ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಮಾ ಕಂಪನಿಯ ಕಪಾಟಿನಲ್ಲಿತ್ತು ಬರೋಬ್ಬರಿ 142 ಕೋಟಿ ರೂ.

|
Google Oneindia Kannada News

ಹೈದರಾಬಾದ್‌, ಅಕ್ಟೋಬರ್ 13: ಹೈದರಾಬಾದ್‌ ಮೂಲದ ಪಾರ್ಮಾ ಕಂಪನಿಯ ಕಪಾಟಿನಲ್ಲಿ ಬರೋಬ್ಬರಿ 142 ಕೋಟಿ ರೂ. ದೊರೆತಿದೆ.

ಅಕ್ಟೋಬರ್ 6 ರಂದು ನಡೆಸಿದ ಸರಣಿ ದಾಳಿಗಳಲ್ಲಿ ಹೈದರಾಬಾದ್ ಮೂಲದ ಪ್ರಮುಖ ಫಾರ್ಮಾ ಕಂಪನಿಯಿಂದ ದಾಖಲೆ ಇಲ್ಲದೆ ಇರುವ 550 ಕೋಟಿ ರೂ ಮೌಲ್ಯವನ್ನು ಪತ್ತೆ ಹಚ್ಚಿದೆ.ಅದರಲ್ಲಿ 142.87 ಕೋಟಿ ರೂ.ನಗದು ಹಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಬೆಂಗಳೂರು; ಐಟಿ ದಾಳಿಯ ವಿವರಗಳು, ಸಿಕ್ಕಿದ ಹಣ, ಆಸ್ತಿ ಮಾಹಿತಿಬೆಂಗಳೂರು; ಐಟಿ ದಾಳಿಯ ವಿವರಗಳು, ಸಿಕ್ಕಿದ ಹಣ, ಆಸ್ತಿ ಮಾಹಿತಿ

ಅಧಿಕೃತ ಹೇಳಿಕೆಯಲ್ಲಿ, ಆದಾಯ ತೆರಿಗೆ ಇಲಾಖೆಯು ಔಷಧೀಯ ಗುಂಪು ಮಧ್ಯವರ್ತಿಗಳು, ಸಕ್ರಿಯ ಔಷಧೀಯ ಪದಾರ್ಥಗಳು (ಎಪಿಐ) ಮತ್ತು ಸೂತ್ರೀಕರಣಗಳ ತಯಾರಿಕೆಯಲ್ಲಿ ತೊಡಗಿದೆ ಎಂದು ಹೇಳಿದೆ. ಈ ಉತ್ಪನ್ನಗಳಲ್ಲಿ ಹೆಚ್ಚಿನವು ಯುಎಸ್ಎ, ಯುರೋಪ್, ದುಬೈ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತಾಗುತ್ತವೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

I-T Raids Pharma Company, Seizes Over Rs 142 Crore Cash

ಈ ದಾಳಿಯ ಒಂದು ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ವಿಶೇಷವಾಗಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಅಲ್ಲಿ ಜನರು ನಗದು ತುಂಬಿರುವ ಬೀರುವಿನ ಚಿತ್ರದ ಮೂಲಕ ನಗೆ ಬರಿತ ಕಾಮೆಂಟ್ ಮಾಡುತ್ತಿದ್ದಾರೆ.

ಆದರೆ ಎಲ್ಲರ ಗಮನವನ್ನು ಸೆಳೆದಿರುವುದು ಕಬೋರ್ಡ್ ತುಂಬಾ ತುಂಬಿರುವ ನೋಟಿನ ಕಂತೆಗಳು. ಹಣವನ್ನೇ ಈ ರೀತಿ ಕಪಾಟಿನಲ್ಲಿ ತುಂಬಿದರೆ ಇವರು ಬಟ್ಟೆ ಎಲ್ಲಿ ತುಂಬಿಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಫಾರ್ಮಾ ಕಂಪನಿ ಇಷ್ಟೊಂದು ಹಣ ಕ್ಯಾಶ್ ನಲ್ಲಿ ಯಾಕೆ ವ್ಯವರಿಸುತ್ತಿದೆ ಎಂಬುದು ಅರ್ಥವಾಗಲ್ಲ ಎಂದಿದ್ದಾರೆ.

ನಾಲ್ಕು ದಿನಗಳ ಹಿಂದೆ ಕರ್ನಾಟಕದಲ್ಲಿಯೂ ಆದಾಯ ತೆರಿಗೆ ಅಧಿಕಾರಿಗಳು ಹಲವು ಕಡೆ ದಾಳಿ ಮಾಡಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಎಂದು ಕರೆಸಿಕೊಂಡಿದ್ದ ಉಮೇಶ್ ಎಂಬುವರಿಗೆ ಸೇರಿದ್ದ ಆಸ್ತಿಗಳ ಮೇಲೂ ದಾಳಿಯಾಗಿತ್ತು.

ಕರ್ನಾಟಕ ಮಾತ್ರವಲ್ಲ ಹೈದರಾಬಾದಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಿಕ್ಕಿರುವ ಹಣ ನೋಡಿ ಅಧಿಕಾರಿಗಳ ಜತೆ ಸೋಶಿಯಲ್ ಮೀಡಿಯಾ ಕಂಗಾಲಾಗಿದೆ.

ಹೈದರಾಬಾದಿನ ಫಾರ್ಮಾ ಕಂಪನಿಯ ಮೇಲೆ ಐಟಿ ದಾಳಿ ನಡೆಸಿದಾಗ ಇದು ಬಹಿರಂಗವಾಗಿದೆ. ಅವರು ಲಾಕರ್‌ನಲ್ಲಿ ಬಟ್ಟೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬ ಬಳಕೆದಾರರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇನ್ನೊಬ್ಬರು ಇದನ್ನು ನನ್ನ ವಾಲ್‌ಪೇಪರ್‌ನಂತೆ ಇಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಔಷಧೀಯ ಗುಂಪಿನ ಹೆಸರನ್ನು ಉಲ್ಲೇಖಿಸದಿದ್ದರೂ, ಮಾಧ್ಯಮ ವರದಿಗಳು ಹೇಳುವಂತೆ ಹೆವಿರೊ ಡ್ರಗ್ಸ್ ನಲ್ಲಿ ದಾಳಿ ನಡೆಸಲಾಗಿದೆ, ಇದು ಕೋವಿಡ್ -19 ಚಿಕಿತ್ಸೆಯಲ್ಲಿ ಬಳಸಲಾಗುವ ಕೋವಿಫೋರ್‌ನ ರೆಮ್‌ಡೆಸಿವಿರ್ ಇಂಜೆಕ್ಷನ್‌ನ ಸಾಮಾನ್ಯ ಆವೃತ್ತಿಯನ್ನು ಬಿಡುಗಡೆ ಮಾಡಿದ ಭಾರತದ ಮೊದಲ ಔಷಧೀಯ ಕಂಪನಿಯಾಗಿದೆ.

ದಾಳಿಯ ಸಮಯದಲ್ಲಿ ಕೆಲವು ರಹಸ್ಯ ಸ್ಥಳಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅಲ್ಲಿ ಅಕೌಂಟ್ ಪುಸ್ತಕಗಳು ಮತ್ತು ನಗದು ಪತ್ತೆಯಾಗಿದೆ. ಡಿಜಿಟಲ್ ಮಾಧ್ಯಮ, ಪೆನ್ ಡ್ರೈವ್, ಡಾಕ್ಯುಮೆಂಟ್​ಗಳು ಮೊದಲಾದವುಗಳ ರೂಪದಲ್ಲಿ ದೋಷಾರರೋಪಾಣಾತ್ಮಕ ಸಾಕ್ಷ್ಯಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಿವೀಕ್ಷಣೆ ತಂಡದಿಂದ ನಿರ್ವಹಿಸಲ್ಪಡುವ ಎಸ್ ಎ ಪಿ ಮತ್ತು @ಇಆರ್​ಪಿ ಸಾಫ್ಟ್ವೇರ್ ಗಳಿಂದ ದೋಷಯೋಗ್ಯ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ತಡವಾಗಿ ಲಭ್ಯವಾಗಿರುವ ಮಾಹಿತಿಯೊಂದ ಪ್ರಕಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಕ್ಟೋಬರ್ 6ರಂದು ಹೈದರಾಬಾದಿನಲ್ಲಿರುವ ಒಂದು ದೊಡ್ಡ ಫಾರ್ಮಾಸ್ಯುಟಿಕಲ್ಸ್ ಗ್ರೂಪ್ ಮೇಲೆ ದಾಳಿ ನಡೆಸಿದ ಬಳಿಕ ಶೋಧನೆಯ ಸಮಯದಲ್ಲಿ ಸಿಕ್ಕ ಕಾಗದ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.

ಈ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯು ಇಂಟರ್ಮೀಡಿಯಟ್ಸ್, ಸಕ್ರಿಯ ಔಷಧ ಪದಾರ್ಥಗಳು (ಎಪಿಐ) ಮತ್ತು ಇತರ ಔಷಧಿಗಳನ್ನು ತಯಾರಿಸುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ್ ಸಂಸ್ಥೆಯ ಹೆಚ್ಚಿನ ಉತ್ಪನ್ನಗಳು ಅಮೆರಿಕ, ಯುರೋಪ್, ದುಬೈ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತಾಗುತ್ತವೆ. ತೆರಿಗೆ ಅಧಿಕಾರಿಗಳು 6 ರಾಜ್ಯಗಳ ಸುಮಾರು 50 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಇತರೆ ಅವ್ಯವಹಾರಗಳ ಪರಿಶೀಲನೆ ಮತ್ತು ಸಂಸ್ಥೆಯ ಅಘೋಷಿತ ಅದಾಯವನ್ನು ಪತ್ತೆ ಮಾಡುವ ಕೆಲಸ ಕಾರ್ಯ ಇನ್ನೂ ಜಾರಿಯಲ್ಲಿದೆ.

ಇದಲ್ಲದೆ, ಭೂಮಿಯನ್ನು ಖರೀದಿಸಲು ಹಣದ ಪಾವತಿಸಿರುವ ದಾಖಲೆಗಳು ಸಹ ಕಂಡುಬಂದಿವೆ. ಕಂಪನಿಯ ಹಣದಲ್ಲಿ ವೈಯಕ್ತಿಕ ವೆಚ್ಚ ಮತ್ತು ಸರ್ಕಾರದಿಂದ ನಿಗದಿತ ನೋಂದಣಿ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಜಮೀನು ಖರೀದಿಸಿರುವ ಅವ್ಯವಹಾರಗಳು ಪತ್ತೆಯಾಗಿವೆ.

ಸಂಸ್ಥೆಯು ಹಲವಾರು ಕಾನೂನು ಹೋರಾಟಗಳಲ್ಲಿ ಭಾಗಿಯಾಗಿರುವುದು ಸಹ ಶೋಧನೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.

English summary
The Income Tax Department carried out search and seizure operations on October 6 at a pharmaceutical company based in Hyderabad, seizing Rs 142.87 crore worth of unaccounted cash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X