಕೋಟಿ ಮೌಲ್ಯದ ಜಮೀನಿನಾಗಿಯೇ?" ಎಂದು ರೆಡ್ಡಿ ಲೇವಡಿ ಮಾಡಿದ್ದಾರೆ.

   English summary
   Telangana Pradesh Congress Committee (TPCC) president N. Uttam Kumar Reddy has slammed the caretaker Chief Minister K. Chandrasekhar Rao saying that he is a “Chota Modi”.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X