ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಮೇವ ಜಯತೇ ಚಿತ್ರದ ವಿರುದ್ಧ ದೂರು ನೀಡಿದ ಮುಸ್ಲಿಮರು

By Mahesh
|
Google Oneindia Kannada News

ಹೈದರಾಬಾದ್, ಜುಲೈ 31: ಜಾನ್ ಅಬ್ರಹಾಂ, ಮನೋಜ್ ಬಾಜಪೇಯಿ ಅಭಿನಯದ ಹಿಂದಿ ಚಿತ್ರ 'ಸತ್ಯಮೇವ ಜಯತೇ' ದ ದೃಶ್ಯವೊಂದರ ಬಗ್ಗೆ ಮುಸ್ಲಿಮರ ಒಂದು ಪಂಗಡದಿಂದ ಆಕ್ಷೇಪ ವ್ಯಕ್ತವಾಗಿದೆ.

ಶಿಯಾ ಸಮುದಾಯದ ಮುಸ್ಲಿಮರಿಂದ ಆಕ್ಷೇಪ ವ್ಯಕ್ತವಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ನೀಡಿ, ಚಿತ್ರ ತಂಡ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Hyderabad: Shia community registers case against Satyameva Jayate

ಸತ್ಯಮೇವ ಜಯತೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಚಿತ್ರದ ಟ್ರೈಲರ್ ನೋಡಿದ್ದೇವೆ. ಇದರಿಂದ ಬರುವ 'ಮಾತಂ' (ಸಂತಾಪ ಸೂಚಿಸುವ ದೃಶ್ಯ) ಕ್ಲಿಪ್ಪಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಶಿಯಾ ಸಮುದಾಯದ ಮುಖ್ಯಸ್ಥ ನಿಸಾರ್ ಹೈದರ್ ಅವರು ದೂರು ನೀಡಿದ್ದಾರೆ ಎಂದು ದಕ್ಷಿಣ ವಲಯದ ಡಿಸಿಪಿ ವಿ ಸತ್ಯನಾರಾಯಣ ಹೇಳಿದ್ದಾರೆ.

ಚಿತ್ರದ ದೃಶ್ಯವೊಂದರನ್ನು ಕತ್ತರಿಸಿ ಹಾಕುವಂತೆ ಶಿಯಾ ಸಮುದಾಯದವರು ಕೋರಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಕ್ರಮ ಜರುಗಿಸುವಂತೆ ದಬೀರ್ ಪುರ್ ಪೊಲೀಸರಿಗೆ ಸೂಚಿಸಲಾಗಿದ್ದು, ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸತ್ಯನಾರಾಯಣ ಹೇಳಿದರು.

ಮಿಲಾಸ್ ಜವೇರಿ ನಿರ್ದೇಶನದ ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದ್ದು, ಚಿತ್ರ ತಂಡದ ವಿರುದ್ಧ ಐಪಿಸಿ ಸೆಕ್ಷನ್ 295, 295 ಎ ಹಾಗೂ 153-ಎ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

English summary
A case has been registered against upcoming Bollywood movie John Abraham-starrer Hindi movie Satyameva Jayate by Shia community members on charges of hurting religious sentiments in connection with a 'Maatam' (mourning) clipping shown in the movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X