ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತಿನ ನಗರಿಯ ಮತ್ತೇರಿಸಿದ ಚೆಲುವೆ ಇವಾಂಕಾ ಟ್ರಂಪ್!

|
Google Oneindia Kannada News

ಹಲವುದಿನಗಳಿಂದ ಅಪರೂಪದ ಅತಿಥಿಯೊಬ್ಬರನ್ನು ಬರಮಾಡಿಕೊಳ್ಳಲು ಮುತ್ತಿನ ನಗರಿ ಹೈದರಾಬಾದ್ ತವಕದಿಂದ ಕಾಯುತ್ತಿತ್ತು. ಆ ತವಕಕ್ಕೆ, ಕಾತರಕ್ಕೆ ಅಂತೂ ಮುಹೂರ್ತ ಕೂಡಿಬಂದಿದೆ. ಮುತ್ತಿನ ನಗರಿಗೆ ತಮ್ಮ ನಗುವಿನಿಂದಲೇ ಮತ್ತೇರಿಸಲು ಇಂದು(ನ.28) ಬೆಳಿಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಆಗಮಿಸಿದ್ದಾರೆ.

ಗ್ಯಾಲರಿ : ಮುತ್ತಿನನಗರಿಯಲ್ಲಿ ಟ್ರಂಪ್ ಪುತ್ರಿ ಇವಾಂಕಾ

'ಪ್ರಥಮ ಪುತ್ರಿ'ಯ ಆಗಮನಕ್ಕಾಗಿ ಹೈದರಾಬಾದಿನ ಗಲ್ಲಿಗಲ್ಲಿಗಳು ಸಿಂಗರಿಸಿಕೊಂಡಿವೆ, ರಸ್ತೆಗಳು ಹೊಸ ಒನಪು ಪಡೆದಿವೆ. ಇಲ್ಲಿ ನಡೆಯಲಿರುವ ಜಾಗತಿಕ ಉದ್ಯಮಶೀಲ ಶೃಂಗಸಭೆಯಲ್ಲಿ ಪಾಲಗೊಳ್ಳುವುದಕ್ಕಾಗಿ ಆಗಮಿಸಿರುವ ಇವಾಂಕಾ, ಈ ಮೊದಲದು ಹಲವು ಬಾರಿ ಭಾರತಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು.

ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?

ಈ ಶೃಂಗಸಭೆಯಲ್ಲಿ 127 ಕ್ಕೂ ಅಧಿಕ ದೇಶದ 1200 ಯುವ ಉದ್ಯಮಿಗಳು ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಇವಾಂಕಾ ಟ್ರಂಪ್ ಮಾತನಾಡಲಿದ್ದಾರೆ.

ಮುತ್ತಿನ ನಗರಿಗೆ ಬಂದ ಇವಾಂಕಾಗೆ ಅದ್ದೂರಿ ಸ್ವಾಗತಮುತ್ತಿನ ನಗರಿಗೆ ಬಂದ ಇವಾಂಕಾಗೆ ಅದ್ದೂರಿ ಸ್ವಾಗತ

ಇವಾಂಕ್ ಟ್ರಂಪ್ ಈಗಾಗಲೇ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಇವಾಂಕಾ ಟ್ರಂಪ್ ರನ್ನು ಹಲವರು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.

ಪ್ರತಿತಿಂಗಳೂ ಯಾವುದಾದರೂ ಸೆಲೆಬ್ರಿಟಿಗಳು ಬರುತ್ತಿರಬೇಕು!

ಇವಾಂಕಾ ಟ್ರಂಪ್ ಬಂದಂತೆಯೇ ಪ್ರತಿತಿಂಗಳೂ ಭಾರತದ ಬೇರೆ ಬೇರೆ ಪ್ರದೇಶಕ್ಕೆ ವಿದೇಶದ ಯಾರಾದರೂ ಸೆಲೆಬ್ರಿಟಿಗಳು ಬರುತ್ತಿರಬೇಕು. ಆಗ ಮಾತ್ರ ಎಲ್ಲ ಕಡೆ ಸ್ವಚ್ಛವಾಗಿರುತ್ತದೆ ಎಂದು ಶಿವಾನಂದ್ ಚಾವನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ ಸ್ವಾಗತ

ಇವಾಂಕಾ ಟ್ರಂಪ್ ಅವರಿಗೆ ಭಾರತಕ್ಕೆ ಸ್ವಾಗತ. ನಿಮ್ಮ ಭೇಟಿ ನಮ್ಮ ಹೈದರಾಬಾದ್ ಅನ್ನು ಮತ್ತಷ್ಟು ಸುಂದರ, ಶುದ್ಧ, ಭದ್ರಗೊಳಿಸಿದೆ ಎಂದು ಗಲ್ಲೇರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇವಾಂಕಾ ಬಳೆ ಬೇಕಾ..?!

ಭಾರತ-ಅಮೆರಿಕ ಬಾಂಧವ್ಯದ ಸಂಕೇತವಾಗಿ ಹೈದರಾಬಾದಿನ ಲಾಡ್ ಬಜಾರ್ ನಲ್ಲಿ ತಯಾರಿಸಿದ ಬಳೆಗಳಿಗೆ ಇವಾಂಕಾ ಬಳೆ ಎಂದು ಹೆಸರಿಡಲಾಗಿದೆ!

ಸಮಸ್ತ ಹೈದರಾಬಾದಿಗಳಿಂದ ಇವಾಂಕಾಗೆ ಕೃತಜ್ಞತೆ

ಸಮಸ್ತ ಹೈದರಾಬಾದಿಗಲಿಂದ ಇವಾಂಕಾ ಟ್ರಂಪ್ ಅವರಿಗೆ ಧನ್ಯವಾದಗಳು. ನಿಮ್ಮ ಆಗಮನದಿಂದಾಗಿ ನಮ್ಮ ರಸ್ತೆಗಳು ಸುಂದರವಾಗಿವೆ, ರಸ್ತೆಗುಂಡಿಗಳು ಮುಚ್ಚಿವೆ, ಟ್ರಅಫಿಕ್ ಸಮಸ್ಯೆ ಕಡಿಮೆಯಾಗಿದೆ! ನಗರ ಅಲಂಕಾರಗೊಂಡಿದೆ ಎಂದು ನರೇಶ್ ಬಾಬು ಎನ್ನುವವರು ಟ್ವೀಟ್ ಮಾಡಿದ್ದಾರೆ.

ಬಣ್ಣಗಳನ್ನು ತಂದ ಇವಾಂಕಾ

ಇವಾಂಕಾ ಟ್ರಂಪ್, ಹೈದರಾಬಾದಿಗೆ ಆಗಮಿಸುತ್ತಿದ್ದಂತೆಯೇ ತಮ್ಮೊಂದಿಗೆ ನಮ್ಮ ನಗರಕ್ಕೂ ಸಾಕಷ್ಟು ಬಣ್ಣಗಳನ್ನು ತಂದಿದ್ದಾರೆ ಎಂದು ತೆಲಗು ಇಂಡಸ್ಟ್ರಿ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

English summary
US President Donald Trump's daughter and his advisor Ivanka Trump received grand welcome in Hyderabad. She will be participating in 3 days Global Entrepreneurship Summit (GES) in the city. Here are some Twitter comments on her arrival to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X