ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಮರ್ಯಾದಾ ಹತ್ಯೆಯ ಬಗ್ಗೆ ಮೌನ ಮುರಿದ ಅಸಾದುದ್ದೀನ್ ಓವೈಸಿ

|
Google Oneindia Kannada News

ಹೈದರಾಬಾದ್, ಮೇ 07: ಹೈದರಾಬಾದ್ ಮರ್ಯಾದಾ ಹತ್ಯೆಯ ಘಟನೆಯನ್ನು ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ ಇದು ಅತ್ಯಂತ ಕೆಟ್ಟ ಅಪರಾಧ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಹೈದರಾಬಾದ್‌ನ ಸರೂರ್‌ನಗರದಲ್ಲಿ ಮೇ 04 ರಂದು ರಾತ್ರಿ 9 ಗಂಟೆಗೆ ಕಾರು ಶೋರೂಂ ಉದ್ಯೋಗಿ ನಾಗರಾಜು (25) ಅವರ ಪತ್ನಿ ಅಶ್ರೀನ್ ಸುಲ್ತಾನಾ (ಅಕಾ ಪಲ್ಲವಿ) ಅವರ ಎದುರೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ದಲಿತ ಹಿಂದೂ ಆಗಿರುವ ನಾಗರಾಜು ಅವರು ಜನವರಿ 2022 ರಲ್ಲಿ ಅಶ್ರಿನ್ ಸುಲ್ತಾನಾ ಅವರೊಂದಿಗೆ ಅಂತರ್ಜಾತಿ ವಿವಾಹವಾಗಿದ್ದರು. ನಾಗರಾಜು ಮೇಲೆ ಪತ್ನಿ ಸುಲ್ತಾನ ಸಹೋದರ ಹಲ್ಲೆ ನಡೆಸಿದ್ದಾನೆ.

ತೆಲಂಗಾಣಕ್ಕೆ ರಾಹುಲ್ ಭೇಟಿ: ಡ್ರಗ್ ಪರೀಕ್ಷೆಗೆ ಸವಾಲು ಹಾಕುವ ಬ್ಯಾನರ್‌ನಿಂದ ಸ್ವಾಗತತೆಲಂಗಾಣಕ್ಕೆ ರಾಹುಲ್ ಭೇಟಿ: ಡ್ರಗ್ ಪರೀಕ್ಷೆಗೆ ಸವಾಲು ಹಾಕುವ ಬ್ಯಾನರ್‌ನಿಂದ ಸ್ವಾಗತ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ಸರೂರ್‌ನಗರದಲ್ಲಿ ನಡೆದ ಮರ್ಯಾದಾ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಮಹಿಳೆ ಸ್ವಯಂಪ್ರೇರಣೆಯಿಂದ ಮದುವೆಯಾಗಲು ನಿರ್ಧರಿಸಿದಳು. ಪತಿಯನ್ನು ಕೊಲ್ಲುವ ಹಕ್ಕು ಆಕೆಯ ಸಹೋದರನಿಗೆ ಇಲ್ಲ. ಇದು ಸಂವಿಧಾನದ ಪ್ರಕಾರ ಅಪರಾಧ ಮತ್ತು ಇಸ್ಲಾಂ ಪ್ರಕಾರ ಅತ್ಯಂತ ಕೆಟ್ಟ ಅಪರಾಧವಾಗಿದೆ'' ಎಂದಿದ್ದಾರೆ.

Hyderabad Murder case: This is the worst crime according to Islam OYC

ಅಸಾದುದ್ದೀನ್ ಓವೈಸಿ, ''ನಿನ್ನೆಯಿಂದ ಈ ಘಟನೆಗೆ ಮತ್ತೊಂದು ಬಣ್ಣ ನೀಡಲಾಗುತ್ತಿದೆ. ಇಲ್ಲಿನ (ಹೈದರಾಬಾದ್) ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಲಿಲ್ಲವೇ? ಮುಖಂಡರು ಆರೋಪಿಯೊಂದಿಗೆ ಇದ್ದಾರೆಯೇ ಎಂದು ಅನುಮಾನಿಸಲಾಗುತ್ತಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಜೊತೆಗೆ ನಾವು ಎಂದಿಗೂ ಹಂತಕರ ಜೊತೆ ನಿಲ್ಲುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಅಸಾದುದ್ದೀನ್ ಓವೈಸಿ ಶುಕ್ರವಾರ (ಮೇ 06) ಭಾರತೀಯ ಜನತಾ ಪಕ್ಷ (ಬಿಜೆಪಿ) ಮೇಲೆ ವಾಗ್ದಾಳಿ ನಡೆಸಿದರು. ಪಕ್ಷವು ಮುಸ್ಲಿಮರ ವಿರುದ್ಧ ಸಮರಿ ಸಾರಿದೆ ಎಂದರು. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಎಸ್‌ಪಿ ಸೋಲಿಸಲಿದೆ ಎಂದು ಹೇಳಿದ್ದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದರು. ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಬದಲಾಯಿಸುವ ಶಕ್ತಿ ನಿಮಗಿಲ್ಲ ಎಂದು ಕಿಡಿಕಾರಿದರು.

Hyderabad Murder case: This is the worst crime according to Islam OYC

"ಏನೆಲ್ಲಾ ಮಾಡಿದರೂ ಕೊನೆಗೆ ಏನಾಯಿತು? ಅದೇ ನಿಷ್ಪ್ರಯೋಜಕ ರಾಜಕೀಯ ನಡೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ನೀವು ನಿಮ್ಮ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರೆ ಅಭ್ಯರ್ಥಿಗಳು ನಿಮ್ಮ(ಎಸ್‌ಪಿ) ಪರವಾಗಿ ಹೋರಾಡುತ್ತಿದ್ದರು" ಎಂದು ಅವರು ಹೇಳಿದರು.

Recommended Video

ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಯಾರ್ಯಾರಿಗೆ ಸಿಗುತ್ತೆ ಆಡುವ ಅವಕಾಶ | Oneindia Kannada

ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಿಸಬೇಕು ಎಂದು ಹೇಳಿದ ನಾಯಕರು ಎಲ್ಲಿದ್ದಾರೆ ಎಂದು ಹೈದರಾಬಾದ್ ಸಂಸದರು ಪ್ರಶ್ನಿಸಿದ್ದಾರೆ. "ಇಂದು ಯುಪಿಯಲ್ಲಿ, 100 ವರ್ಷಗಳಷ್ಟು ಹಳೆಯದಾದ ಮದರಸಾಗಳ 50 ವರ್ಷಗಳ ಹಿಂದಿನ ರಚನೆಯನ್ನು ಬುಲ್ಡೋಜರ್ ಮಾಡಲಾಗಿದೆ, ಆದರೆ ಸಮಾಜವಾದಿ ಪಕ್ಷವು ಮಾತನಾಡುವುದಿಲ್ಲ" ಎಂದು ಓವೈಸಿ ಅವರು ದೂರಿದ್ದಾರೆ.

English summary
AIMIM chief Asaduddin Owaisi has condemned the murder of a car showman worker Nagaraju (25) stabbed to death with a knife in front of his wife Ashirin Sultana (aka Pallavi) on May 4, 9am at Saroor Nagar, Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X