ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿ ಸಹೋದರಿ ಶರ್ಮಿಳಾರಿಂದ ತೆಲಂಗಾಣದಲ್ಲಿ ಜುಲೈ 8ರಂದು ನೂತನ ಪಕ್ಷ ಸ್ಥಾಪನೆ

|
Google Oneindia Kannada News

ಹೈದರಾಬಾದ್, ಏಪ್ರಿಲ್ 10: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ರೆಡ್ಡಿ ಅವರು ಜುಲೈ 8ರಂದು ತೆಲಂಗಾಣದಲ್ಲಿ ತಮ್ಮ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ. ಜುಲೈ 8 ಅವರ ತಂದೆ, ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಜನ್ಮದಿನವಾಗಿದೆ.

ಹೈದರಾಬಾದ್‌ನಿಂದ ಆಂಧ್ರದ ಗಡಿ ಜಿಲ್ಲೆ ಖಮ್ಮಮ್‌ಗೆ ಬೃಹತ್ ಕಾರ್ ಜಾಥಾ ನಡೆಸಿದ ಬಳಿಕ ಶುಕ್ರವಾರ ಸಂಜೆ ಸಂಕಲ್ಪ ಸಭಾ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ವೇಳೆ ಶರ್ಮಿಳಾ ಈ ಪ್ರಕಟಣೆ ಮಾಡಿದ್ದಾರೆ. ತಮ್ಮ ಕಿರಿಯ ಸಹೋದರಿಯ ರಾಜಕೀಯ ಯೋಜನೆಗಳಿಂದ ಜಗನ್ ಮೋಹನ್ ರೆಡ್ಡಿ ಅಂತರ ಕಾಯ್ದುಕೊಂಡಿದ್ದಾರೆ.

ಜಗನ್ ಕುಟುಂಬದಿಂದ ಶೀಘ್ರವೇ ಹೊಸ ರಾಜಕೀಯ ಪಕ್ಷದ ಉದಯ? ಜಗನ್ ಕುಟುಂಬದಿಂದ ಶೀಘ್ರವೇ ಹೊಸ ರಾಜಕೀಯ ಪಕ್ಷದ ಉದಯ?

ಶರ್ಮಿಳಾ ಅವರ ನಡೆಗೆ ಅವರ ತಾಯಿ ವೈಎಸ್ ವಿಜಯಲಕ್ಷ್ಮಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಜನರ ಸೇವೆ ಸಲ್ಲಿಸಲು ತಮ್ಮ ಮಗಳು ಈ ಮಾರ್ಗ ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ತಂದೆಯಂತೆಯೇ ಮಗಳಿಗೆ ಧೈರ್ಯವಿದೆ ಎಂದು ಹೇಳಿದ್ದಾರೆ.

Jagan Mohan Reddys Sister Sharmila To Launch Party In Telangana On YSR Birth Anniversary

ಶರ್ಮಿಳಾ ಅವರ ಪಕ್ಷದ ಹೆಸರು, ಚಿನ್ಹೆ, ಧ್ವಜ ಮತ್ತು ಸಿದ್ಧಾಂತಗಳ ವಿವರಗಳನ್ನು ಜುಲೈ 8ರಂದು ಬಹಿರಂಗಪಡಿಸಲಾಗುತ್ತದೆ. ತೆಲಂಗಾಣದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಅವಧಿಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಗೆ ಪ್ರಬಲ ಪೈಪೋಟಿ ನಡೆಸುವ ಮಟ್ಟಕ್ಕೆ ಪಕ್ಷವನ್ನು ಬೆಳೆಸಲು ಶರ್ಮಿಳಾ ಗುರಿ ಹೊಂದಿದ್ದಾರೆ.

ರಜನಿಕಾಂತ್ ಅವರ 'ಶಿವಾಜಿ' ಚಿತ್ರದ ಸಂಭಾಷಣೆ ಹೇಳಿದ ಶರ್ಮಿಳಾ, ತಾವು ಇಲ್ಲಿ ಏಕಾಂಗಿ ಸಿಂಹ ಎಂದು ಹೋಲಿಸಿಕೊಂಡರು. ತಾವು ಇಲ್ಲಿ ಟಿಆರ್ಎಸ್, ಬಿಜೆಪಿ ಅಥವಾ ಕಾಂಗ್ರೆಸ್ ಪರವಾಗಿ ಬಂದಿಲ್ಲ. ಜನರ ಪರವಾಗಿ ಎಲ್ಲ ಮೂರು ಪಕ್ಷಗಳನ್ನು ಗುರಿ ಮಾಡುವುದಾಗಿ ತಿಳಿಸಿದರು.

English summary
Andhra Pradesh CM Jagan Mohan Reddy's sister YS Sharmila Reddy will launch her party in Telangana on July 8, YS Rajashekhara Reddy's Birth Anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X