ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮಳೆಗೆ ತತ್ತರಿಸಿದ ಆಂಧ್ರದ ದೇಗುಲ ನಗರಿಗಳು

By Mahesh
|
Google Oneindia Kannada News

ಅಮರಾವತಿ, ನ.18: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಜೊತೆಗೆ ಆಂಧ್ರಪ್ರದೇಶದ ಮೇಲೂ ಆಗಿದೆ. ಭಾರಿ ಮಳೆಯ ಜೊತೆಗೆ ತಿರುಮಲ ಸೇರಿದಂತೆ ಅನೇಕ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ಆಂಧ್ರದಲ್ಲಿ ಸುಮಾರು 22 ಜನ ಬಲಿಯಾಗಿದ್ದಾರೆ.

ಕುಂಭದ್ರೋಣ ಮಳೆ ಸೃಷ್ಟಿಸುತ್ತಿರುವ ಸಮಸ್ಯೆ ಆಂಧ್ರದ ಪ್ರಮುಖ ದೇಗುಲಗಳಿಗೆ ಜಲದಿಗ್ಬಂಧನ ಮಾಡಿಬಿಟ್ಟಿದೆ. ಅನೇಕ ಊರುಗಳ ರಸ್ತೆ ಮಾರ್ಗ ಕಡಿತಗೊಂಡಿದ್ದು, ಕೆಲ ಮಾರ್ಗಗಳ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಚಿತ್ತೂರು, ನೆಲ್ಲೂರು, ಪ್ರಕಾಶಂ ಸೇರಿದಂತೆ ಅನೇಕ ಅನೇಕ ಭಾಗಗಳಲ್ಲಿ ಸತತವಾಗಿ ಮಳೆ ಸುರಿಯುತ್ತಲೇ ಇದೆ. [ಮಳೆ ಆರ್ಭಟಕ್ಕೆ 15ಕ್ಕೂ ಅಧಿಕ ರೈಲು ಸಂಚಾರ ರದ್ದು]

ನೆಲ್ಲೂರು, ಮಚಲೀಪಟ್ಟಣಂ, ವಿಜಯವಾಡ, ಓಂಗೊಳೆ, ಗುಂಟೂರು, ಪ್ರಕಾಶಂ, ಕಾಕಿನಾಡ, ಚಿತ್ತೂರು, ಕಡಪ ಹಾಗೂ ಆನಂತಪುರ ಮುಂತಾದೆಡೆ ಭಾರಿ ಮಳೆಯಾಗುತ್ತಿದೆ.

ಆಂಧ್ರದಲ್ಲಿ ಎಲ್ಲೆಲ್ಲಿ ಭಾರಿ ಮಳೆ?

ಆಂಧ್ರದಲ್ಲಿ ಎಲ್ಲೆಲ್ಲಿ ಭಾರಿ ಮಳೆ?

ನೆಲ್ಲೂರು, ಮಚಲೀಪಟ್ಟಣಂ, ವಿಜಯವಾಡ, ಓಂಗೊಳೆ, ಗುಂಟೂರು, ಪ್ರಕಾಶಂ, ಕಾಕಿನಾಡ, ಚಿತ್ತೂರು, ಕಡಪ ಹಾಗೂ ಆನಂತಪುರ ಮುಂತಾದೆಡೆ ಭಾರಿ ಮಳೆಯಾಗುತ್ತಿದೆ.

ಎಷ್ಟು ಪ್ರಮಾಣದ ಮಳೆ ಬಿದ್ದಿದೆ?

ಎಷ್ಟು ಪ್ರಮಾಣದ ಮಳೆ ಬಿದ್ದಿದೆ?

ಕಳೆದ 24 ಗಂಟೆಗಳಲ್ಲಿ ನೆಲ್ಲೂರಿನಲ್ಲಿ 123 ಎಂಎಂ, ವಿಜಯವಾಡ 46ಎಂಎಂ, ಓಂಗೊಳೆ 43ಎಂಎಂ, ಕಾಕಿನಾಡ 21ಎಂಎಂ, ಅನಂತಪುರ 13ಎಂಎಂ ಮಳೆಯಾಗಿದೆ. ತಮಿಳುನಾಡಿನಲ್ಲಿ ಚೆನ್ನೈ 41ಎಂಎಂ, ಕಡಲೂರು 19 ಎಂಎಂ ಮಳೆಯಾಗಿದೆ.

ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಕುಂಭದ್ರೋಣ ಮಳೆ ಸೃಷ್ಟಿಸುತ್ತಿರುವ ಸಮಸ್ಯೆ ಆಂಧ್ರದ ಪ್ರಮುಖ ದೇಗುಲಗಳಿಗೆ ಜಲದಿಗ್ಬಂಧನ ಮಾಡಿಬಿಟ್ಟಿದೆ. ಅನೇಕ ಊರುಗಳ ರಸ್ತೆ ಮಾರ್ಗ ಕಡಿತಗೊಂಡಿದ್ದು, ಕೆಲ ಮಾರ್ಗಗಳ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಸೇನೆ ನೆರವಿಗೆ ಆಂಧ್ರ ಸಿಎಂ ಮನವಿ

ಸೇನೆ ನೆರವಿಗೆ ಆಂಧ್ರ ಸಿಎಂ ಮನವಿ

ಬುಧವಾರದಂದು ಪ್ರವಾಹ ಪೀಡಿತ ಆಂಧ್ರಪ್ರದೇಶದ ಕೆಲ ಭಾಗಗಳ ವೀಕ್ಷಣೆ ಮಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂತ್ರಸ್ತರ ನೆರವಿಗೆ ಕೇಂದ್ರ ವಿಪತ್ತು ನಿರ್ವಹಣಾ ದಳದ ಜೊತೆಗೆ ಸೇನೆಯ ನೆರವು ಕೋರಲಾಗುವುದು ಎಂದರು.

ರಸ್ತೆ ಸಂಪರ್ಕ ಕಡಿತ

ರಸ್ತೆ ಸಂಪರ್ಕ ಕಡಿತ

ಭಾರಿ ಮಳೆಯಿಂದ ಹಲವೆಡೆ ರಸ್ತೆಗಳು ಕುಸಿದಿದ್ದು, ಸೇತುವೆಗಳು ನೀರು ಪಾಲಾಗಿವೆ. ಹೀಗಾಗಿ ಹೆದ್ದಾರಿಗಳಲ್ಲಿ ನೀರು ತುಂಬಿಕೊಂಡು ಅನೇಕ ಕಡೆಗಳಲ್ಲಿ ರಸ್ತೆ ಸಂಚಾರ ದಟ್ಟಣೆ ಅಧಿಕವಾಗಿದೆ.

ತಿರುಮಲ ನಗರದಲ್ಲಿ ಭಕ್ತರ ಪರದಾಟ

ತಿರುಮಲ ನಗರದಲ್ಲಿ ಭಕ್ತರ ಪರದಾಟ

ತಿರುಮಲ ನಗರ ವಾರ್ಷಿಕವಾಗಿ 1649 ಎಂಎಂ ಮಳೆ ಕಂಡಿದೆ ಈ ಬಾರಿ ವಾಡಿಕೆಗಿಂತ 285ಎಂಎಂ ಹೆಚ್ಚಿಗೆ ಮಳೆ ಸುರಿದಿದೆ. ಆಗ್ನೇಯ ಮಾರುತಗಳು ಇನ್ನಷ್ಟು ಮಳೆ ಬರುವ ಸೂಚನೆಯೂ ಸಿಕ್ಕಿದೆ.

ಕುಡಿಯುವ ನೀರಿನ ಸಮಸ್ಯೆ ಇನ್ನಿಲ್ಲ

ಕುಡಿಯುವ ನೀರಿನ ಸಮಸ್ಯೆ ಇನ್ನಿಲ್ಲ

ಈಗ ಸುರಿದಿರುವ ಮಳೆಯಿಂದ ಮುಂದಿನ 388 ದಿನಗಳಿಗೆ ಸಾಕಾಗುವಷ್ಟು ನೀರು ಸಿಕ್ಕಿದೆ ಎಂದು ಟಿಟಿಡಿ ಕಾರ್ಯಕಾರಿ ಇಂಜಿನಿಯರ್ ಎ ನರಸಿಂಹ ಮೂರ್ತಿ ಹೇಳಿದ್ದಾರೆ. ಪಾಪಸ್ವಿನಾಶಂ ಹಾಗೂ ಗೋಗರ್ಭ ಡ್ಯಾಂ ಗಳ ಕ್ರೆಸ್ಟ್ ಗೇಟ್ ಗಳನ್ನು ಸತತವಾಗಿ ಮೂರು ದಿನ ಓಪನ್ ಮಾಡಿ ಹೆಚ್ಚುವರಿ ನೀರು ಹೊರ ಬಿಡಲಾಗಿದೆ.

ಧಾರಾಕಾರ ಮಳೆಗೆ ಅಣೆಕಟ್ಟುಗಳು ಭರ್ತಿ

ಧಾರಾಕಾರ ಮಳೆಗೆ ಅಣೆಕಟ್ಟುಗಳು ಭರ್ತಿ

ಕುಮಾರಧಾರಾ ಹಾಗೂ ಪುಷ್ಪಧಾರಾ ಯೋಜನೆಗಳ ಪ್ರದೇಶಗಳಲ್ಲಿ ಕ್ರಮವಾಗಿ 780 ಹಾಗೂ 751 ಎಂಎಂ ಮಳೆಯಾಗಿದೆ.

ಆಕಾಶಗಂಗೆ ತುಂಬಾ ನೀರು

ಆಕಾಶಗಂಗೆ ತುಂಬಾ ನೀರು

ಸದಾ ಪ್ರವಾಸಿಗರಿಂದ ಕೂಡಿರುತ್ತಿದ್ದ ಆಕಾಶ ಗಂಗೆ ಜಲಪಾತ, ಅಣೆಕಟ್ಟು ಪ್ರದೇಶದಲ್ಲಿ ಸುಮಾರು 650ಎಂಎಂ ಮಳೆಯಾಗಿದೆ. ಗೋಗರ್ಭ ಅಣೆಕಟ್ಟು ಪ್ರದೇಶದಲ್ಲಿ ಅತಿಹೆಚ್ಚು 801ಎಂಎಂ ಮಳೆ ಸುರಿದಿದೆ. ಹವಾಮಾನ ಮುನ್ಸೂಚನೆಯಂತೆ ಇನ್ನೆರಡು ದಿನ ಈ ಪ್ರದೇಶದಲ್ಲಿ ಮಳೆಯಾಗಲಿದೆ.

English summary
Major part of Andhra Pradesh has been under siege by incessant rain. The districts of north coastal Andhra, including Visakhapatnam city, have been experiencing heavy rainfall since Tuesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X