ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣಕ್ಕೆ ನೀಡಿದ್ದ ಉಷ್ಣಗಾಳಿ ಎಚ್ಚರಿಕೆ ಹಿಂಪಡೆದ ಹವಾಮಾನ ಇಲಾಖೆ

|
Google Oneindia Kannada News

ಹೈದರಾಬಾದ್, ಮೇ 28: ತೆಲಂಗಾಣಕ್ಕೆ ನೀಡಿದ್ದ ಉಷ್ಣಗಾಳಿ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಹಿಂಪಡೆದಿದೆ.

Recommended Video

ಏನ್ರೀ ಇದು ಹೀಗಾ ನಾಗರಹಾವು ಹಿಡಿಯೋದು ಭಯನೇ ಇಲ್ವಲ್ರೀ ಈ ಮಹಿಳೆಗೆ | Oneindia Kannada

ಮುಂದಿನ 48 ಗಂಟೆಗಳಲ್ಲಿ ತೆಲಂಗಾಣಕ್ಕೆ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಇದೀಗ ಕಡಿಮೆ ತಾಪಮಾನದಲ್ಲಿ ಟ್ರಫ್(ವಾತಾವರಣದಲ್ಲಿ ಗಾಳಿಯ ಚಲನೆಯಿಂದ ಉಂಟಾಗುವ ಪರಿಣಾಮ)

ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ?ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ?

ನಿರ್ಮಾಣವಾಗುತ್ತಿದೆ. ಆದರೆ ಟ್ರಫ್ ನಿರ್ಮಾಣವಾಗಲು ಒಂದೆರೆಡು ದಿನಗಳು ಬೇಕು ಎಂದು ಮಹೇಶ್ ಪಲಾವಟ್ ಹೇಳಿದ್ದಾರೆ.

IMD Cancels Heatwave Warning For Telangana

ಮೇ 30 ಹಾಗೂ 31ರಂದು ಬಿರುಗಾಳಿ, ಗುಡುಗು ಸಹಿತ ಬಾರಿ ಮಳೆಯಾಗಲಿದೆ.ಈಗಾಗಲೇ ನಗರದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಕನಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಸಾಮಾನ್ಯ ಉಷ್ಣಾಂಶಕ್ಕಿಂತ ನಾಲ್ಕೈದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿರುತ್ತದೆ.

ಬುಧವಾರ ಸಂಜೆ 7 ಗಂಟೆ ಸಮಯದಲ್ಲಿ ತೆಲಂಗಾಣದಲ್ಲಿ 45.9 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.ಆರ್ಮುರ್‌ನಲ್ಲಿ ಕೂಡ 45.5 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಮುಶೀರಾಬಾದ್‌ನಲ್ಲಿ 42.5 ಡಿಗ್ರಿ ಸೆಲ್ಸಿಯಸ್, ನಾರಾಯಣಗುಡದಲ್ಲಿ 42.4 ಡಿಗ್ರಿ ಸೆಲ್ಸಿಯಸ್, ಆಸಿಫ್‌ನಗರದಲ್ಲಿ 42.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ದೆಹಲಿಯ ಸಫ್ದರ್‌ಜುಂಗ್‌ನಲ್ಲಿ 46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಹಾಗೆಯೇ ಬಿಸಿ ಗಾಳಿ ಮುಂದುವರೆದಿದ್ದು, ಪಲಮ್ ಪ್ರದೇಶದಲ್ಲಿ 47.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಸಫ್ದರ್‌ಜುಂಗ್‌ನಲ್ಲಿ 2002ರ ಮೇ 19 ರಂದು 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಕೇಂದ್ರ ಹವಾಮಾನ ಇಲಾಖೆ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್ ಹೇಳಿದ್ದಾರೆ.

ಪಲಮ್‌ನಲ್ಲಿ ಈಗ 47.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು 2010 ರ ಮೇ 18ರಂದ ಇಷ್ಟು ಉಷ್ಣಾಂಶ ದಾಖಲಾಗಿತ್ತು. ಲೋಧಿ ರಸ್ತೆ ಆಯ ನಗರದಲ್ಲಿ 45.4 ಡಿಗ್ರಿ ಹಾಗೂ 46.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.

English summary
what may come as a respite to Hyderabadis, the Indian Meteorological Department (IMD) has cancelled the heat wave warning for the next 48 hours. However, officials of the department told Deccan Chronicle that the heat would only subside for a few days before it comes back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X