ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಪವೃಕ್ಷವಾಹನರೂಢ ತಿಮ್ಮಪ್ಪನ ಕಾಣಿರೋ

By Mahesh
|
Google Oneindia Kannada News

ತಿರುಮಲ, ಅ.8: ತೆಲಂಗಾಣ ಪರ ಮತ್ತು ವಿರೋಧದ ಹೋರಾಟ ತೀವ್ರಸ್ವರೂಪ ಪಡೆದುಕೊಂಡು ಹಿಂಸಾಚಾರ ಉಂಟಾಗಿರುವ ಹಿನ್ನೆಲೆಯಲ್ಲಿ ತಿರುಮಲ ತಿರುಪತಿಯ ಜಗತ್ ಪ್ರಸಿದ್ಧ 'ಬ್ರಹ್ಮೋತ್ಸವ' ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂಬ ಗಾಳಿಸುದ್ದಿಯ ನಡುವೆ ಕಲ್ಪವೃಕ್ಷವಾಹನ ರೂಢನಾದ ತಿಮ್ಮಪ್ಪನ ವೈಭವದ ಉತ್ಸವ ಸಾಂಗವಾಗಿ ನಡೆದಿದೆ.

ತೆಲಂಗಾಣ ರಾಜ್ಯ ರಚನೆ ವಿರೋಧಿ ಸೀಮಾಂಧ್ರದಲ್ಲಿ ಬಂದ್ ಮುಂದುವರೆದಿದೆ. ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ, ತೆಲುಗುದೇಶಂ ಪಾರ್ಟಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಉಪವಾಸ ವ್ರತ ಮುಂದುವರೆದಿದೆ.

ಇತ್ತ ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ವಾರ್ಷಿಕ 'ಬ್ರಹ್ಮೋತ್ಸವ' ತಿರುಮಲದಲ್ಲಿ ಸಾಂಗೋಪಾಂಗವಾಗಿ ಸಾಗಿದೆ. ರಾಜ್ಯದೆಲ್ಲೆಡೆ ಕಿಡಿಗೇಡಿಗಳು ಸಿಕ್ಕಿದ್ದಕ್ಕೆಲ್ಲ ಬೆಂಕಿ ಹಚ್ಚುತ್ತಿದ್ದರೆ ತಿರುಮಲದಲ್ಲಿ ಭಕ್ತಾದಿಗಳು ಕೋಲಾಟವಾಡುತ್ತ ಬಾಲಾಜಿಯ ನಾಮಸ್ಮರಣೆಯಲ್ಲಿ ಇಡೀ ಜಗತ್ತನ್ನೇ ಮರೆತಿದ್ದಾರೆ. ಸೀಮಾಂಧ್ರ, ರಾಯಲಸೀಮೆ ಭಾಗದ ವಿದ್ಯುತ್ ಪ್ರಸರಣಲ್ಲಿ ವ್ಯತ್ಯಯ ಮುಂದುವರೆದಿದೆ. ಸುಮಾರು 7 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ, ಪ್ರಸರಣ ನಿಲ್ಲಿಸಿವೆ. [ತಿರುಮಲ ಬ್ರಹ್ಮೋತ್ಸವದ ಚಿತ್ರಪಟ]

ಅ.5ರ ಶನಿವಾರದಿಂದ ಆರಂಭಗೊಂಡಿರುವ 9 ದಿನಗಳ 'ಬ್ರಹ್ಮೋತ್ಸವ' ಇಂದಿಗೆ ನಾಲ್ಕನೇ ದಿನ ಕಂಡಿದೆ. ಬೆಳಗ್ಗೆ ಹಾಗೂ ಸಂಜೆ ಪ್ರತ್ಯೇಕ ವಾಹನ ರೂಢನಾಗಿ ತಿಮ್ಮಪ್ಪನನ್ನು ಮೆರವಣಿಗೆ ಮಾಡಲಾಗುತ್ತದೆ. ಬೆಳಗ್ಗೆ ಗೋವಿಂದರಾಜಸ್ವಾಮಿ ದೇಗುಲದ ಬಳಿ ಕೃಷ್ಣಾವತಾರವೇ ಮೈತಳೆದಂತೆ ಶ್ರೀದೇವಿ, ಭೂದೇವಿ ಸಮೇತನಾದ ವೆಂಕಟೇಶ್ವರ ಸ್ವಾಮಿಯೂ ಕಲ್ಪವೃಕ್ಷ ವಾಹನ ರೂಢನಾಗಿ ಭಕ್ತರಿಗೆ ದರ್ಶನ ಕೊಟ್ಟಿದ್ದಾನೆ. ನಾಲ್ಕನೇ ದಿನ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ

ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ

ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುತ್ತಿರುವ ವೆಂಕಟೇಶ್ವರನನ್ನು ಸೃಷ್ಟಿಕರ್ತ ಬ್ರಹ್ಮನೇ ಸ್ವತಃ ಪವಿತ್ರ ಪುಷ್ಕರಣಿಯ ಪಕ್ಕದಲ್ಲಿ ಪೂಜಿಸುತ್ತಾನೆ ಎಂಬ ಕಥೆ ಜನಜನಿತವಾಗಿದೆ. ಇದಕ್ಕಾಗಿಯೇ ನವರಾತ್ರಿಯ ಸಂದರ್ಭದಲ್ಲಿ ಪ್ರತಿವರ್ಷ ಇಲ್ಲಿ ಬ್ರಹ್ಮೋತ್ಸವವನ್ನು ಆಯೋಜಿಸಲಾಗುತ್ತದೆ.

ಭಕ್ತ ಸಮೂಹ

ಭಕ್ತ ಸಮೂಹ

ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವದ ಕಲ್ಪವೃಕ್ಷ ವಾಹನರೂಢ ತಿಮ್ಮಪ್ಪನನ್ನು ನೋಡಿ ಕೃತಾರ್ಥರಾದ ಭಕ್ತ ಸಮೂಹ

ಕಲ್ಪವೃಕ್ಷ ವಾಹನರೂಢ ತಿಮ್ಮಪ್ಪ

ಕಲ್ಪವೃಕ್ಷ ವಾಹನರೂಢ ತಿಮ್ಮಪ್ಪ

ಕಲ್ಪವೃಕ್ಷ ವಾಹನರೂಢ ತಿಮ್ಮಪ್ಪನ ಮೆರವಣಿಗೆ ಹೊರಟಿದೆ ನೋಡಿ

ಸನ್ಮಾನ ಕಾರ್ಯಕ್ರಮ

ಸನ್ಮಾನ ಕಾರ್ಯಕ್ರಮ

ವಿವಿಧಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಗಣ್ಯರಿಗೆ ತಿಮ್ಮಪ್ಪನ ಮುಂದೆ ಸನ್ಮಾನ ಮಾಡಿಸಿಕೊಳ್ಳುವ ಭಾಗ್ಯ

ದೇವರ ಮೆರವಣಿಗೆ

ದೇವರ ಮೆರವಣಿಗೆ

ತಿರುಮಲ ತಿರುಪತಿ ಬ್ರಹ್ಮೋತ್ಸವದ ಕಲ್ಪವೃಕ್ಷ ವಾಹನರೂಢ ತಿಮ್ಮಪ್ಪನ ಮೆರವಣಿಗೆಯ ಮತ್ತೊಂದು ನೋಟ

ಬ್ರಹ್ಮೋತ್ಸವದ ರಂಗು

ಬ್ರಹ್ಮೋತ್ಸವದ ರಂಗು

ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ವಿವಿಧ ವಾಹನ ಸೇವೆಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.

ನಾಲ್ಕನೇ ದಿನವಾದ ಇಂದು ಬೆಳಗ್ಗೆ ಕಲ್ಪವೃಕ್ಷ ವಾಹನ ಸೇವೆ ರಾತ್ರಿ ಸರ್ವಭೂಪಾಲ ವಾಹನ ಸೇವೆ ಸಲ್ಲಿಸಲಾಗುತ್ತದೆ.

ವಾಹನ ಸೇವೆ ವಿವರ

ವಾಹನ ಸೇವೆ ವಿವರ

ಆಶ್ವಯುಜ ಮಾಸದಲ್ಲಿ ನಡೆಯುವ ಈ ವಾಹನ ಉತ್ಸವ ಸೇವೆ ಮೊದಲೇ ಹೇಳಿದಂತೆ ದಿನಕ್ಕೆ ಎರಡು ಬಾರಿ ನಡೆಸಲಾಗುತ್ತದೆ.

ವಾಹನ ಸೇವೆ ಮೊದಲ ದಿನ

ವಾಹನ ಸೇವೆ ಮೊದಲ ದಿನ

ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ವಿವಿಧ ವಾಹನ ಸೇವೆಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಮೊದಲ ದಿನ ಧ್ವಜಾರೋಹಣ ಇರುತ್ತದೆ. ಪೆದ್ದ ಶೇಷ ವಾಹನ ರಾತ್ರಿ 9 ರಿಂದ 11 ಗಂಟೆ ತನಕ ವಾಹನ ಸೇವೆ ನಡೆಸಲಾಗಿದೆ.
ವಾಹನ ಸೇವೆ ಎರಡನೇ ದಿನ

ವಾಹನ ಸೇವೆ ಎರಡನೇ ದಿನ

ಎರಡನೇ ದಿನ ಚಿಕ್ಕ ಶೇಷ ವಾಹನ ಸೇವೆ ಬೆಳಗ್ಗೆ 9 ರಿಂದ 11 ಗಂಟೆ ತನಕ ನಡೆಸಲಾಗಿದೆ. ರಾತ್ರಿ ರಾತ್ರಿ 9 ರಿಂದ 11 ಗಂಟೆ ತನಕ ಹಂಸವಾಹನದಲ್ಲಿ ಸ್ವಾಮಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗಿದೆ.

ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ವಿವಿಧ ವಾಹನ ಸೇವೆಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.
ವಾಹನ ಸೇವೆ ಮೂರನೇ ದಿನ

ವಾಹನ ಸೇವೆ ಮೂರನೇ ದಿನ

ಸಿಂಹವಾಹನರೂಢ ನಾದ ತಿಮ್ಮಪ್ಪನನ್ನು ಮೂರನೇ ದಿನ ಕಾಣಬಹುದು. ರಾತ್ರಿ ವೇಳೆ ಮತ್ಯಾಪು ಪಂಡಿರಿ ವಾಹನ ಸೇವೆ ಕಾಣಬಹುದು.

ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ವಿವಿಧ ವಾಹನ ಸೇವೆಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.
ವಾಹನ ಸೇವೆ ನಾಲ್ಕನೇ ದಿನ

ವಾಹನ ಸೇವೆ ನಾಲ್ಕನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವದ ಭಾಗವಾಗಿ ಕಲ್ಪವೃಕ್ಷ ವಾಹನರೂಢ ತಿಮ್ಮಪ್ಪನ ಮೆರವಣಿಗೆ ಬೆಳಗ್ಗೆ ಹಾಗೂ ರಾತ್ರಿ ವೇಳೆ ಸರ್ವಭೂಪಾಲ ವಾಹನ ಸೇವೆ

ವಾಹನ ಸೇವೆ ಐದನೇ ದಿನ

ವಾಹನ ಸೇವೆ ಐದನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವ ಐದನೇದಿನ ಬೆಳಗ್ಗೆ ಶ್ರೀವಾರಿಗೆ ಮೋಹಿನಿ ಅವತಾರ ವಸ್ತ್ರ ತೊಡಿಸಲಾಗುತ್ತದೆ. ರಾತ್ರಿ ಗರುಢರೂಢನಾಗಿ ಸ್ವಾಮಿ ಕಾಣಿಸಿಕೊಳ್ಳಲಿದ್ದಾನೆ

ವಾಹನ ಸೇವೆ ಆರನೇ ದಿನ

ವಾಹನ ಸೇವೆ ಆರನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವ ಆರನೇ ದಿನ ಹನುಮಂತ ವಾಹನ ಬೆಳಗ್ಗೆ ನಡೆದರೆ ಸಂಜೆ ಡೋಲೋತ್ಸವ 5 ರಿಂದ 6 ಗಂಟೆ ತನಕ ಹಾಗೂ ಸ್ವರ್ಣರಥ ಉತ್ಸವ ರಾತ್ರಿ ಗಜವಾಹನ ಸೇವೆ

ವಾಹನ ಸೇವೆ ಏಳನೇ ದಿನ

ವಾಹನ ಸೇವೆ ಏಳನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವ ಏಳನೇ ದಿನ ದುರ್ಗಾಷ್ಟಮಿ ಹಬ್ಬ ಹಾಗೂ ರಥೋತ್ಸವ ರಾತ್ರಿ ವೇಳೆಗೆ ಅಶ್ವವಾಹನ ರೂಢನಾಗಿ ತಿಮ್ಮಪ್ಪನ ದರ್ಶನ ಸಿಗಲಿದೆ

ವಾಹನ ಸೇವೆ ಎಂಟನೇ ದಿನ

ವಾಹನ ಸೇವೆ ಎಂಟನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವ ಎಂಟನೇ ಸೂರ್ಯಪ್ರಭ ವಾಹನ ಸಂಜೆ ವಿವಿಧ ಶುದ್ಧೀಕರಣ ಸ್ನಾನ. ರಾತ್ರಿ ಚಂದ್ರಪ್ರಭ ವಾಹನ

ವಾಹನ ಸೇವೆ ಒಂಭತ್ತನೇ ದಿನ

ವಾಹನ ಸೇವೆ ಒಂಭತ್ತನೇ ದಿನ

ತಿರುಮಲ ತಿರುಪತಿ ಬ್ರಹ್ಮೋತ್ಸವ ಒಂಭತ್ತನೇ ದಿನ ಸ್ನಾಪಣ ತಿರುಮಂಜನಂ ಹಾಗೂ ಚಕ್ರಸ್ನಾನ ಹಾಗೂ ಚಿನ್ನದ ತಿರುಚಿವುತ್ಸವಂ ಧ್ವಜ ಅಹೋರಣ

English summary
Processional deities of Lord Govindaraja Swamy along with His consorts Sridevi and Bhudevi were taken out in a grand procession atop Kalpavriksha Vahana in form of Sri Krishna Avataram as part of fourth day ongoing nine day Annual Brahmotsavam in Sri Govindaraja Swamy Temple, Tirupati on Tuesday(Oct.8) morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X