ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಶನ್ ಶಕ್ತಿ ಬಗ್ಗೆ ಯುಪಿಎಗೆ ಇಚ್ಛಾಶಕ್ತಿ ಕೊರತೆ: ಇಸ್ರೋ ಮಾಜಿ ಅಧ್ಯಕ್ಷ ಆರೋಪ

|
Google Oneindia Kannada News

ಹೈದರಾಬಾದ್, ಮಾರ್ಚ್ 28: ಸಜೀವ ಉಪಗ್ರಹಗಳನ್ನು ಹೊಡೆದುರುಳಿಸುವ ಮಿಶನ್ ಶಕ್ತಿ ಯೋಜನೆ ದಶಕಗಳ ಹಿಂದೆಯೇ ಪ್ರಯೋಗವಾಗಬೇಕಿತ್ತು. ಆಗಲೂ ಭಾರತದ ವಿಜ್ಞಾನ ಲೋಕ ಅದಕ್ಕೆ ಸಮರ್ಥವಾಗಿತ್ತು. ಆದರೆ, ಆ ಕಾಲಘಟ್ಟದಲ್ಲಿ ಅದನ್ನು ಪರೀಕ್ಷಿಸಲು ರಾಜಕೀಯ ಇಚ್ಛಾಶಕ್ತಿಯೇ ಇರಲಿಲ್ಲ ಎಂದು ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾರತವು ಉಪಗ್ರಹ ನಿಗ್ರಹ ತಂತ್ರಜ್ಞಾನ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರಯೋಗಿಸಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುಟುಕು ಭಾಷಣದಲ್ಲಿ ಬುಧವಾರ ಬಹಿರಂಗಪಡಿಸಿದ್ದರು. ಈ ಸಾಧನೆಗೆ ಡಿಆರ್‌ಡಿಒ ವಿಜ್ಞಾನಿಗಳ ಶ್ರಮವನ್ನು ಶ್ಲಾಘಿಸಿದ್ದರು. ಆದರೆ, ಇದು ರಾಜಕೀಯ ತಿರುವು ಪಡೆದುಕೊಂಡಿತ್ತು.

ಆಗ ಅನುಮತಿಯೇ ಕೊಟ್ಟಿರಲಿಲ್ಲ!: ಡಿಆರ್‌ಡಿಒ ಶ್ರೇಯಸ್ಸು ತನ್ನದೆಂದ ಕಾಂಗ್ರೆಸ್‌ಗೆ ಮುಖಭಂಗ ಆಗ ಅನುಮತಿಯೇ ಕೊಟ್ಟಿರಲಿಲ್ಲ!: ಡಿಆರ್‌ಡಿಒ ಶ್ರೇಯಸ್ಸು ತನ್ನದೆಂದ ಕಾಂಗ್ರೆಸ್‌ಗೆ ಮುಖಭಂಗ

ಈ ಯೋಜನೆಗೆ ಆಗಿನ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾರಿಗೆ ಬಂದಿದ್ದು. ಹಾಗಾಗಿ ಇದು ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕಾದ ಶ್ರೇಯಸ್ಸು ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಡಿಆರ್‌ಡಿಒ ಸ್ಥಾಪನೆಯಾಗಿದ್ದು ನೆಹರೂ ಅವರ ಕಾಲದಲ್ಲಿ. ಹೀಗಾಗಿ ನೆಹರೂ ಅವರಿಗೂ ಈ ಸಾಧನೆಯ ಪಾಲುದಾರರು ಎಂದು ಕಾಂಗ್ರೆಸ್ಸಿಗರು ಹೇಳಿದ್ದರು.

ಆದರೆ, ಬುಧವಾರ ಸಂಜೆ ಡಿಆರ್‌ಡಿಒ ಮಾಜಿ ಅಧ್ಯಕ್ಷ ಡಾ.ವಿ.ಕೆ. ಸಾರಸ್ವತ್ ಆಗಿನ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. 2012-13ರ ಅವಧಿಯಲ್ಲಿ ಆಗಿನ ಯುಪಿಎ ಸರ್ಕಾರದ ಬಳಿ ಈ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೆವು. ಆದರೆ, ಅವರಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿರಲಿಲ್ಲ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಇದಕ್ಕೆ ಅನುಮೋದನೆ ದೊರಕಿತು ಎಂದು ಅವರು ಹೇಳಿಕೆ ನೀಡಿದ್ದರು.

2007ರಲ್ಲಿಯೇ ಸಾಮರ್ಥ್ಯವಿತ್ತು

2007ರಲ್ಲಿಯೇ ಸಾಮರ್ಥ್ಯವಿತ್ತು

ಚೀನಾವು 2007ರಲ್ಲಿ ತನ್ನ ಹಳೆಯ ಹವಾಮಾನ ಉಪಗ್ರಹವನ್ನು ಹೊಡೆದುರುಳಿಸಿತ್ತು. ಇದೇ ರೀತಿ ಹಳೆಯ, ನಿರುಪಯುಕ್ತ ಉಪಗ್ರಹವನ್ನು ನಿಷ್ಕ್ರಿಯಗೊಳಿಸಿ ನಾಶಪಡಿಸುವ ಯೋಜನೆಯನ್ನು ಕೈಗೊಳ್ಳುವ ತಂತ್ರಜ್ಞಾನ ಭಾರತದ ಬಳಿಯೂ ಆಗ ಇತ್ತು ಎಂದು ಮಾಧವನ್ ನಾಯರ್ ಹೇಳಿದ್ದಾರೆ.

ಈಗ ಮೋದಿಯಿಂದ ಆಯಿತು

ಈಗ ಮೋದಿಯಿಂದ ಆಯಿತು

ಈಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಬಗ್ಗೆ ಆಸಕ್ತಿ ತಳೆದು ಅನುಮೋದನೆ ನೀಡಿದರು. ನಾವು ಇದನ್ನು ಮಾಡುತ್ತೇವೆ ಎಂದು ಹೇಳುವ ರಾಜಕೀಯ ಮನೋಬಲ ಮತ್ತು ಧೈರ್ಯ ಅವರಲ್ಲಿ ಇದೆ. ಇದನ್ನು ಈಗ ನಾವು ಈ ದೇಶಕ್ಕೆ ಪ್ರದರ್ಶನ ಮಾಡಿದ್ದೇವೆ ಎಂದು ನಾಯರ್ ತಿಳಿಸಿದ್ದಾರೆ.

ಮಿಶನ್ ಶಕ್ತಿಯ ಹಿಂದೆ ಮನಮೋಹನ್ ಸಿಂಗ್: ಸಿದ್ದು ಅಭಿನಂದನೆಮಿಶನ್ ಶಕ್ತಿಯ ಹಿಂದೆ ಮನಮೋಹನ್ ಸಿಂಗ್: ಸಿದ್ದು ಅಭಿನಂದನೆ

ರಾಜಕೀಯ ನಿರ್ಧಾರದ ಗೈರು

ರಾಜಕೀಯ ನಿರ್ಧಾರದ ಗೈರು

ಹಾಗಾದರೆ ಭಾರತಕ್ಕೆ 2007ರಲ್ಲಿಯೇ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆಯನ್ನು ಪ್ರದರ್ಶಿಸುವ ಸಾಮರ್ತ್ಯವಿತ್ತೇ ಎಂಬ ಪ್ರಶ್ನೆಗೆ ನಾಯರ್, ಖಂಡಿತವಾಗಿಯೂ ಇತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಅದನ್ನು ಕೈಗೆತ್ತಿಕೊಳ್ಳಲು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಇಚ್ಛಾಶಕ್ತಿ ಇಲ್ಲದ ಕಾರಣ ಸಾಧ್ಯವಾಗಿರಲಿಲ್ಲ ಎಂದು ಯುಪಿಎ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ

ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ

'ನಾವು ಆಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿ ಮುಂದೆ ಪ್ರಾತ್ಯಕ್ಷಿಕೆ ನೀಡಿದ್ದೆವು. ಆಗ ಆ ಚರ್ಚೆಗಳು ನಡೆಯುವಾಗ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಕೊಟ್ಟಿದ್ದೆವು. ಆದರೆ, ದುರದೃಷ್ಟವಶಾತ್ ಯುಪಿಎ ಸರ್ಕಾರದಿಂದ ನಮಗೆ ಸಕಾರಾತ್ಮಕ ಸ್ಪಂದನೆ ದೊರಕಲಿಲ್ಲ. ಹೀಗಾಗಿ ನಾವು ಮುಂದೆ ಹೋಗಲಿಲ್ಲ' ಎಂದು ಡಾ.ವಿ.ಕೆ. ಸಾರಸ್ವತ್ ಬುಧವಾರ ಹೇಳಿಕೆ ನೀಡಿದ್ದಾರೆ.

ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?ಮೋದಿ ಹೇಳಿದ 'ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್' ತಂತ್ರಜ್ಞಾನ: ಏನಿದು ಎಲ್‌ಇಒ?

English summary
Ex ISRO chairman G Madhavan Nair said that, India had the Anti-Satellite missile capability at 2007 itself. But there was no political will at the time to demonstrate it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X