ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಎಂಬ ಕಾರಣಕ್ಕೆ ಫುಡ್ ಡೆಲಿವರಿ ಬೇಡ ಎಂದ ಗ್ರಾಹಕ, ದೂರು ದಾಖಲು

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 26: ಫುಡ್ ಡೆಲಿವರಿ ಬಾಯ್ ಮುಸ್ಲಿಂ ಎಂದು ತಿಳಿಯುತ್ತಿದ್ದಂತೆಯೇ ಆರ್ಡರ್ ಮಾಡಿದ್ದ ಫುಡ್ ಅನ್ನೇ ವ್ಯಕ್ತಿಯೊಬ್ಬರು ಕ್ಯಾನ್ಸಲ್ ಮಾಡಿದ ಘಟನೆ ಹೈದರಾಬಾದಿನಲ್ಲಿ ನಡೆದಿದ್ದು, ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಜಯ್ ಕುಮಾರ್ ಎಂಬುವವರು ಫುಡ್ ಡೆಲಿವರಿ app ವೊಂದರಲ್ಲಿ ಆಹಾರ ಆರ್ಡರ್ ಮಾಡಿದ್ದರು. ಅದನ್ನು ಅವರಿಗೆ ತಲುಪಿಸಲು ಮುದಾಸ್ಸಿರ್ ಎಮಬ ಮುಸ್ಲಿಂ ಯುವಕ ಬರಬೇಕಿತ್ತು. ಆದರೆ ಫುಡ್ ಡೆಲಿವರಿ ಏಜೆಂಟ್ ಹೆಸರು ನೋಡುತ್ತಿದ್ದಂತೆಯೇ ಅಜಯ್ ಕುಮಾರ್ ಆ ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿದ್ದಲ್ಲದೆ, ಆರ್ಡರ್ ಕ್ಯಾನ್ಸಲ ಮಾಡಿರುವುದಕ್ಕೆ ಕಾರಣ ನೀಡಿ, "ನನಗೆ ಹಿಂದು ಫುಡ್ ಡೆಲಿವರಿ ಬಾಯ್ ಬೇಕು, ಮುಸ್ಲಿಂ ಆದರೆ ಆಹಾರ ಸ್ವೀಕರಿಸುವುದಿಲ್ಲ" ಎಂದಿದ್ದಾರೆ.

ಫುಡ್ ಡೆಲಿವರಿಗೆಂದು ಬಂದು ಮುದ್ದಿನ ನಾಯಿಯನ್ನೇ ಕದ್ದ ಜೊಮ್ಯಾಟೋ ಸಿಬ್ಬಂದಿ!ಫುಡ್ ಡೆಲಿವರಿಗೆಂದು ಬಂದು ಮುದ್ದಿನ ನಾಯಿಯನ್ನೇ ಕದ್ದ ಜೊಮ್ಯಾಟೋ ಸಿಬ್ಬಂದಿ!

ಇದರಿಂದ ಮುಜುಗರಕ್ಕೊಳಗಾದ ಮುದಾಸ್ಸಿರ್, ಅಜಯ್ ಕುಮಾರ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Hyderabad: Man Booked For Not Accepting Food From Muslim Delivery Agent

ಕಳೆದ ಜುಲೈನಲ್ಲಿ ಜೊಮ್ಯಾಟೋ ಫುಡ್ ಡೆಲಿವರಿ app ನಲ್ಲಿ ಫುಡ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬ ಡೆಲಿವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದ ಘಟನೆ ನಡೆದಿತ್ತು. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು.

English summary
Hyderabad: Man booked for not accepting food from Muslim delivery agent,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X