ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್; ಟೆಕ್ಕಿಗೆ ಕೊರೊನಾ ಶಂಕೆ, ಐಟಿ ಪಾರ್ಕ್‌ಗೆ ಬೀಗ

|
Google Oneindia Kannada News

ಹೈದರಾಬಾದ್, ಮಾರ್ಚ್ 05 : ಹೈದರಾಬಾದ್ನಲ್ಲಿ ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಟೆಕ್ಕಿ ಕಾರ್ಯ ನಿರ್ವಹಣೆ ಮಾಡುವ ಐಟಿ ಪಾರ್ಕ್‌ಗೆ ಪೊಲೀಸರು ಬೀಗ ಹಾಕಿದ್ದು, ಸ್ವಚ್ಛತೆಯ ಕಾರ್ಯವನ್ನು ಕೈಗೊಳ್ಳಲಾಗಿದೆ.

ಇಟಲಿಯಿಂದ ಆಗಮಿಸಿದ ಟೆಕ್ಕಿಗೆ ಶೀತ ಕಾಣಿಸಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಟೆಕ್ಕಿಯನ್ನು ಕಾಕಿನಾಡದ ಆಸ್ಪತ್ರೆಗೆ ಬುಧವಾರ ಸಂಜೆ ದಾಖಲು ಮಾಡಲಾಗಿದೆ. ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಹಾಂಕ್ ಕಾಂಗ್‌ನಲ್ಲಿ ಮನುಷ್ಯನಿಂದ ನಾಯಿಗೆ ಕೊರೊನಾ ಸೋಂಕುಹಾಂಕ್ ಕಾಂಗ್‌ನಲ್ಲಿ ಮನುಷ್ಯನಿಂದ ನಾಯಿಗೆ ಕೊರೊನಾ ಸೋಂಕು

ಟೆಕ್ಕಿಯನ್ನು ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲಾಗಿದ್ದು, 24 ರಿಂದ 48 ಗಂಟೆಗಳಲ್ಲಿ ರಕ್ತ ಪರೀಕ್ಷೆಯ ವರದಿ ವೈದ್ಯರ ಕೈ ಸೇರಲಿದೆ. ಕೊರೊನಾ ಸೋಂಕು ತಗುಲಿಲ್ಲ ಎಂಬುದು ಖಚಿತವಾದರೆ ಅವರನ್ನು ಮನೆಗೆ ಕಳಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕೊರೊನಾ ವೈರಸ್ ಭಯದಿಂದ ಮೆಕ್ಕಾದಲ್ಲಿ ಪ್ರಾರ್ಥನೆಯೇ ಬಂದ್ ಕೊರೊನಾ ವೈರಸ್ ಭಯದಿಂದ ಮೆಕ್ಕಾದಲ್ಲಿ ಪ್ರಾರ್ಥನೆಯೇ ಬಂದ್

Coronavirus

ವೈದ್ಯರು ಟೆಕ್ಕಿಯ ವಿಚಾರದ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿ. ಸಿ. ಸಜ್ಜನರ್‌, "ಮೈಂಟ್ ಸ್ಪೇಸ್ ಐಟಿ ಪಾರ್ಕ್‌ನಲ್ಲಿ ಆತಂಕ ಉಂಟಾಗಿದೆ. ಟೆಕ್ಕಿ ಕೆಲಸ ಮಾಡುತ್ತಿದ್ದ ಪಾರ್ಕ್‌ಗೆ ಬೀಗ ಹಾಕಲಾಗಿದೆ. ಅಲ್ಲಿ 9 ಕಂಪನಿಗಳಿದ್ದು, 7000 ಉದ್ಯೋಗಿಗಳು ಇದ್ದಾರೆ" ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ಒಟ್ಟು 28 ಕೊರೊನಾ ಕೇಸ್ ಪತ್ತೆ, ಎಲ್ಲೆಲ್ಲಿ?ಭಾರತದಲ್ಲಿ ಒಟ್ಟು 28 ಕೊರೊನಾ ಕೇಸ್ ಪತ್ತೆ, ಎಲ್ಲೆಲ್ಲಿ?

"ಟೆಕ್ಕಿ ಇಟಲಿಯಿಂದ ಆಗಮಿಸಿದ್ದ. ಟೆಕ್ಕಿ ಕೆಲಸ ಮಾಡುತ್ತಿದ್ದ ಕಟ್ಟಡವನ್ನು ಸ್ವಚ್ಛಗೊಳಿಸಲು ಮುಚ್ಚಲಾಗಿದೆ. ಗುರುವಾರ ಸ್ವಚ್ಛತಾ ಕಾರ್ಯ ಮುಗಿಯಲಿದ್ದು, ಶುಕ್ರವಾರ ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ" ಎಂದು ವಿ. ಸಿ. ಸಜ್ಜನರ್ ಹೇಳಿದ್ದಾರೆ.

English summary
A techie who works in Hyderabad IT park has shown symptoms of coronavirus after he returned from Italy. 1 Building which consisted of 9 companies and 7000 employees closed for sanitising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X