ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಬಿಲ್ ಕಂಡು ಹೈದ್ರಾಬಾದ್‌ನ ವ್ಯಕ್ತಿಗೆ ಶಾಕ್: 6.67 ಲಕ್ಷ ರೂಪಾಯಿ

|
Google Oneindia Kannada News

ಹೈದ್ರಾಬಾದ್, ಜುಲೈ 31: ಪ್ರತಿ ತಿಂಗಳು 800 ರೂಪಾಯಿಯಿಂದ 1,000 ರೂಪಾಯಿವರೆಗೂ ವಿದ್ಯುತ್ ಬಿಲ್‌ ಬರುತ್ತಿದ್ದ ಮನೆಗೆ ದಿಢೀರನೇ ಲಕ್ಷಗಟ್ಟಲೆ ಬಿಲ್‌ ಬಂದರೆ ಏನಾಗಬೇಡ? ಇದೇ ಪರಿಸ್ಥಿತಿ ಹೈದ್ರಾಬಾದ್‌ನ ವ್ಯಕ್ತಿ ಎದುರಿಸಿದ್ದಾರೆ.

ಹೈದರಾಬಾದ್ ನಿವಾಸಿ ಬಿ. ವೀರಬಾಬು ಅವರ ವಿದ್ಯುತ್ ಬಿಲ್ ಮಾಸಿಕ ಸರಾಸರಿ 1,000 ರೂಪಾಯಿಯಿಂದ 6 ಲಕ್ಷಕ್ಕೆ ಏರಿದ ನಂತರ ಆಘಾತಕ್ಕೊಳಗಾದರು. ಕೆಲವು ದಿನಗಳ ಹಿಂದೆ, ಅಂಬರ್‌ಪೇಟ್‌ನಲ್ಲಿರುವ ಅವರ ಮನೆಗೆ ಕಳೆದ ನಾಲ್ಕು ತಿಂಗಳಿನಿಂದ ಒಟ್ಟು ಬಿಲ್ 6.67 ಲಕ್ಷ ರೂಪಾಯಿ ಬಂದಿದೆ.

ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ವಿರುದ್ಧ ರೈತರ ಆಕ್ರೋಶವೇಕೆ?ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ವಿರುದ್ಧ ರೈತರ ಆಕ್ರೋಶವೇಕೆ?

"ಕೆಲವು ದಿನಗಳ ಹಿಂದೆ, ನಾನು ಅಂಬರ್ಪೆಟ್‌ನಲ್ಲಿರುವ ನನ್ನ ಮನೆಗೆ 6.67 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಡೆದಿದ್ದೇನೆ. ನನ್ನ ಬಿಲ್ ಪರಿಶೀಲಿಸಲು ನಾನು ತಕ್ಷಣ ವಿದ್ಯುತ್ ಇಲಾಖೆ ಕಚೇರಿಯನ್ನು ಸಂಪರ್ಕಿಸಿದೆ ಆದರೆ ಅವರು ನನ್ನ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರ, ನಾನು ವೀಡಿಯೊವನ್ನು ಮಾಡಿದ್ದೇನೆ, ಅದು ವೈರಲ್ ಆಯಿತು" ಎಂದು ಅವರು ಹೇಳಿದರು.

Hyderabad Man Receives Electricity Bill Of Rs. 6.67 Lakh

ಸಾಮಾನ್ಯವಾಗಿ ಅವರು ತಮ್ಮ ಮನೆಗೆ ಸುಮಾರು 800 ರಿಂದ 1,100 ರವರೆಗೆ ವಿದ್ಯುತ್ ಬಳಕೆಯ ಬಿಲ್ ಪಡೆಯುತ್ತಾರೆ. ಆದರೆ ಕಳೆದ ಮೂರು ತಿಂಗಳುಗಳಿಂದ ವಿದ್ಯುತ್ ಇಲಾಖೆ ಯಾವುದೇ ಸಿಬ್ಬಂದಿ ಮೀಟರ್ ಓದುವಿಕೆಯನ್ನು ತೆಗೆದುಕೊಳ್ಳಲು ಬರಲಿಲ್ಲ. ಆದರೂ ಇಷ್ಟು ಬಿಲ್ ಬಂದಿರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಿ. ವೀರಬಾಬು ಅವರ ವಿಡಿಯೋ ವೈರಲ್ ಆದ ನಂತರ, ವಿದ್ಯುತ್ ವಿಭಾಗದ ಅಧಿಕಾರಿಗಳು ಆತನನ್ನು ಸಂಪರ್ಕಿಸಿ ಭವಿಷ್ಯದಲ್ಲಿ ತೊಂದರೆ ತಪ್ಪಿಸಲು ಮೀಟರ್ ಬದಲಾಯಿಸಿದರು.

English summary
Hyderabad resident B Veerababu was left shocked after his electricity bill surged to over Rs 6 lakh from a monthly average of about Rs 1,000 earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X