ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪುರುಷ, ಮಹಿಳೆಯ ತೂಕ ಎಷ್ಟಿರಬೇಕು: ಹೊಸ ಮಾನದಂಡವೇನು?

|
Google Oneindia Kannada News

ಹೈದರಾಬಾದ್‌, ಸೆಪ್ಟೆಂಬರ್ 30: ಭಾರತೀಯರ ಮಾದರಿ ತೂಕವನ್ನು 5 ಕೆ.ಜಿ. ಹೆಚ್ಚಿಸಿ ರಾಷ್ಟ್ರೀಯ ಪೌಷ್ಟಿಕ ಸಂಸ್ಥೆ (ಎನ್‌ಐಎನ್‌)ಯು ಮಾನದಂಡ ಹೊರಡಿಸಿದೆ.

ಪುರುಷರ ಮಾದರಿ ತೂಕವನ್ನು 60ರಿಂದ 65 ಕೆ.ಜಿ.ಗೆ ಹೆಚ್ಚಿಸಿದೆ. ಮಹಿಳೆಯರ ಮಾದರಿ ತೂಕವನ್ನು 50 ಕೆ.ಜಿ.ಯಿಂದ 55 ಕಿಲೋಗೆ ನಿಗದಿಪಡಿಸಿದೆ.

ಈ ತೂಕಕ್ಕೆ ತಕ್ಕಂತೆ ಮಾದರಿ ಎತ್ತರವನ್ನೂ ಪರಿಷ್ಕರಿಸಿದೆ. ಪುರುಷರಿಗೆ 5.6ರಿಂದ 5.8 ಅಡಿ, ಮಹಿಳೆಯರಿಗೆ 5 ಅಡಿಯಿಂದ 5.3 ಅಡಿ ಎತ್ತರ ನಿಗದಿಪಡಿಸಿದೆ.

ಎನ್‌ಐಎನ್‌ ಗೊತ್ತುಪಡಿಸಿರುವ ನೂತನ ಮಾನದಂಡವನ್ನೇ ಶರೀರ ತೂಕ ಸೂಚ್ಯಂಕಕ್ಕೆ (ಬಿಎಂಐ) ಪರಿಗಣಿಸಲಾಗುತ್ತದೆ.

ಅಧಿಕ ತೂಕವಿರುವವರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯ?ಅಧಿಕ ತೂಕವಿರುವವರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯ?

ಪ್ರತಿ ಮನುಷ್ಯ ಆರೋಗ್ಯಯುತವಾಗಿರಲು ಪ್ರತಿ ದಿನ ಯಾವ ಪ್ರಮಾಣದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎನ್ನುವುದನ್ನೂ ವರದಿಯಲ್ಲಿ ತಿಳಿಸಲಾಗಿದೆ. ಇದೇ ಮೊದಲನೇ ಬಾರಿಗೆ ನಾರಿನ ಅಂಶದ ಆಹಾರ ಸೇವನೆಯನ್ನು ಪೌಷ್ಟಿಕಾಂಶ ಪಟ್ಟಿಗೆ ಸೇರಿಸಿದೆ. 2 ಸಾವಿರ ಕಿಲೋ ಕ್ಯಾಲರಿಯಲ್ಲಿ 40 ಗ್ರಾಂ ನಾರಿನಾಂಶ ಇದ್ದರೆ ದೇಹಕ್ಕೆ ಹಾನಿಯಾಗುವುದಿಲ್ಲ ಎಂದು ಹೇಳಲಾಗಿದೆ.

ಯಾವ್ಯಾವ ವರದಿ ಆಧರಿಸಿ ಮಾನದಂಡ ರಚನೆ

ಯಾವ್ಯಾವ ವರದಿ ಆಧರಿಸಿ ಮಾನದಂಡ ರಚನೆ

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (2015), ರಾಷ್ಟ್ರೀಯ ಪೌಷ್ಟಿಕ ಮೇಲ್ವಿಚಾರಣ ಸಮಿತಿ (2016), ವಿಶ್ವ ಆರೋಗ್ಯ ಸಂಸ್ಥೆ (2006), ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ (2015) ವರದಿ ಆಧರಿಸಿ ಮಾನದಂಡ ರೂಪಿಸಲಾಗಿದೆ.

ಎಷ್ಟು ಆಹಾರ ಸೇವಿಸಬೇಕು?

ಎಷ್ಟು ಆಹಾರ ಸೇವಿಸಬೇಕು?

2000 ಕಿಲೋ ಕ್ಯಾಲರಿಗೆ 40 ಗ್ರಾಂ ಆಹಾರ ಸೇವನೆ ದೇಹಕ್ಕೆ ಸುರಕ್ಷಿತ. ಜಡ, ಮಧ್ಯಮ ಮತ್ತು ಹೆಚ್ಚು ಚಟುವಟಿಕೆಯುಳ್ಳ ಮಂದಿ ಕ್ರಮವಾಗಿ 25, 30 ಮತ್ತು 40 ಗ್ರಾಂ ಕೊಬ್ಬಿನಾಂಶವುಳ್ಳ ಆಹಾರ ಸೇವಿಸಬೇಕು. ನಿತ್ಯ 2 ಗ್ರಾಂ ಸೋಡಿಯಂ, 3,510 ಮಿ.ಗ್ರಾಂ ಪೊಟ್ಯಾಶಿಯಂ ದೇಹಕ್ಕೆ ಅತ್ಯವಶ್ಯ ಎಂದು ಎನ್‌ಐಎನ್‌ ಅಭಿಪ್ರಾಯಪಟ್ಟಿದೆ.
2010ರ ಪರಿಷ್ಕರಣೆ
2010ರ ಪರಿಷ್ಕರಣೆ ಹೇಗಿತ್ತು?
2010ರ ಪರಿಷ್ಕರಣೆಯಲ್ಲಿ ಪುರುಷರು ಮತ್ತು ಸೀಯರು ಸಮಾನವಾದ ಕೊಬ್ಬಿನಾಂಶ ಸ್ವೀಕರಿಸಬಹುದು ಎನ್ನಲಾಗಿತ್ತು. ದಿನಕ್ಕೆ 100ರಿಂದ 130 ಗ್ರಾಂ ಕಾರ್ಬೋಹೈಡ್ರೇಟ್ ಸೇವನೆಯನ್ನು ಐಸಿಎಂಆರ್ ಶಿಾರಸು ಮಾಡಿದೆ. ವಯಸ್ಕ ಪುರುಷ ಮತ್ತು ಮಹಿಳೆಯರು ಪ್ರತಿದಿನ 1000 ಮಿ.ಗ್ರಾಂ ಕ್ಯಾಲ್ಸಿಯಂ (2010ರಲ್ಲಿ 600 ಮಿ.ಗ್ರಾಂ ಮಿತಿ ನೀಡಲಾಗಿತ್ತು) ಸೇವನೆ ಮಾಡಬಹುದು. ಹಾಲುಣಿಸುವ ತಾಯಂದಿರು 200 ಮಿ.ಗ್ರಾಂ ಕ್ಯಾಲ್ಸಿಯಂ ಹೆಚ್ಚಾಗಿ ಸೇವಿಸಬಹುದು ಎಂದು ತಿಳಿಸಲಾಗಿದೆ. ಪ್ರತಿದಿನ 5 ಗ್ರಾಂ ಉಪ್ಪು ಮತ್ತು 2 ಗ್ರಾಂ ಸೋಡಿಯಂ ಮತ್ತು 3,510 ಗ್ರಾಂ ಪೊಟ್ಯಾಸಿಯಂ ಬಳಸುವುದು ಆರೋಗ್ಯಕರ ಎಂದು ಹೇಳಲಾಗಿದೆ.

ಪ್ರಮುಖಾಂಶಗಳು

ಪ್ರಮುಖಾಂಶಗಳು

- ಮೂರು ಸಮಿತಿಗಳ ವರದಿ ಆಧರಿಸಿ ಹೊಸ ಮಾನದಂಡ ರೂಪಿಸಲು ನಿರ್ಧಾರ
- 2 ಸಾವಿರ ಕಿಲೋಕ್ಯಾಲರಿಗೆ 40 ಗ್ರಾಂ ಆಹಾರ ಸೇವನೆ ಸುರಕ್ಷಿತ
- ನಿತ್ಯ 2 ಗ್ರಾಂ, 3,510 ಮಿಲಿಗ್ರಾಂ ಪೊಟ್ಯಾಶಿಯಂ ಅಗತ್ಯವೆಂದ ಎನ್‌ಐಎನ್

2010ರ ಪರಿಷ್ಕರಣೆ ಹೇಗಿತ್ತು?

2010ರ ಪರಿಷ್ಕರಣೆ ಹೇಗಿತ್ತು?

2010ರ ಪರಿಷ್ಕರಣೆಯಲ್ಲಿ ಪುರುಷರು ಮತ್ತು ಸೀಯರು ಸಮಾನವಾದ ಕೊಬ್ಬಿನಾಂಶ ಸ್ವೀಕರಿಸಬಹುದು ಎನ್ನಲಾಗಿತ್ತು. ದಿನಕ್ಕೆ 100ರಿಂದ 130 ಗ್ರಾಂ ಕಾರ್ಬೋಹೈಡ್ರೇಟ್ ಸೇವನೆಯನ್ನು ಐಸಿಎಂಆರ್ ಶಿಾರಸು ಮಾಡಿದೆ. ವಯಸ್ಕ ಪುರುಷ ಮತ್ತು ಮಹಿಳೆಯರು ಪ್ರತಿದಿನ 1000 ಮಿ.ಗ್ರಾಂ ಕ್ಯಾಲ್ಸಿಯಂ (2010ರಲ್ಲಿ 600 ಮಿ.ಗ್ರಾಂ ಮಿತಿ ನೀಡಲಾಗಿತ್ತು) ಸೇವನೆ ಮಾಡಬಹುದು. ಹಾಲುಣಿಸುವ ತಾಯಂದಿರು 200 ಮಿ.ಗ್ರಾಂ ಕ್ಯಾಲ್ಸಿಯಂ ಹೆಚ್ಚಾಗಿ ಸೇವಿಸಬಹುದು ಎಂದು ತಿಳಿಸಲಾಗಿದೆ. ಪ್ರತಿದಿನ 5 ಗ್ರಾಂ ಉಪ್ಪು ಮತ್ತು 2 ಗ್ರಾಂ ಸೋಡಿಯಂ ಮತ್ತು 3,510 ಗ್ರಾಂ ಪೊಟ್ಯಾಸಿಯಂ ಬಳಸುವುದು ಆರೋಗ್ಯಕರ ಎಂದು ಹೇಳಲಾಗಿದೆ.

English summary
The National Institute of Nutrition (NIN), which is located in Hyderabad, has revised the ideal weight for both men and women in the country by adding 5-5 kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X