ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ, ತೆಲಂಗಾಣದಲ್ಲಿ ತೆರಿಗೆ ರಹಿತ 2 ಸಾವಿರ ಕೋಟಿ ಶೋಧಕ್ಕೆ ಐಟಿ ದಾಳಿ

|
Google Oneindia Kannada News

ಹೈದರಾಬಾದ್, ಫೆಬ್ರವರಿ 14: ಆಂಧ್ರ, ತೆಲಂಗಾಣದಲ್ಲಿ ತೆರಿಗೆ ಪಾವತಿಸದ ಕುಬೇರರ ಮೇಲೆ ಐಟಿ ಇಲಾಖೆ ಭಾರಿ ದಾಳಿ ನಡೆಸಿದೆ.

ತೆರಿಗೆ ರಹಿತ 2 ಸಾವಿರ ಕೋಟಿ ಶೋಧಕ್ಕೆ ಐಟಿ ದಾಳಿ ನಡೆಸಲಾಗಿದೆ.ಕಳೆದ ವಾರ ಮೂರು ಮೂಲಸೌಕರ್ಯ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ.

ಮಾಜಿ ಸಚಿವ ಎಚ್ಡಿ ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿಮಾಜಿ ಸಚಿವ ಎಚ್ಡಿ ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿ

ಐಟಿ ಇಲಾಖೆ ಅಧಿಕಾರಿಗಳು ಫೆಬ್ರವರಿ 6 ರಂದು ಹೈದರಾಬಾದ್, ವಿಜಯವಾಡ, ಕಡ್ಡಪಾ, ವಿಶಾಖಪಟ್ಟಣಂ, ದೆಹಲಿ ಹಾಗೂ ಪುಣೆಯಲ್ಲಿ ಸುಮಾರು 40 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ.

In Andhra Telangana Income Tax Raids Over Uncovered Rs 2000 Crore

ಬೋಗಸ್ ಸಬ್ ಕಾಂಟ್ರ್ಯಾಕ್ಟರ್‌ಗಳು, ಬೋಗಸ್ ಬಿಲ್ಲಿಂಗ್ ಮಾಡುವವರ ಮೇಲೆ ನಿಗಾ ಇರಿಸಲಾಗಿದೆ. ದಾಳಿ ನಡೆದ ಪ್ರದೇಶದಲ್ಲಿ ಸಾಕಷ್ಟು ದಾಖಲೆಗಳು ಲಭ್ಯವಾಗಿವೆ. ವಾಟ್ಸಪ್, ಇ-ಮೇಲ್‌ಗಳನ್ನು ಪರಿಶೀಲಿಸಲಾಗುತ್ತಿದೆ.

ಮಾಜಿ ಪರ್ಸನಲ್ ಸೆಕ್ರೇಟರಿಗಳ ಬಳಿ ಕೂಡ ಪರಿಶೀಲನೆ ನಡೆಸಲಾಗಿದೆ. ದಾಳಿಯು ಇನ್‌ಫ್ರಾಸ್ಟ್ರಕ್ಚರ್ ಕಂಪನಿಗಳು, ಸಬ್ ಕಾಂಟ್ರಾಕ್ಟರ್, ಬೋಗಸ್ ಬಿಲ್ಲಿಂಗ್ ಮಾಡುವವರ ಮೇಲೆ ದಾಳಿ ನಡೆಸಲಾಗಿದೆ.

ಜನವರಿ 16 ರಂದು ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ತೆಲುಗಿನಲ್ಲಿ ಟಾಪ್ ಹೀರೋಯಿನ್ ಎನಿಸಿಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಆದಾಯದ ಬಗ್ಗೆ ಐಟಿ ಕಣ್ಣು ಬಿದ್ದಿದ್ದು, ಸತತ ಐದು ಗಂಟೆ ವಿರಾಜಪೇಟೆಯಲ್ಲಿರುವ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.. ದಾಳಿ ಮಾಡಿದ ಅಧಿಕಾರಿಗಳ ಪೈಕಿ ಕರ್ನಾಟಕ ಮೂಲದವರು ಯಾರೂ ಇಲ್ಲ ಎನ್ನಲಾಗಿದೆ.

ಇನ್ನು, ವಿರಾಜಪೇಟೆಯ ನಿವಾಸದಲ್ಲಿರುವ ಐಟಿ ಅಧಿಕಾರಿಗಳಿಗೆ ರಶ್ಮಿಕಾ ತಂದೆ ಮದನ್ ಮಂದಣ್ಣ ಮಾಹಿತಿ ನೀಡಿದ್ದಾರೆ. ಸುಮಾರು 50 ಎಕರೆ ಕಾಫಿ ಎಸ್ಟೇಟ್, ಹಾಲ್ ಮುಂತಾದ ವ್ಯವಹಾರಗಳನ್ನು ಹೊಂದಿರುವ ಮದನ್ ಮಂದಣ್ಣರಿಂದ ಮಾಹಿತಿ ಕಲೆ ಹಾಕಿದ್ದರು.

English summary
The Income Tax department has said searches conducted over the last week at premises belonging to three infrastructure firms based in Andhra Pradesh and Telangana have led to the detection of unaccounted income of more than Rs 2,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X