ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳಸಿದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಹೈದರಾಬಾದ್ ಇಂಜಿನಿಯರ್

|
Google Oneindia Kannada News

ಹೈದರಾಬಾದ್, ಜೂನ್ 29: ಬಳಸಿದ ಪ್ಲಾಸ್ಟಿಕ್ ವಸ್ತುಗಳಿಂದ ಪೆಟ್ರೋಲ್ ತಯಾರಿಸುವುದೆಂದರೆ ಅದು ಸಾಧ್ಯವಾಗುವ ಮಾತಾ? ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ ಹೈದರಾಬಾದ್ ನ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬರು.

ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಸತೀಶ್ ಕುಮಾರ್ ಎನ್ನುವವರೇ ಈ ಅದ್ಭುತ ಸಾಧನೆ ಮಾಡಿದ ವ್ಯಕ್ತಿ. ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸುತ್ತಿರುವುದೂ ಅಲ್ಲದೇ, ಅದನ್ನು ಇಂದಿನ ಮಾರುಕಟ್ಟೆ ಬೆಲೆಯ ಸುಮಾರು ಅರ್ದಕ್ಕೆ ಅಂದರೆ ಕೇವಲ ನಲವತ್ತು ರೂಪಾಯಿಗೆ ಮಾರುತ್ತಿದ್ದಾರೆ ಬೇರೆ..

ಮೈಕ್ರೋ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ತೇಜಸ್ವಿನಿ ಅನಂತಕುಮಾರ್ಮೈಕ್ರೋ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ತೇಜಸ್ವಿನಿ ಅನಂತಕುಮಾರ್

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದಲ್ಲಿ ತನ್ನ ಕಂಪೆನಿಯ ಹೆಸರನ್ನು ನೊಂದಾಯಿಸಿಕೊಂಡಿರುವ ಸತೀಶ್, ಮೂರು ಹಂತದ ಪ್ರಕ್ರಿಯೆ ಮೂಲಕ, ಪೆಟ್ರೋಲ್ ತಯಾರಿಸುತ್ತಿದ್ದಾರೆ.

Hyderabad based mechanical engineer made petrol from used plastics

ವಾಯು, ಜಲಮಾಲಿನ್ಯವಾಗದಂತೆ ಪೆಟ್ರೋಲ್ ತಯಾರಿಸಲಾಗುತ್ತಿದೆ ಎಂದು ಹೇಳುವ ಸತೀಶ್, ಇದರಿಂದ ಲಾಭ ಮಾಡಿಕೊಳ್ಳುವ ಯಾವ ಉದ್ದೇಶವೂ ನಮಗಿಲ್ಲ. ಬೇಕಿದ್ದಲ್ಲಿ, ನಮ್ಮ ಈ ತಂತ್ರಜ್ಞಾನವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಿದ್ದರಿದ್ದೇವೆ ಎಂದು ಸತೀಶ್ ಹೇಳುತ್ತಾರೆ.

ಸುಮಾರು ಐನೂರು ಕೆಜಿ ಬಳಸಿದ ಪ್ಲಾಸ್ಟಿಕ್, ನಾಲ್ಕು ನೂರು ಲೀಟರ್ ನಷ್ಟು ಪೆಟ್ರೋಲ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಸತೀಶ್ ಕುಮಾರ್ ಹೇಳುತ್ತಾರೆ.

ಈಗ ಉತ್ಪಾದಿಸಲಾಗುತ್ತಿರುವ ಇಂಧನವನ್ನು ಸ್ಥಳೀಯ ಕೈಗಾರಿಕಾ ಘಟಕಗಳಿಗೆ ನಲವತ್ತರಿಂದ ಐವತ್ತು ರೂಪಾಯಿಗೆ ಸತೀಶ್ ಅವರ ಸಂಸ್ಥೆ ವಿತರಿಸುತ್ತಿದೆ.

English summary
Satish Kumar, a Hyderabad based mechanical engineer made petrol from used plastics and selling at Rs. 40 per ltr
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X