ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ರವಾನೆ; ಹೈದರಾಬಾದ್ ಪ್ರಥಮ ಹೆಜ್ಜೆ

|
Google Oneindia Kannada News

ಹೈದರಾಬಾದ್, ಫೆಬ್ರುವರಿ 3: ವ್ಯಕ್ತಿಯೊಬ್ಬರ ಹೃದಯವನ್ನು ಬೇರೆಯವರಿಗೆ ಕಸಿ ಮಾಡಲು ಜೀವಂತ ಹೃದಯವನ್ನು ಆಂಬುಲೆನ್ಸ್ ನಲ್ಲಿ ಝೀರೋ ಟ್ರಾಫಿಕ್ ಮೂಲಕ ಸಾಗಿಸುವುದನ್ನು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಹೈದರಾಬಾದ್ ನಲ್ಲಿ ಮೆಟ್ರೋ ರೈಲಿನ ಮೂಲಕ ಹೃದಯ ರವಾನೆ ಮಾಡಲಾಗಿದೆ.

ಜೀವಂತ ಹೃದಯ ಸಾಗಿಸಲೆಂದೇ ಹೈದರಾಬಾದ್ ಮೆಟ್ರೋ ರೈಲ್ವೆ ಮಂಗಳವಾರ ನಾಗೋಲೆ ಹಾಗೂ ಜುಬಿಲಿ ಹಿಲ್ಸ್‌ ನಡುವೆ ವಿಶೇಷ ಗ್ರೀನ್ ಕಾರಿಡಾರ್ ರೂಪಿಸಿತ್ತು. ಕಮಿನೇನಿ ಆಸ್ಪತ್ರೆಯಿಂದ ಜುಬಿಲಿ ಹಿಲ್ಸ್‌ವರೆಗೂ ತಡೆರಹಿತ ಮೆಟ್ರೋ ರೈಲಿನ ಸೇವೆ ಒದಗಿಸಿ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೃದ್ರೋಗಿಯೊಬ್ಬರ ಜೀವ ಉಳಿಸಲಾಗಿದೆ.

ಶಿವಮೊಗ್ಗದಿಂದ ಮಂಗಳೂರಿಗೆ ಝೀರೋ ಟ್ರಾಫಿಕ್: 3 ಗಂಟೆಯಲ್ಲಿ ಆಸ್ಪತ್ರೆ ತಲುಪಿದ ಚಾಲಕ ಶಿವಮೊಗ್ಗದಿಂದ ಮಂಗಳೂರಿಗೆ ಝೀರೋ ಟ್ರಾಫಿಕ್: 3 ಗಂಟೆಯಲ್ಲಿ ಆಸ್ಪತ್ರೆ ತಲುಪಿದ ಚಾಲಕ

ಹೈದರಾಬಾದ್ ಕಮಿನೇನಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯವನ್ನು ಅಪೋಲೊ ಆಸ್ಪತ್ರೆಗೆ ಸಾಗಿಸಲಾಗಿದೆ. ನಾಗೋಲೆ ಮೆಟ್ರೋ ಸ್ಟೇಷನ್ ನಿಂದ ಈ ವಿಶೇಷ ರೈಲು ಆರಂಭಗೊಂಡು ಜುಬಿಲಿ ಹಿಲ್ಸ್‌ವರೆಗೂ ತಲುಪಿದೆ. 21 ಕಿ.ಮೀಗಳ ಮಾರ್ಗ ಇದಾಗಿತ್ತು. ಈ ವಿಶೇಷ ರೈಲಿನಲ್ಲಿ ವೈದ್ಯರ ತಂಡವೂ ಹೃದಯದೊಂದಿಗೆ ಇತ್ತು.

Hyderabad Metro Train Carries Live Heart For Transplant First Time

Recommended Video

ಶಿಕ್ಷಣ ಸಚಿವರಿಂದ ಮಹತ್ವದ ನಿರ್ಧಾರ! | Oneindia Kannada

"ಜುಬಲೀ ಹಿಲ್ಸ್ ಗೆ ತಲುಪಲು ಮೂವತ್ತು ನಿಮಿಷ ಸಮಯ ಹಿಡಿಯಿತು. ಜುಬಿಲಿ ಹಿಲ್ಸ್‌ ಮೆಟ್ರೋ ಸ್ಟೇಷನ್ ನಿಂದ ಅಪೋಲೊ ಆಸ್ಪತ್ರೆಗೆ ಆಂಬುಲೆನ್ಸ್ ಸಿದ್ಧವಾಗಿಟ್ಟುಕೊಂಡಿದ್ದು, ತಕ್ಷಣವೇ ಹೃದಯವನ್ನು ಆಸ್ಪತ್ರೆಗೆ ರವಾನಿಸಲಾಯಿತು. ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ರವಾನೆ ಮಾಡಲಾಗಿದೆ" ಎಂದು ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎನ್ ವಿಎಸ್ ರೆಡ್ಡಿ ತಿಳಿಸಿದ್ದಾರೆ.

English summary
Hyderabad metro rail created a special green corridor between nagole and jubilee hills to transport live heart,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X