ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗದೊಡೆಯ ತಿರುಪತಿ ತಿಮ್ಮಪ್ಪನ ಬ್ರಹ್ಮೋತ್ಸವ ಸಂಭ್ರಮ

By Mahesh
|
Google Oneindia Kannada News

ತಿರುಮಲ, ಸೆ. 21: ವಜ್ರವೈಢೂರ್ಯ ಚಿನ್ನಾಭರಣ ಭೂಷಿತನಾದ ಏಳುಬೆಟ್ಟದ ಒಡೆಯ ತಿಮ್ಮಪ್ಪ ಮೋಹಿನಿ ಅವತಾರ, ವಿವಿಧ ವಾಹನಗಳನ್ನೇರಿ ಬರುವ ಜಗದೊಡೆಯನನ್ನು ಬಿರುಗಾಳಿ ಮಳೆ ಸಹಿತ ಭಕ್ತಾದಿಗಳು ಬರಮಾಡಿಕೊಂಡಿದ್ದಾರೆ. ತಿರುಮಲ ತಿರುಪತಿಯಲ್ಲಿ ಎರಡು ಬಾರಿ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು ಸೆ. 16ರಿಂದ 24 ರ ತನಕ ಬ್ರಹ್ಮೋತ್ಸವ ಆಯೋಜನೆಗೊಂಡಿದೆ.

ನವರಾತ್ರಿ ಸಂದರ್ಭದಲ್ಲಿ ಈ ಬಾರಿ ಅಕ್ಟೋಬರ್ 14 ರಿಂದ ಅಕ್ಟೋಬರ್ 22 ರ ತನಕ ಮತ್ತೊಮ್ಮೆ ವೆಂಕಟೇಶ್ವರ ಹಾಗೂ ಪದ್ಮಾವತಿಯ ಅಲಂಕೃತ ಮೂರ್ತಿಗಳನ್ನು ಭಕ್ತಾದಿಗಳು ಕಣ್ತುಂಬಿಸಿಕೊಳ್ಳಬಹುದು. ಮೋಹಿನಿ ಅವತಾರ ಹಾಗೂ ಗರುಡ ವಾಹನ ಸಂಭ್ರಮದ ಉತ್ಸವದ ಚಿತ್ರಗಳು ನಿಮಗಾಗಿ ಇಲ್ಲಿದೆ.

ಮಳೆಯ ನಡುವೆ ಭಕ್ತಾದಿಗಳು ವೆಂಕಟೇಶ್ವರ ಮೂರ್ತಿಯನ್ನು ಕಂಡು ಪುನೀತರಾದರು. ಬ್ರಹ್ಮೋತ್ಸವದ ಐದನೇ ದಿನದಂದು ಸುಮಾರು 3 ಲಕ್ಷಕ್ಕೂ ಅಧಿಕ ಭಕ್ತಾದಿಗಳು ತಿರುಮಲದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಳಗ್ಗೆ ಶ್ರೀದೇವಿ, ಭೂದೇವಿ ಸಮೇತನಾದ ವೆಂಕಟೇಶ್ವರ ಸ್ವಾಮಿಗೆ ಮೋಹಿನಿ ಅವತಾರ ವಸ್ತ್ರ ತೊಡಿಸಲಾಗಿತ್ತು. ರಾತ್ರಿ ಗರುಢರೂಢನಾಗಿ ಸ್ವಾಮಿ ಕಾಣಿಸಿಕೊಂಡು ವೈಭವದ ಮೆರವಣಿಗೆಯಲ್ಲಿ ಸಾಗಿದನು.ಬ್ರಹ್ಮೋತ್ಸವದ ಮೆರವಣಿಗೆಯಲ್ಲಿ ಮೋಹಿನಿ ರೂಪದಲ್ಲಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳಿ...

ಮೋಹಿನಿ ರೂಪದಲ್ಲಿ ಅವತರಿಸಿದ ಶ್ರೀಹರಿ

ಮೋಹಿನಿ ರೂಪದಲ್ಲಿ ಅವತರಿಸಿದ ಶ್ರೀಹರಿ

ದೇವ ಹಾಗೂ ದಾನವರ ನಡುವೆ ಅಮೃತ ಹಂಚಿಕೆ ವಿವಾದ ಎದ್ದಾಗ ಮೋಹಿನಿ ರೂಪದಲ್ಲಿ ಅವತರಿಸಿದ ಶ್ರೀಹರಿ ದೇವ ಸಮೂಹಕ್ಕೆ ಮಾತ್ರ ಅಮೃತ ಹಂಚಿ ದಾನವರಿಗೆ ಅಮೃತ ಅಮರತ್ವ ಸಿಗದಂತೆ ಮಾಡುತ್ತಾನೆ.

ಮೋಹಿನಿ ಅವತಾರದ ಇನ್ನೊಂದು ಪ್ರಮುಖ ಕಾರ್ಯ

ಮೋಹಿನಿ ಅವತಾರದ ಇನ್ನೊಂದು ಪ್ರಮುಖ ಕಾರ್ಯ

ಮೋಹಿನಿ ಅವತಾರದ ಇನ್ನೊಂದು ಪ್ರಮುಖ ಕಾರ್ಯ ಎಂದರೆ ಮಾಯೆಯಲ್ಲಿ ಮುಸುಕಿದ ಭಕ್ತರನ್ನು ಇಹಲೋಕದ ಮಾಯೆಯಿಂದ ಮುಕ್ತಗೊಳಿಸುವುದು. ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ ಎಂದು ಭಕ್ತರು ಗೊಂದಲಕ್ಕೆ ಬೀಳದಂತೆ ಕೈ ಹಿಡಿದು ಕಾಪಾಡುವುದು ಜಗನ್ನಾಥನ ಅವತಾರದ ಇನ್ನೊಂದು ಕಾರ್ಯವಾಗಿದೆ.

ಬಿರುಗಾಳಿ ಸಹಿತ ಮಳೆಯ ನಡುವೆ

ಬಿರುಗಾಳಿ ಸಹಿತ ಮಳೆಯ ನಡುವೆ

ವಿವಿಧ ವಾಹನಗಳನ್ನೇರಿ ಬರುವ ಜಗದೊಡೆಯನನ್ನು ಬಿರುಗಾಳಿ ಸಹಿತ ಮಳೆಯ ನಡುವೆ ಭಕ್ತಾದಿಗಳು ಬರಮಾಡಿಕೊಂಡಿದ್ದಾರೆ.

ಎರಡು ಬಾರಿ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮ

ಎರಡು ಬಾರಿ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮ

ತಿರುಮಲ ತಿರುಪತಿಯಲ್ಲಿ ಎರಡು ಬಾರಿ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು ಸೆ. 16ರಿಂದ 24 ರ ತನಕ ಬ್ರಹ್ಮೋತ್ಸವ, ನವರಾತ್ರಿ ಸಂದರ್ಭದಲ್ಲಿ ಈ ಬಾರಿ ಅಕ್ಟೋಬರ್ 14 ರಿಂದ ಅಕ್ಟೋಬರ್ 22 ರ ತನಕ ಆಯೋಜನೆಗೊಂಡಿದೆ.

ಬ್ರಹ್ಮೋತ್ಸವದ ಮೆರವಣಿಗೆಯಲ್ಲಿ ಮೋಹಿನಿ ರೂಪ

ಬ್ರಹ್ಮೋತ್ಸವದ ಮೆರವಣಿಗೆಯಲ್ಲಿ ಮೋಹಿನಿ ರೂಪ

ಬ್ರಹ್ಮೋತ್ಸವದ ಮೆರವಣಿಗೆಯಲ್ಲಿ ಮೋಹಿನಿ ರೂಪಕವನ್ನು ಪ್ರದರ್ಶಿಸುತ್ತಿರುವ ಕಲಾವಿದರು.

ಬಾಲಕೃಷ್ಣನ ರೂಪದಲ್ಲಿ ಶ್ರೀವೆಂಕಟೇಶ್ವರ

ಬಾಲಕೃಷ್ಣನ ರೂಪದಲ್ಲಿ ಶ್ರೀವೆಂಕಟೇಶ್ವರ

ಶ್ರೀವೆಂಕಟೇಶ್ವರನನ್ನು ಬಾಲಕೃಷ್ಣನ ರೂಪದಲ್ಲಿ ಅಲಂಕರಿಸಿ ಹೂವಿನ ಪಲ್ಲಕ್ಕಿಗಳಲ್ಲಿ ಹೊತ್ತು ಮೆರವಣಿಗೆ ಮಾಡಲಾಗುತ್ತದೆ. ರೋಸ್ ವುಡ್ ಹಾಗೂ ದಂತದಿಂದ ಕೆತ್ತಲ್ಪಟ್ಟ ಸುಂದರವಾದ ಪಲ್ಲಕ್ಕಿಗಳನ್ನು ಮೈಸೂರಿನ ಮಹಾರಾಜರು ತಿಮ್ಮಪ್ಪನ ಸೇವೆಗಾಗಿ ನೀಡಿರುವುದು ವಿಶೇಷ

ಆರನೇ ದಿನ ಹನುಮಂತ ವಾಹನ

ಆರನೇ ದಿನ ಹನುಮಂತ ವಾಹನ

ತಿರುಮಲ ತಿರುಪತಿ ಬ್ರಹ್ಮೋತ್ಸವ ಆರನೇ ದಿನ ಹನುಮಂತ ವಾಹನ ಬೆಳಗ್ಗೆ ನಡೆದರೆ ಸಂಜೆ ಡೋಲೋತ್ಸವ 5 ರಿಂದ 6 ಗಂಟೆ ತನಕ ಹಾಗೂ ಸ್ವರ್ಣರಥ ಉತ್ಸವ ರಾತ್ರಿ ಗಜವಾಹನ ಸೇವೆ.

ಏಳನೇ ದಿನ ಸೂರ್ಯಪ್ರಭ ವಾಹನ

ಏಳನೇ ದಿನ ಸೂರ್ಯಪ್ರಭ ವಾಹನ

ತಿರುಮಲ ತಿರುಪತಿ ಬ್ರಹ್ಮೋತ್ಸವದ ಏಳನೇ ದಿನ ಸೂರ್ಯಪ್ರಭ ವಾಹನ ಸಂಜೆ ವಿವಿಧ ಶುದ್ಧೀಕರಣ ಸ್ನಾನ. ರಾತ್ರಿ ಚಂದ್ರಪ್ರಭ ವಾಹನ.

ಬ್ರಹ್ಮೋತ್ಸವದ ಎಂಟನೇ ದಿನ

ಬ್ರಹ್ಮೋತ್ಸವದ ಎಂಟನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವದ ಎಂಟನೇ ದಿನ(ಸೆ.23) ಬೆಳಗ್ಗೆ ರಥೋತ್ಸವ, ರಾತ್ರಿ ಅಶ್ವವಾಹನ.

ಸಾಂಪ್ರದಾಯಿಕ ನೃತ್ಯ, ವೇಷಧಾರಿಗಳು

ಸಾಂಪ್ರದಾಯಿಕ ನೃತ್ಯ, ವೇಷಧಾರಿಗಳು

ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ. ಚಿಕ್ಕ ಮಕ್ಕಳುದಶಾವತಾರ, ದೇವ ದಾನವ ಭಾಗವತ, ದೇವರ ವಾಹನರೂಪಿ ದಿರಿಸಿನಲ್ಲಿ ಕಂಗೊಳಿಸಿದರು.

ಬ್ರಹ್ಮೋತ್ಸವದ ಒಂಭತ್ತನೇ ದಿನ

ಬ್ರಹ್ಮೋತ್ಸವದ ಒಂಭತ್ತನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವದ ಒಂಭತ್ತನೇ ದಿನ ಸ್ನಾಪಣ ತಿರುಮಂಜನಂ ಹಾಗೂ ಚಕ್ರಸ್ನಾನ ಹಾಗೂ ಚಿನ್ನದ ತಿರುಚಿವುತ್ಸವಂ ಧ್ವಜ ಅಹೋರಣ.

ನವರಾತ್ರಿಯಲ್ಲಿ ಮತ್ತೊಮ್ಮೆ ಬಹ್ಮೋತ್ಸವ

ನವರಾತ್ರಿಯಲ್ಲಿ ಮತ್ತೊಮ್ಮೆ ಬಹ್ಮೋತ್ಸವ

ನವರಾತ್ರಿಯಲ್ಲಿ ಮತ್ತೊಮ್ಮೆ ಬಹ್ಮೋತ್ಸವ ಅಕ್ಟೋಬರ್ 14ರಂದು ತಿರುಚ್ಚಿ ಉತ್ಸವ, ಪೆದ್ದ ಶೇಷ ವಾಹನ ಸೇವೆಯೊಂದಿಗೆ ಆರಂಭಗೊಳ್ಳಲಿದ್ದು, ಅಕ್ಟೋಬರ್ 22ರಂದು ಒಂಭತ್ತನೇ ದಿನದಂದು ಸಂಪನ್ನಗೊಳ್ಳಲಿದೆ.

English summary
Braving a heavy downpour, about 3 lakh devotees tonight joined the auspicious 'Garudaseva' procession of Lord Venkateswara on the fifth day of the annual 'Salakatla Brahmotsavam' at Tirumala near here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X