• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತಕ್ಕೆ ಮೊದಲ ಹಂತದಲ್ಲಿ ರಷ್ಯಾದಿಂದ 1.50 ಲಕ್ಷ ಸ್ಪುಟ್ನಿಕ್-ವಿ ಲಸಿಕೆ

|
Google Oneindia Kannada News

ನವದೆಹಲಿ, ಮೇ 1: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತದಲ್ಲಿ ಲಸಿಕೆಯ ಕೊರತೆ ಸೃಷ್ಟಿಯಾಗಿದೆ. ಇದರ ಮಧ್ಯೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯು ಶನಿವಾರ ಸಂಜೆ ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದೆ.
ರಷ್ಯಾದಿಂದ ಮೊದಲ ಹಂತದಲ್ಲಿ 1,50,000 ಡೋಸ್ ಸ್ಪುಟ್ನಿಕ್-ವಿ ಲಸಿಕೆಯನ್ನು ರವಾನೆ ಮಾಡಲಾಗಿದೆ. ಇದೇ ತಿಂಗಳಿನಲ್ಲಿ ರಷ್ಯಾದಿಂದ 3 ಲಕ್ಷ ಡೋಸ್ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಬರಲಿದೆೆ. ಈ ಲಸಿಕೆಯನ್ನು ದೇಶದಲ್ಲಿ ವಿತರಣೆ ಪಾಲುದಾರಿಕೆ ಪಡೆದಿರುವ ಡಾ. ರೆಡ್ಡೀಸ್ ಪ್ರಯೋಗಾಲಯದಿಂದ ಸರಬರಾಜು ಮಾಡಲಾಗುತ್ತದೆ.

ಕೋವಿಡ್ 19: ಅಮೆರಿಕ ಭಾರತಕ್ಕೆ ಒದಗಿಸುತ್ತಿರುವ ವೈದ್ಯಕೀಯ ಸಾಮಗ್ರಿಗಳ ವಿವರ
ಈಗಾಗಲೇ ದೇಶದಲ್ಲಿ ಸ್ಪುಟ್ನಿಕ್-ವಿ ಲಸಿಕೆ ವಿತರಣೆಗೆ ಅನುಮೋದನೆ ನೀಡಲಾಗಿದೆ. ಅದಾಗ್ಯೂ, ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ವಿತರಣೆ ಮಾಡುವುದಕ್ಕೂ ಮೊದಲು ಡಾ.ರೆಡ್ಡೀಸ್ ಪ್ರಯೋಗಾಲಯವು ದೇಶದ ಔಷಧೀಯ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಸ್ಪುಟ್ನಿಕ್-ವಿ ಲಸಿಕೆಯ ಪರಿಣಾಮಕಾರತ್ವ:
ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವುದಕ್ಕೆ ಕಳೆದ ಏಪ್ರಿಲ್ 12ರಂದು ಅನುಮೋದನೆ ನೀಡಲಾಗಿದೆ. ಸ್ಪುಟ್ನಿಕ್-ವಿ ಲಸಿಕೆಯು ಕೊರೊನಾವೈರಸ್ ರೋಗಾಣುಗಳ ವಿರುದ್ಧ ಶೇ.91.60ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ವೈದ್ಯಕೀಯ ಪ್ರಯೋಗದಲ್ಲಿ ದೃಢಪಟ್ಟಿದೆ ಎಂದು ಕಂಪನಿ ಹೇಳಿದೆ.
ಭಾರತದಲ್ಲ ಮೊದಲು ಎರಡು ಲಸಿಕೆಗಳಿಗೆ ಅನುಮೋದನೆ:
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ.

English summary
Hyderabad: India Recived 1.50 Lakh Sputnik V Vaccines from Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X