ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ವಿವಾದ: ರಾಜಕಾರಣಿಗಳ ನಂಟು ಮತ್ತು ಲಂಚದ ವಿವರ ಬಾಯ್ಬಿಟ್ಟ ಉದ್ಯಮಿ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 29: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ವಿರುದ್ಧದ ಪ್ರಕರಣದ ಕೇಂದ್ರಬಿಂದು ಆಗಿರುವ ಹೈದರಾಬಾದ್ ಮೂಲಕ ಉದ್ಯಮಿ ಸನಾ ಸತೀಶ್ ಬಾಬು ಅವರ ಮೇಲಿನ ವಿಚಾರಣೆಯನ್ನು ಸಿಬಿಐ ತೀವ್ರಗೊಳಿಸಿದೆ.

ಬಾಬು ಅವರಿಗೆ ಸೇರಿದ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಪೆದ್ದಪುರಂ ಮತ್ತು ಸಮಲ್ಕೋಟ್‌ಗಳಲ್ಲಿ ಇರುವ ಅವರ ಸಂಬಂಧಿಕರ ಆಸ್ತಿಪಾಸ್ತಿಗಳ ಕುರಿತು ಸಹ ಸಿಬಿಐ ತನಿಖೆ ನಡೆಸುತ್ತಿದೆ. ಕ್ರಿಕೆಟ್ ಕೋಚ್ ಒಬ್ಬರಿಗೆ ಸೇರಿದ ಫಾರ್ಮಸಿ ಕಾಲೇಜ್‌ನಲ್ಲಿಯೂ ಸಂಸ್ಥೆಯ ತಂಡ ಪರಿಶೀಲನೆ ನಡೆಸಿದೆ.

ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?

ದೆಹಲಿಯಿಂದ ಬಂದಿರುವ ಸಿಬಿಐನ ತಂಡ, ಹೈದರಾಬಾದ್‌ನಲ್ಲಿ ಇಬ್ಬರು ತೆಲುಗು ಅನುವಾದಕರ ಸಹಾಯದೊಂದಿಗೆ ವಿಚಾರಣೆ ನಡೆಸುತ್ತಿದೆ.

ಮಾಂಸ ವ್ಯಾಪಾರಿ ಮೊಯಿನ್ ಖುರೇಷಿ ವಿರುದ್ಧದ ಪ್ರಕರಣವನ್ನು ಕೈಬಿಡಲು ರಾಕೇಶ್ ಅಸ್ಥಾನಾ ಅವರಿಗೆ ಲಂಚ ನೀಡಿದ ಆರೋಪ ಬಾಬು ಅವರ ಮೇಲಿದೆ.

ಆದರೆ, ಇದೇ ಪ್ರಕರಣದಲ್ಲಿ ನಿರ್ದೋಷಿ ಎಂದು ಕ್ಲೀನ್ ಚಿಟ್ ಪಡೆದುಕೊಳ್ಳಲು ಬಾಬು, ಅಲೋಕ್ ವರ್ಮಾ ಅವರಿಗೆ ಎರಡು ಕೋಟಿ ರೂ. ನೀಡಿದ್ದಾರೆ ಎಂದು ಅಸ್ಥಾನಾ ಆರೋಪಿಸಿದ್ದಾರೆ.

ಸಿಬಿಐ ಮುಖ್ಯಸ್ಥರು ಸೀಜರ್‌ನ ಪತ್ನಿಯಂತೆ, ಸಂಶಯಾತೀತರಾಗಿರಬೇಕು: ಅರುಣ್ ಜೇಟ್ಲಿಸಿಬಿಐ ಮುಖ್ಯಸ್ಥರು ಸೀಜರ್‌ನ ಪತ್ನಿಯಂತೆ, ಸಂಶಯಾತೀತರಾಗಿರಬೇಕು: ಅರುಣ್ ಜೇಟ್ಲಿ

ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಬಳಿಕ ಇಬ್ಬರೂ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಕಳೆದ ವಾರ ರಾತ್ರೋ ರಾತ್ರಿ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.

ಸಂಭಾಷಣೆ ಪರಿಶೀಲನೆ

ಸಂಭಾಷಣೆ ಪರಿಶೀಲನೆ

ಈ ಪ್ರಕರಣದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಮೂವರು ರಾಜಕಾರಣಿಗಳ ಮೇಲೆಯೂ ಸಿಬಿಐ ನಿಗಾ ವಹಿಸಿದೆ. ಮೊಯಿನ್ ಖುರೇಷಿ ಮತ್ತು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವು ರಾಜಕಾರಣಿಗಳ ಮಧ್ಯೆ ನಡೆದ ಸಂಭಾಷಣೆಯನ್ನು ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ ಎಂದು ಮೂಲಗಳು ಒನ್ ಇಂಡಿಯಾಕ್ಕೆ ತಿಳಿಸಿವೆ.

ಮನೋಜ್ ಪ್ರಸಾದ್‌ಗೆ ಹಣ

ಮನೋಜ್ ಪ್ರಸಾದ್‌ಗೆ ಹಣ

ಹೈದರಾಬಾದ್‌ನ ಗಚಿಬೌಲಿಯ ನಿವಾಸಿಯಾಗಿರುವ ಸತೀಶ್ ಬಾಬು ಸನಾ, ದುಬೈ ಮೂಲದ ಉದ್ಯಮಿ ಮನೋಜ್ ಪ್ರಸಾದ್ ಅವರ ಸೂಚನೆಯಂತೆ ದೆಹಲಿಯಲ್ಲಿ ಅವರಿಗೆ 2018ರ ಅಕ್ಟೋಬರ್ 10ರಂದು ಎರಡು ಕೋಟಿ ರೂ. ಹಣ ನೀಡುವುದಾಗಿ ಭರವಸೆ ನೀಡಿದ್ದರು.

ಮನೋಜ್ ಪ್ರಸಾದ್ ಅವರಿಗೆ ಮೊದಲು 25 ಲಕ್ಷ ರೂ ಮತ್ತು ಬಳಿಕ 25 ಸಾವಿರ ದಿರ್ಹಾಮ್ಸ್ (ದುಬೈ ಕರೆನ್ಸಿ) ನೀಡಿದ್ದ ಬಾಬು, ನಂತರ 30 ಸಾವಿರ ದಿರ್ಹಾಮ್ಸ್ ಮೊತ್ತವನ್ನು ಮುತ್ತಿನ ಮಣಿಯ ರೂಪದಲ್ಲಿ ಪ್ರಸಾದ್‌ಗೆ ನೀಡಿದ್ದರು.

ಮಗಳ ಮದುವೆಗೆ ಪುಕ್ಕಟೆ ಸೇವೆ ಪಡೆದಿದ್ದ ಸಿಬಿಐನ ರಾಕೇಶ್ ಅಸ್ಥಾನಾಮಗಳ ಮದುವೆಗೆ ಪುಕ್ಕಟೆ ಸೇವೆ ಪಡೆದಿದ್ದ ಸಿಬಿಐನ ರಾಕೇಶ್ ಅಸ್ಥಾನಾ

ಕ್ಲೀನ್‌ಚಿಟ್‌ಗೆ ಲಂಚ

ಖುರೇಷಿ ವಿರುದ್ಧದ ಪ್ರಕರಣದ ತನಿಖೆ ಆರಂಭಿಸಿದಾಗ ಸಿಬಿಐಗೆ ಈ ಮಾಹಿತಿಗಳು ದೊರಕಿದ್ದವು. ಖುರೇಷಿ ಹವಾಲಾ ವ್ಯವಹಾರ ನಡೆಸಿದ್ದಾನೆ ಎಂದು ಸಿಬಿಐ ಆರೋಪಿಸಿದೆ. ಮನೋಜ್ ಪ್ರಸಾದ್, ಅಸ್ಥಾನಾ ಅವರಿಗೆ ಹತ್ತಿರದವರಾಗಿದ್ದು, ಖುರೇಷಿಗೆ ಕ್ಲೀನ್ ಚಿಟ್ ಪಡೆಯಲು ಪ್ರಸಾದ್ ಸಹೋದರ ಸೋಮೇಶ್ ಸಹಕಾರ ನೀಡುವುದಾಗಿ ಬಾಬು ತಿಳಿಸಿದ್ದರು.

ರಾಜಕಾರಣಿಗಳ ಹೆಸರು ಬಹಿರಂಗ

ರಾಜಕಾರಣಿಗಳ ಹೆಸರು ಬಹಿರಂಗ

ವಿಚಾರಣೆ ವೇಳೆ ಮೂವರು ಪ್ರಮುಖ ರಾಜಕಾರಣಿಗಳ ಹೆಸರು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ಈ ರಾಜಕಾರಣಿಗಳ ಜತೆ ನಡೆಸಿದ ಸಂಭಾಷಣೆಗಳನ್ನು ಸಿಬಿಐ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ಕಲೆ ಹಾಕಲು ಸಿಬಿಐ ತಂಡ ನಿರಂತರವಾಗಿ ಹೈದರಾಬಾದ್‌ಗೆ ಭೇಟಿ ನೀಡಲಿದೆ. ವಿಚಾರಣೆ ವೇಳೆ ಬಾಬು ಆಭರಣ ವ್ಯಾಪಾರಿಯೊಬ್ಬರು ಮತ್ತು ಖುರೇಷಿ ಅವರ ಹೆಸರುಗಳನ್ನು ಹೇಳಿಕೆಯಲ್ಲಿ ದಾಖಲಿಸಿದ್ದಾರೆ.

ಸುಪ್ರೀಂ ಮೆಟ್ಟಿಲೇರಿದ ಬಾಬು

ಸುಪ್ರೀಂ ಮೆಟ್ಟಿಲೇರಿದ ಬಾಬು

ವಿಚಾರಣೆಗೆ ಒಳಗಾಗುವಂತೆ ಸಿಬಿಐ ಸಮನ್ಸ್ ನೀಡಿದ ಬಳಿಕ ಸತೀಶ್ ಬಾಬು ಸುಪ್ರೀಂಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಬಾಬು ಅವರು ಬಂಧನಕ್ಕೆ ಒಳಗಾಗುವ ಭೀತಿ ಇರುವುದರಿಂದ, ಅದರ ವಿರುದ್ಧ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

 ಸಿಬಿಐ ವಿವಾದ: 10 ದಿನಗಳಲ್ಲಿ ವರದಿ ಸಲ್ಲಿಸಲು ಸಿವಿಸಿಗೆ ಸುಪ್ರೀಂಕೋರ್ಟ್ ಸೂಚನೆ ಸಿಬಿಐ ವಿವಾದ: 10 ದಿನಗಳಲ್ಲಿ ವರದಿ ಸಲ್ಲಿಸಲು ಸಿವಿಸಿಗೆ ಸುಪ್ರೀಂಕೋರ್ಟ್ ಸೂಚನೆ

English summary
The Central Bureau of Investigation has intensified its probe against Hyderabad based businessman Sana Sathish Babu, who is centric to the case against CBI director Alok Verma and his deputy Rakesh Asthana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X