ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೊಂದು ಸಣ್ಣ ಕೆಲಸ ಮಾಡಿದ್ದರೆ ನಂದಮೂರಿ ಹರಿಕೃಷ್ಣ ಸಾಯುತ್ತಿರಲಿಲ್ಲವೇನೋ!

|
Google Oneindia Kannada News

Recommended Video

Nandamuri Harikrishna : ನಂದಮೂರಿ ಹರಿಕೃಷ್ಣ ಇದೊಂದು ಸಣ್ಣ ಕೆಲಸ ಮಾಡಿರ್ತಿದ್ರೆ ಇವತ್ತು ಸಾಯ್ತಾ ಇರ್ಲಿಲ್ಲ

ಹೈದರಾಬಾದ್, ಆಗಸ್ಟ್ 29: ನಂದಮೂರಿ ಹರಿಕೃಷ್ಣ ಇನ್ನಿಲ್ಲ... ಎಂಥ ಸುದ್ದಿ ಇದು! 61 ವರ್ಷ ಎಂದರೆ ಸಾಯುವ ವಯಸ್ಸಲ್ಲವೇ ಅಲ್ಲ. ಆದರೆ ವಿಧಿ ಬೇರೆಯೇ ಇತ್ತು. ರಾಜಕಾರಣಿಯಾಗಿ, ನಟರಾಗಿ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದ ಹರಿಕೃಷ್ಣ ಮೃತರಾಗಿದ್ದಾರೆ.

ಅಕಸ್ಮಾತ್ ಹರಿಕೃಷ್ಣ ಅವರು ಸೀಟ್ ಬೆಲ್ಟ್ ಹಾಕಿದ್ದರೆ ಅವರು ಸಾಯುವ ಸಂದರ್ಭ ಒದಗಿಯೇ ಬರುತ್ತಿರಲಿಲ್ಲ ಎಂಬ ಚರ್ಚೆ ಇದೀಗ ಎದ್ದಿದೆ. ಅಪಘಾತದ ಚಿತ್ರಗಳನ್ನು ನೋಡಿದರೆ ಅವರ ತಲೆಗೆ ಬಲವಾಗಿ ಏಟು ಬಿದ್ದಿದೆ. ಸೀಟ್ ಬೆಲ್ಟ್ ಹಾಕಿದ್ದರೆ ಹರಿಕೃಷ್ಣ ಕಾರಿನಿಂದ ಆಚೆ ಬೀಳುವ ಸಂಭವ ಇರಲಿಲ್ಲ. ಆಗ ಈ ಅನಾಹುತವನ್ನು ತಪ್ಪಿಸಬಹುದಿತ್ತು ಎಂಬುದು ಕೆಲವರ ವಾದ.

ನಂದಮೂರಿ ಹರಿಕೃಷ್ಣ ದುರ್ಮರಣಕ್ಕೆ ಕಂಬನಿ ಮಿಡಿದ ಗಣ್ಯರು ನಂದಮೂರಿ ಹರಿಕೃಷ್ಣ ದುರ್ಮರಣಕ್ಕೆ ಕಂಬನಿ ಮಿಡಿದ ಗಣ್ಯರು

ಸೀಟ್ ಬೆಲ್ಟ್ ಧರಿಸುವುದು, ಹೆಲ್ಮೇಟ್ ಧರಿಸುವುದನ್ನು ಇಂದು ಭಾರತದ ಹಲವು ರಾಜ್ಯಗಳು ಕಡ್ಡಾಯಗೊಳಿಸಿವೆ. ದಿನೇ ದಿನೇ ಏರುತ್ತಿರುವ ಅಪಘಾತ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ತೆಗೆದುಕೊಂಡ ಈ ಕ್ರಮವನ್ನು ಎಷ್ಟೋ ಜನ ಪಾಲಿಸುತ್ತಿಲ್ಲ.

ಅಪ್ಪ-ಮಗ ಮೃತರಾಗಿದ್ದು ಒಂದೇ ಹೈವೆಯಲ್ಲಿ!

ಅಪ್ಪ-ಮಗ ಮೃತರಾಗಿದ್ದು ಒಂದೇ ಹೈವೆಯಲ್ಲಿ!

61 ವರ್ಷ ವಯಸ್ಸಿನ ನಂದಮೂರಿ ಹರಿಕೃಷ್ಣ ಇಂದು ಬೆಳಿಗ್ಗೆ ಆಂಧ್ರಪ್ರದೇಶದ ನಲ್ಗೊಂಡ್ ಬಳಿ ನಡೆದ ಅಪಘಾತದಲ್ಲಿ ಮೃತರಾದರು. ದುರಂತವೆಂದರೆ 2014 ರ ಡಿಸೆಂಬರ್ ನಲ್ಲಿ ಹರಿಕೃಷ್ಣ ಅವರ ಪುತ್ರ ನಂದಮೂರಿ ಜಾನಕಿರಾಮ್ ಮೃತಪಟ್ಟಿದ್ದು ಸಹ ಇದೇ ಹೈವೆಯಲ್ಲಿ!

ರಸ್ತೆ ಅಪಘಾತ: ಎನ್‌ಟಿಆರ್ ಮಗ ನಂದಮೂರಿ ಹರಿಕೃಷ್ಣ ಸಾವು ರಸ್ತೆ ಅಪಘಾತ: ಎನ್‌ಟಿಆರ್ ಮಗ ನಂದಮೂರಿ ಹರಿಕೃಷ್ಣ ಸಾವು

ಇಬ್ಬರದೂ ಕಾರ್ ನಂಬರ್ 2323!

ಇಬ್ಬರದೂ ಕಾರ್ ನಂಬರ್ 2323!

ಕಾಕತಾಳೀಯವೋ, ದುರದೃಷ್ಟವೋ ಏನೋ. ಒಟ್ಟಿನಲ್ಲಿ ಅಂದು ಮೃತರಾದ ಜಾನಕಿ ರಾಮ್ ಅವರ ಕಾರಿನ ಸಂಖ್ಯೆ AP 29 BD 2323 ಆಗಿದ್ದರೆ, ಇಂದು ಮೃತರಾದ ಹರಿಕೃಷ್ಣ ಅವರ ಕಾರಿನ ಸಂಖ್ಯೆ AP 28 BW 2323!

ಶೇ.75 ರಷ್ಟು ಜನ ಸೀಟ್ ಬೆಲ್ಟ್ ಹಾಕೋಲ್ಲ

ಶೇ.75 ರಷ್ಟು ಜನ ಸೀಟ್ ಬೆಲ್ಟ್ ಹಾಕೋಲ್ಲ

ವರದಿಯೊಂದರ ಭಾರತದಲ್ಲಿ ಶೇ.75 ರಷ್ಟು ಚಾಲಕರು ಸೀಟ್ ಬೆಲ್ಟ್ ಉಪಯೋಗಿಸುವುದಿಲ್ಲ. ಇದರಿಂದ ಪ್ರತಿದಿನ ಸುಮಾರು 15 ಕ್ಕೂ ಹೆಚ್ಚು ಜನ ಮೃತರಾಗುತ್ತಿದ್ದಾರೆ. ಆದರೆ ಯುರೋಪಿಯನ್ ದೇಶಗಳಲ್ಲಿ ಶೇ.98 ರಷ್ಟು ಜನ ಸೀಟ್ ಬೆಲ್ಟ್ ಧರಿಸುತ್ತಾರೆ!

2016ರಲ್ಲಿ ಭಾರತದಲ್ಲಿ ಅಪಘಾತಕ್ಕೊಳಗಾಗಿ ಮೃತರಾದವರ ಸಂಖ್ಯೆ 1.5 ಲಕ್ಷ! ಅದರಲ್ಲಿ ಸೀಟ್ ಬೆಲ್ಟ್ ಉಪಯೋಗಿಸದ ಕಾರಣ ಮೃತರಾದವರು 5,638 ಜನ!

ಸುರಕ್ಷಾ ವಿಧಾನವೇ ಅಲ್ಲ!

ಸುರಕ್ಷಾ ವಿಧಾನವೇ ಅಲ್ಲ!

ಭಾರತದಲ್ಲಿರುವ ಶೇ.23 ರಷ್ಟು ವಾಹನ ಚಾಲಕರು ಸೀಟ್ ಬೆಲ್ಟ್ ಅನ್ನು ಸುರಕ್ಷಾ ವಿಧಾನ ಎಂದೇ ಭಾವಿಸಿಲ್ಲ!

ಆದರೆ ಸೀಟ್ ಬೆಲ್ಟ್ ಧರಿಸುವುದರಿಂದ ಅಪಘಾತದಿಂದ ಸಂಭವಿಸಬಹುದಾದ ಪ್ರಾಣಹಾನಿಯನ್ನು ಖಂದಿತವಾಗಿಯೂ ತಪ್ಪಿಸಬಹುದು ಎಂಬುದು ಟ್ರಾಫಿಕ್ ಪೊಲೀಸರ ಕಳಕಳಿ.

English summary
After Telugu star and politician Nandamuri Harikrishna's death in an accident, many people are telling that, he could have saved if he wear seatbelt while driving.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X