ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ವಿಭಜನೆ ನಂತರ ಮೋಹಿನಿ ರೂಪದಲ್ಲಿ ತಿಮ್ಮಪ್ಪ

By Mahesh
|
Google Oneindia Kannada News

ತಿರುಮಲ, ಅ.1: ಆಂಧ್ರಪ್ರದೇಶ ವಿಭಜನೆಗೊಂಡ ನಂತರ ಇದೇ ಮೊದಲ ಬಾರಿಗೆ ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ವಾರ್ಷಿಕ 'ಬ್ರಹ್ಮೋತ್ಸವ' ತಿರುಮಲದಲ್ಲಿ ಸಾಂಗೋಪಾಂಗವಾಗಿ ಸಾಗಿದೆ. ತಿರುಪತಿ ತಿಮ್ಮಪ್ಪನ 'ಮೋಹಿನಿ ಅವತಾರ' ಕಂಡು ಭಕ್ತರು ಧನ್ಯತೆ ಅನುಭವಿಸಿದ್ದಾರೆ.

ವೈಜ್ರವೈಢೂರ್ಯ ಚಿನ್ನಾಭರಣ ಭೂಷಿತನಾದ ಏಳುಬೆಟ್ಟದ ಒಡೆಯ ತಿಮ್ಮಪ್ಪ ಮೋಹಿನಿ ಅವತಾರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡು ಭಕ್ತರಿಗೆ ದರ್ಶನ ನೀಡುವುದಕ್ಕೂ ಮುನ್ನ ಕಲಶಗಿತ್ತಿಯರು ಸಾಲು ಸಾಲಾಗಿ ಜಗದೊಡೆಯನ ಮುಂದೆ ಸಾಗಿದರು. ಒಂದು ಹಸ್ತದಲ್ಲಿ ಅಮೃತ ಕಲಶ ಮತ್ತೊಂದು ಹಸ್ತದಲ್ಲಿ ಅಭಯ ನೀಡುವ ತಿಮ್ಮಪ್ಪನು ಮೋಹಿನಿ ರೂಪದಲ್ಲಿ ಕಾಣಿಸಿಕೊಂಡಿರುವುದು ಭಕ್ತರನ್ನು ಪರವಶಗೊಳಿಸಿದೆ.

ದೇವ ಹಾಗೂ ದಾನವರ ನಡುವೆ ಅಮೃತ ಹಂಚಿಕೆ ವಿವಾದ ಎದ್ದಾಗ ಮೋಹಿನಿ ರೂಪದಲ್ಲಿ ಅವತರಿಸಿದ ಶ್ರೀಹರಿ ದೇವ ಸಮೂಹಕ್ಕೆ ಮಾತ್ರ ಅಮೃತ ಹಂಚಿ ದಾನವರಿಗೆ ಅಮೃತ ಅಮರತ್ವ ಸಿಗದಂತೆ ಮಾಡುತ್ತಾನೆ. ಮೋಹಿನಿ ಅವತಾರದ ಇನ್ನೊಂದು ಪ್ರಮುಖ ಕಾರ್ಯ ಎಂದರೆ ಮಾಯೆಯಲ್ಲಿ ಮುಸುಕಿದ ಭಕ್ತರನ್ನು ಇಹಲೋಕದ ಮಾಯೆಯಿಂದ ಮುಕ್ತಗೊಳಿಸುವುದು. ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ ಎಂದು ಭಕ್ತರು ಗೊಂದಲಕ್ಕೆ ಬೀಳದಂತೆ ಕೈ ಹಿಡಿದು ಕಾಪಾಡುವುದು ಜಗನ್ನಾಥನ ಅವತಾರದ ಇನ್ನೊಂದು ಕಾರ್ಯವಾಗಿದೆ. ಬ್ರಹ್ಮೋತ್ಸವದ ಮೆರವಣಿಗೆಯಲ್ಲಿ ಮೋಹಿನಿ ರೂಪದಲ್ಲಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳಿ...

ಮೋಹಿನಿ ರೂಪದಲ್ಲಿ ತಿಮ್ಮಪ್ಪ

ಮೋಹಿನಿ ರೂಪದಲ್ಲಿ ತಿಮ್ಮಪ್ಪ

ನವರಾತ್ರಿ ಸಂದರ್ಭದಲ್ಲಿ 9 ದಿನಗಳ ತಿರುಮಲದಲ್ಲಿ ನಡೆಯುವ 'ಬ್ರಹ್ಮೋತ್ಸವ' ದ ಐದನೇ ದಿನದಂದು ಬೆಳಗ್ಗೆ ಶ್ರೀದೇವಿ, ಭೂದೇವಿ ಸಮೇತನಾದ ವೆಂಕಟೇಶ್ವರ ಸ್ವಾಮಿಗೆ ಶ್ರೀವಾರಿಗೆ ಮೋಹಿನಿ ಅವತಾರ ವಸ್ತ್ರ ತೊಡಿಸಲಾಗಿತ್ತು. ರಾತ್ರಿ ಗರುಢರೂಢನಾಗಿ ಸ್ವಾಮಿ ಕಾಣಿಸಿಕೊಂಡು ವೈಭವದ ಮೆರವಣಿಗೆಯಲ್ಲಿ ಸಾಗಿದನು.

ಶ್ರೀಕೃಷ್ಣ ಸ್ವರೂಪಿಯಾಗಿ ತಿಮ್ಮಪ್ಪ

ಶ್ರೀಕೃಷ್ಣ ಸ್ವರೂಪಿಯಾಗಿ ತಿಮ್ಮಪ್ಪ

ಶ್ರೀವೆಂಕಟೇಶ್ವರನನ್ನು ಬಾಲಕೃಷ್ಣನ ರೂಪದಲ್ಲಿ ಅಲಂಕರಿಸಿ ಹೂವಿನ ಪಲ್ಲಕ್ಕಿಗಳಲ್ಲಿ ಹೊತ್ತು ಮೆರವಣಿಗೆ ಮಾಡಲಾಗುತ್ತದೆ. ರೋಸ್ ವುಡ್ ಹಾಗೂ ದಂತದಿಂದ ಕೆತ್ತಲ್ಪಟ್ಟ ಸುಂದರವಾದ ಪಲ್ಲಕ್ಕಿಗಳನ್ನು ಮೈಸೂರಿನ ಮಹರಾಜರು ತಿಮ್ಮಪ್ಪನ ಸೇವೆಗಾಗಿ ನೀಡಿರುವುದು ವಿಶೇಷ

ಮಾಯೆಯ ಸ್ವರೂಪ ಮೋಹಿನಿ ರೂಪ

ಮಾಯೆಯ ಸ್ವರೂಪ ಮೋಹಿನಿ ರೂಪ

ಮೋಹಿನಿ ಅವತಾರದ ಇನ್ನೊಂದು ಪ್ರಮುಖ ಕಾರ್ಯ ಎಂದರೆ ಮಾಯೆಯಲ್ಲಿ ಮುಸುಕಿದ ಭಕ್ತರನ್ನು ಇಹಲೋಕದ ಮಾಯೆಯಿಂದ ಮುಕ್ತಗೊಳಿಸುವುದು. ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ ಎಂದು ಭಕ್ತರು ಗೊಂದಲಕ್ಕೆ ಬೀಳದಂತೆ ಕೈ ಹಿಡಿದು ಕಾಪಾಡುವುದು ಜಗನ್ನಾಥನ ಅವತಾರದ ಇನ್ನೊಂದು ಕಾರ್ಯವಾಗಿದೆ.

'ಬ್ರಹ್ಮೋತ್ಸವ ಅತಿಥಿಗಳು, ಗಣ್ಯರು

'ಬ್ರಹ್ಮೋತ್ಸವ ಅತಿಥಿಗಳು, ಗಣ್ಯರು

ಜಗದೀಶ್ ಚಂದ್ರ ಶರ್ಮ, ಕಾರ್ಯಕಾರಿ ಅಧಿಕಾರಿ ಎಂಜಿ ಗೋಪಾಲ್, ಕೆಎಸ್ ಶ್ರೀನಿವಾಸರಾಜು, ಪಿ ವೆಂಕಟರಾಮಿ ರೆಡ್ಡಿ, ಜಿ ಶ್ರೀನಿವಾಸರಾಜು ಶಿವಕುಮಾರ್ ರೆಡ್ಡಿ, ರಮಣ, ರಾಮರಾವ್ ಮುನಿರತ್ನಂ ರೆಡ್ಡಿ ಟಿಟಿಡಿ ಚೇರ್ಮನ್ ಕೆ ಬಪಿರಾಜು ಸೇರಿದಂತೆ ಅನೇಕ ಗಣ್ಯರು ಐದನೇ ದಿನ ಬ್ರಹ್ಮೋತ್ಸವ ಮೆರವಣಿಗೆ ಯಶಸ್ವಿಯಾಗುವಂತೆ ಮಾಡಿದರು.

ಭಕ್ತರಿಂದ ತಿಮ್ಮಪ್ಪನಿಗಾಗಿ ನರ್ತನ

ಭಕ್ತರಿಂದ ತಿಮ್ಮಪ್ಪನಿಗಾಗಿ ನರ್ತನ

ಶ್ರೀವಾರಿ ವಾಹನ ಮುಂದೆ ಭಕ್ತರು ವಿವಿಧ ವೇಷಧಾರಿಗಳಾಗಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಮಾಡುತ್ತಿರುವುದನ್ನು ಕಾಣಬಹುದು.

ಅರನೇ ದಿನದ ವಿಶೇಷ

ಅರನೇ ದಿನದ ವಿಶೇಷ

ತಿರುಮಲ ತಿರುಪತಿ ಬ್ರಹ್ಮೋತ್ಸವ ಆರನೇ ದಿನ ಹನುಮಂತ ವಾಹನ ಬೆಳಗ್ಗೆ ನಡೆದರೆ ಸಂಜೆ ಡೋಲೋತ್ಸವ 5 ರಿಂದ 6 ಗಂಟೆ ತನಕ ಹಾಗೂ ಸ್ವರ್ಣರಥ ಉತ್ಸವ ರಾತ್ರಿ ಗಜವಾಹನ ಸೇವೆ.

ಏಳನೇ ದಿನದ ವಿಶೇಷ

ಏಳನೇ ದಿನದ ವಿಶೇಷ

ತಿರುಮಲ ತಿರುಪತಿ ಬ್ರಹ್ಮೋತ್ಸವ ಏಳನೇ ದಿನ ದುರ್ಗಾಷ್ಟಮಿ ಹಬ್ಬ ಹಾಗೂ ರಥೋತ್ಸವ ರಾತ್ರಿ ವೇಳೆಗೆ ಅಶ್ವವಾಹನ ರೂಢನಾಗಿ ತಿಮ್ಮಪ್ಪನ ದರ್ಶನ ಸಿಗಲಿದೆ.

ಎಂಟನೇ ದಿನದ ವಿಶೇಷ

ಎಂಟನೇ ದಿನದ ವಿಶೇಷ

ತಿರುಮಲ ತಿರುಪತಿ ಬ್ರಹ್ಮೋತ್ಸವ ಎಂಟನೇ ಸೂರ್ಯಪ್ರಭ ವಾಹನ ಸಂಜೆ ವಿವಿಧ ಶುದ್ಧೀಕರಣ ಸ್ನಾನ. ರಾತ್ರಿ ಚಂದ್ರಪ್ರಭ ವಾಹನ.

ಒಂಭತ್ತನೇ ದಿನದ ವಿಶೇಷ

ಒಂಭತ್ತನೇ ದಿನದ ವಿಶೇಷ

ತಿರುಮಲ ತಿರುಪತಿ ಬ್ರಹ್ಮೋತ್ಸವ ಒಂಭತ್ತನೇ ದಿನ ಸ್ನಾಪಣ ತಿರುಮಂಜನಂ ಹಾಗೂ ಚಕ್ರಸ್ನಾನ ಹಾಗೂ ಚಿನ್ನದ ತಿರುಚಿವುತ್ಸವಂ ಧ್ವಜ ಅಹೋರಣ.

ದೇವರ ವಾಹನರೂಪಿ ದಿರಿಸಿನಲ್ಲಿ

ದೇವರ ವಾಹನರೂಪಿ ದಿರಿಸಿನಲ್ಲಿ

ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ. ಚಿಕ್ಕ ಮಕ್ಕಳು ದೇವ ದಾನವ ಭಾಗವತ, ದೇವರ ವಾಹನರೂಪಿ ದಿರಿಸಿನಲ್ಲಿ ಕಂಗೊಳಿಸಿದರು.

ಸಾಂಪ್ರದಾಯಿಕ ನೃತ್ಯ

ಸಾಂಪ್ರದಾಯಿಕ ನೃತ್ಯ

ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ.

ಎಲ್ಲೆಡೆಯಿಂದ ಹರಿದು ಬಂದಿರುವ ಭಕ್ತ ಸಾಗರ

ಎಲ್ಲೆಡೆಯಿಂದ ಹರಿದು ಬಂದಿರುವ ಭಕ್ತ ಸಾಗರ

ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮೂಲದ ಜನಪದ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಜನಸ್ತೋಮದ ನಡುವೆ ಬಹ್ಮೋತ್ಸವ

ಜನಸ್ತೋಮದ ನಡುವೆ ಬಹ್ಮೋತ್ಸವ

ಜನಸ್ತೋಮದ ನಡುವೆ ಬಹ್ಮೋತ್ಸವ ರಥಾರೂಢಿ ತಿರುಪತಿ ತಿಮ್ಮಪ್ಪ

ತಿರುಮಲದಲ್ಲಿ ನಡೆಯುವ 'ಬ್ರಹ್ಮೋತ್ಸವ

ತಿರುಮಲದಲ್ಲಿ ನಡೆಯುವ 'ಬ್ರಹ್ಮೋತ್ಸವ

ನವರಾತ್ರಿ ಸಂದರ್ಭದಲ್ಲಿ 9 ದಿನಗಳ ತಿರುಮಲದಲ್ಲಿ ನಡೆಯುವ 'ಬ್ರಹ್ಮೋತ್ಸವ

English summary
On the fifth day of Srivari Salakatla Brahmotsavam Lord Venkateswara enthralled his devotees by appearing in the form of celestial beauty Mohini (female costumes) and lived up to his reputation as an 'Alankara Priya' (well dressed, be-jewelled handsome personality).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X