ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಗೆ ಬೆಂಬಲ ಸೂಚಿಸಿದ ಒವೈಸಿ, ಮಾರ್ಚ್ 16ರಿಂದ ಪ್ರಚಾರ ಶುರು

|
Google Oneindia Kannada News

ಹೈದರಾಬಾದ್, ಮಾರ್ಚ್ 14: ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಮಾರ್ಚ್ 16ರಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ದಿವಂಗತ ವೈ.ಎಸ್ ರಾಜಶೇಖರ ರೆಡ್ಡಿ ಅವರ ಸಮಾಧಿ ಸ್ಥಳವಿರುವ ಕಡಪ ಜಿಲ್ಲೆಯ ಇಡುಪಲಪಾಳ್ಯದಲ್ಲಿ ಜಗನ್ ಅವರು ಪೂಜೆ ಸಲ್ಲಿಸಲಿದ್ದಾರೆ.

ಮಾರ್ಚ್ 16ರಂದು ಗುಂಟೂರಿನ ಗುರಾಜಾಲದಲ್ಲಿ ಮೊದಲ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ನರ್ಸಿಪಟ್ಟಣಂ, ನೆಲ್ಲಿಮೆರ್ಲಾ ಹಾಗೂ ಪಿ ಗನ್ನಾವರಂನಲ್ಲಿ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳನ್ನು ಮಾರ್ಚ್ 24ರ ತನಕ ಸುತ್ತಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ತಳಸಿಲ ರಘುರಾಮ್ ಹೇಳಿದರು.

ಅಸಾದುದ್ದೀನ್‍ ಓವೈಸಿ ವಿರುದ್ಧ ಮಾಜಿ ನಾಯಕ ಅಜರುದ್ದೀನ್ ಸ್ಪರ್ಧೆ?ಅಸಾದುದ್ದೀನ್‍ ಓವೈಸಿ ವಿರುದ್ಧ ಮಾಜಿ ನಾಯಕ ಅಜರುದ್ದೀನ್ ಸ್ಪರ್ಧೆ?

ಜಗನ್ ಅವರ ತಾಯಿ ವೈಎಸ್ ವಿಜಯಲಕ್ಷ್ಮಿ, ಸೋದರಿ ವೈಎಸ್ ಶರ್ಮಿಳಾ ಅವರು ಚುನಾವಣಾ ಪ್ರಚಾರದಲ್ಲಿ ಜಗನ್ ಗೆ ಸಾಥ್ ನೀಡಲಿದ್ದಾರೆ. ರಾಜಶೇಖರ ರೆಡ್ಡಿ ಅವರಂತೆ ಪ್ರಜಾ ಸಂಕಲ್ಪ ಯಾತ್ರೆ ನಡೆಸಿದ್ದ ಜಗನ್ ಅವರು 134 ವಿಧಾನಸಭಾ ಕ್ಷೇತ್ರಗಳನ್ನು ಕ್ರಮಿಸಿದ್ದರು. ಬುಧವಾರದಂದು ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಬೇಕಿತ್ತು. ಆದರೆ, ಅಂತಿಮ ಹಂತದ ಬದಲಾವಣೆಗಳಿಗೆ ಒಳಪಟ್ಟಿದ್ದು, ಇನ್ನೆರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗಲಿದೆ ಎಂದರು.

ಜಗನ್ ಗೆ ಸಿಕ್ಕಿದೆ ಅಸಾಸುದ್ದೀನ್ ಒವೈಸಿ

ಜಗನ್ ಗೆ ಸಿಕ್ಕಿದೆ ಅಸಾಸುದ್ದೀನ್ ಒವೈಸಿ

ಈ ಲೋಕಸಭೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್-ಇ-ಇತ್ತೇದುಲ್​ ಮುಸ್ಲೀಮಿನ್(ಎಐಎಂಐಎಂ) ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಒವೈಸಿ ಅವರು ವೈ ಎಸ್​ಜಗನ್​ಮೋಹನ್​ರೆಡ್ಡಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶದ 25 ಲೋಕಸಭಾ ಕ್ಷೇತ್ರಗಳಲ್ಲಿ ವೈಎಸ್​ಜಗನ್ ಮೋಹನ್​ ರೆಡ್ಡಿ ಅವರ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ. ಆಂಧ್ರದಲ್ಲಿ ಎಲ್ಲರೂ ವೈಎಸ್​ಆರ್ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡುತ್ತೇನೆ. ತೆಲಂಗಾಣದಲ್ಲಿ ಎಲ್ಲರೂ ಎಐಎಂಐಎಂಗೆ ಬೆಂಬಲಿಸಬೇಕು ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ರಾಹುಲ್ ಸಮ್ಮುಖದಲ್ಲೇ ಮೋದಿಯನ್ನು 'ಉಗ್ರ' ಎಂದ ವಿಜಯಶಾಂತಿ ರಾಹುಲ್ ಸಮ್ಮುಖದಲ್ಲೇ ಮೋದಿಯನ್ನು 'ಉಗ್ರ' ಎಂದ ವಿಜಯಶಾಂತಿ

ಮುಸ್ಲಿಮರೇ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿ

ಮುಸ್ಲಿಮರೇ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿ

ಪ್ರತಿ ಬಾರಿಯ ಚುನಾವಣೆಯಲ್ಲೂ ಮುಸ್ಲೀಂ ಸಮುದಾಯದ ಮತದಾನ ಪ್ರಮಾಣ ಕುಸಿಯುತ್ತದೆ ಎಂದು ಚುನಾವಣೆ ಆಯೋಗ ಹೇಳುತ್ತಲೇ ಇರುತ್ತದೆ. ಆದ್ದರಿಂದ ಈ ಬಾರಿ ಮುಸ್ಲೀಮರು ಬೆಳಗ್ಗೆಯೇ ಬಂದು ತಮ್ಮ ಮತವನ್ನು ಸೂಕ್ತವಾದವರಿಗೆ ನೀಡಬೇಕು, ರಂಜಾನ್ ಮಾಸ ಮೇ 5ರಂದು ಬರಲಿದೆ, ಜೂನ್ 03ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕಿದೆ.ರಂಜಾನ್ ಗೆ ಚುನಾವಣೆ ಅಡ್ಡಿಯಾಗಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ ಎಂದರು.

ನಾಯ್ಡು ಪದಚ್ಯುತಿಗೆ 'ಆಪರೇಷನ್ ಗರುಡ'' ನಟ ಶಿವಾಜಿಗೆ ಕಂಟಕ ನಾಯ್ಡು ಪದಚ್ಯುತಿಗೆ 'ಆಪರೇಷನ್ ಗರುಡ'' ನಟ ಶಿವಾಜಿಗೆ ಕಂಟಕ

ಜಗನ್ ಗೆ ಟಿಡಿಪಿ ಮಣಿಸುವ ಗುರಿ

ಜಗನ್ ಗೆ ಟಿಡಿಪಿ ಮಣಿಸುವ ಗುರಿ

ಏಪ್ರಿಲ್ 11ರಿಂದ ಏಳು ಹಂತಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಮೇ 19ಕ್ಕೆ ಮತದಾನ ಪ್ರಕ್ರಿಯೆ ಮುಗಿಯಲಿದೆ. ಮೇ 23ರಂದು ಫಲಿತಾಂಶ ಹೊರಬರಲಿದೆ. ಕಾಂಗ್ರೆಸ್ಸೇತರ, ಬಿಜೆಪಿಯೇತರ ಪಕ್ಷಗಳು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಒವೈಸಿ ಹೇಳಿದ್ದಾರೆ. ವೈಎಸ್ಸಾರ್ ಪಕ್ಷವು ಈ ಬಾರಿ ಟಿಡಿಪಿಯನ್ನು ಮಣಿಸಿ ಆಂಧ್ರಪ್ರದೇಶದಲ್ಲಿ ರಾಜ್ಯಭಾರ ಮಾಡಲು ಉತ್ಸುಕವಾಗಿದೆ.

ಜಗನ್ ರೆಡ್ಡಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಚಂದ್ರಬಾಬು ನಾಯ್ಡುಜಗನ್ ರೆಡ್ಡಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಚಂದ್ರಬಾಬು ನಾಯ್ಡು

Array

ಬೂತ್ ಮಟ್ಟದ ಕಾರ್ಯಕರ್ತರಿಗೆ ಜಗನ್ ಸಂದೇಶ

ಮುಂದಿನ 27 ದಿನಗಳ ಕಾಲ ನಿಮ್ಮ ಬೆಂಬಲ ನನಗೆ ಅಗತ್ಯ, ಪ್ರತಿ ವೋಟಿನ ಮಹತ್ವ ಈಗ ತಿಳಿಯಲಿದೆ. ಕಳೆದ ನಾಲ್ಕು ವರ್ಷಗಳಿಂದ ನೀವು ಪಟ್ಟ ಶ್ರಮಕ್ಕೆ ಬೆಲೆ ಈಗ ಸಿಗಲಿದೆ ಎಂದು ವೈಎಸ್ಸಾರ್ಟ್ ಕಾಂಗ್ರೆಸ್ಸಿನ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ ಜಗನ್.

ಮನಿಲಾಂಡ್ರಿಂಗ್ ವಂಚನೆ: ಟಾಪ್ 10 ಪಟ್ಟಿಯಲ್ಲಿ ಜಗನ್ ಗೆ ಕೊನೆ ಸ್ಥಾನಮನಿಲಾಂಡ್ರಿಂಗ್ ವಂಚನೆ: ಟಾಪ್ 10 ಪಟ್ಟಿಯಲ್ಲಿ ಜಗನ್ ಗೆ ಕೊನೆ ಸ್ಥಾನ

English summary
YSR Congress chief, Jagan Mohan Reddy will kickstart his election campaign from March 16 onwards. He would begin his campaign from Idupulapaya, where his father, Y S Rajasekhar Reddy was laid to rest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X