ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಆಮದಾಗಿರುವ ಸ್ಪುಟ್ನಿಕ್ ವಿ ಲಸಿಕೆ ಬೆಲೆ ಇಷ್ಟಿದೆ!

|
Google Oneindia Kannada News

ಹೈದರಾಬಾದ್, ಮೇ 14: ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ನಂತರ ಭಾರತದಲ್ಲಿ ಅನುಮೋದನೆ ಪಡೆದಿರುವ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವ ಸುದ್ದಿ ತಿಳಿದಿರಬಹುದು. ಇಂದು ಈ ಲಸಿಕೆಯ ಮೊದಲ ಡೋಸ್ ಡಾ. ರೆಡ್ಡಿ ಲ್ಯಾಬ್ ನಲ್ಲಿ ನೀಡಲಾಗಿದೆ. ಜೊತೆಗೆ ರಷ್ಯಾದಿಂದ ಆಮದು ಮಾಡಿಕೊಂಡಿರುವ ಸ್ಪುಟ್ನಿಕ್ ವಿ ಲಸಿಕೆಯ ಬೆಲೆ ನಿಗದಿ ಮಾಡಲಾಗಿದೆ.

ಭಾರತದಲ್ಲಿ ದೇಶಿ ಔಷಧ ತಯಾರಿಕಾ ಕಂಪನಿ ಡಾ. ರೆಡ್ಡಿ ಲ್ಯಾಬೊರೇಟರೀಸ್ ಜುಲೈ ತಿಂಗಳಿನಿಂದ ಸ್ಪುಟ್ನಿಕ್ ವಿ ಉತ್ಪಾದಿಸಲಿದೆ. ಸದ್ಯಕ್ಕೆ ರಷ್ಯಾದಿಂದ ಹಂತ ಹಂತವಾಗಿ ಲಸಿಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಆಮದಾಗಿರುವ ಸ್ಪುಟ್ನಿಕ್ ವಿ ಬೆಲೆ ಪ್ರತಿ ಡೋಸ್ 995.40 ರು ಆಗಲಿದೆ.

ಭಾರತದಲ್ಲಿ 15.6 ಕೋಟಿ ಡೋಸ್ ಲಸಿಕೆ ಉತ್ಪಾದನೆ ಗುರಿ ಹೊಂದಲಾಗಿದೆ. ಮುಂದಿನ ಐದು ತಿಂಗಳಲ್ಲಿ 2 ಬಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಭ್ಯವಾಗಲಿದೆ. ಭಾರತದಲ್ಲಿ ಉತ್ಪಾದನೆಯಾಗಲಿರುವ ಸ್ಪುಟ್ನಿಕ್ ಬೆಲೆ ಕಡಿಮೆ ಇರಲಿದೆ.

Imported Sputnik V to cost ₹995.40 per shot, doses made in India may be cheaper

ಸರಿ ಸುಮಾರು ಶೇ 91.6ರಷ್ಟು ಪರಿಣಾಮಕಾರಿ ಎನಿಸಿಕೊಂಡಿರುವ ಸ್ಪುಟ್ನಿಕ್ ಅತ್ಯಂತ ಸುರಕ್ಷಿತ ಹಾಗೂ ಯುಕೆ ರೂಪಾಂತರಿ ವೈರಸ್ ಮೇಲೂ ಪ್ರಭಾವ ಬೀರಬಲ್ಲದು ಎಂದು ವರದಿಗಳು ಬಂದಿವೆ. ಸುಮಾರು 60ಕ್ಕೂ ಅಧಿಕ ದೇಶಗಳಲ್ಲಿ ತುರ್ತು ಬಳಕೆಗೆ ಸ್ಪುಟ್ನಿಕ್ ಲಸಿಕೆ ನೀಡಲು ಅನುಮೋದನೆ ಸಿಕ್ಕಿದೆ.

ಹಿಮಾಚಲಪ್ರದೇಶದ ಕಸೌಲಿಯಲ್ಲಿ ಆಮದು ಸ್ಪುಟ್ನಿಕ್ ವಿ ಲಸಿಕೆ ಬಳಕೆಗೆ ಮೇ 13ರಂದು ಅನುಮತಿ ಸಿಕ್ಕಿದೆ. ಆಮದು ಲಸಿಕೆ ಬೆಲೆ 948 ರು ಆಗಲಿದ್ದು, 5% ಜಿಎಸ್‌ಟಿ ವಿಧಿಸಲಾಗಿದೆ.

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನವು ಜನವರಿ 16ರಿಂದ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಮಾರ್ಚ್ 1ರಿಂದ ಎರಡನೇ ಹಂತದ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದ್ದು, ಏಪ್ರಿಲ್ 2ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ. ಮೇ 1ರಿಂದ ವಿವಿಧೆಡೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭಗೊಂಡರೂ ಸಮರ್ಪಕವಾಗಿ ಜಾರಿಗೊಳಿಸಲು ಆಗಿಲ್ಲ. ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಸಿಕೆ ಕೊರತೆಯಿಂದಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ 2ನೇ ಡೋಸ್ ನೀಡಲಾಗುತ್ತಿದೆ.

English summary
Sputnik V vaccine priced at Rs 995 for imported dose, first shot administered by Dr Reddy's in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X