• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳಾ ದಿನ; ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಜೆ

|
Google Oneindia Kannada News

ಹೈದರಾಬಾದ್, ಮಾರ್ಚ್ 07; ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ತೆಲಂಗಾಣ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಜೆಯನ್ನು ನೀಡಿದೆ. ಮಾರ್ಚ್ 8ರ ಸೋಮವಾರ ಮಹಿಳೆಯರಿಗೆ ವಿಶೇಷ ಸಾಂದರ್ಭಿಕ ರಜೆ ಸಿಗಲಿದೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಈ ಕುರಿತು ಸೂಚನೆ ನೀಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೆಶ್ ಕುಮಾರ್ ಈ ಕುರಿತು ಅಧಿಕೃತವಾದ ಆದೇಶವನ್ನು ಹೊರಡಿಸಿದ್ದಾರೆ.

ಕೈಯಲ್ಲಿ ಮಗು ಹಿಡಿದು ಟ್ರಾಫಿಕ್ ನಿಯಂತ್ರಿಸಿದ ಮಹಿಳಾ ಪೊಲೀಸ್: ವೈರಲ್ ವಿಡಿಯೋಕೈಯಲ್ಲಿ ಮಗು ಹಿಡಿದು ಟ್ರಾಫಿಕ್ ನಿಯಂತ್ರಿಸಿದ ಮಹಿಳಾ ಪೊಲೀಸ್: ವೈರಲ್ ವಿಡಿಯೋ

ಮುಖ್ಯಮಂತ್ರಿಗಳು ಎಲ್ಲಾ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಮಹಿಳೆಯರಿಗೆ ಅವಕಾಶಗಳನ್ನು ನೀಡಿದರೆ ಅದ್ಭುತಗಳನ್ನು ಸೃಷ್ಟಿ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಮಗುವಿನೊಂದಿಗೆ ಬಂದು ಎಫ್‌ಡಿಎ ಪರೀಕ್ಷೆ ಬರೆದ ಮಹಿಳೆ! ಮಗುವಿನೊಂದಿಗೆ ಬಂದು ಎಫ್‌ಡಿಎ ಪರೀಕ್ಷೆ ಬರೆದ ಮಹಿಳೆ!

ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ಸರ್ಕಾರ ರಚನೆ ಮಾಡಿರುವ SHE ತಂಡಗಳು ಹಿರಿಯ ಮಹಿಳೆಯರಿಗೆ, ಒಂಟಿ ಮಹಿಳೆಯರಿಗೆ, ಪತಿಯನ್ನು ಕಳೆದುಕೊಂಡವರಿಗೆ ಅಗತ್ಯ ನೆರವು ನೀಡಲು ಸಹಕಾರಿ ಆಗಲಿದೆ ಎಂದು ಕೆ. ಚಂದ್ರಶೇಖರಾವ್ ತಿಳಿಸಿದ್ದಾರೆ.

ಕೋಲಾರ; ಮಹಿಳೆ ಸಾವು, ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆಕೋಲಾರ; ಮಹಿಳೆ ಸಾವು, ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ

ಮಹಿಳೆಯರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ತೆಲಂಗಾಣ ಮುಂದಿದೆ. ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಸರ್ಕಾರ ಹೆಚ್ಚಳ ಮಾಡಿದೆ. ಕಲ್ಯಾಣ ಲಕ್ಷ್ಮೀ ಮತ್ತು ಕೆಸಿಆರ್ ಕಿಟ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

English summary
Telangana government announced special casual leave for all women employees in state on March 08, 2021 for international women's day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X