ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಆಸ್ಪತ್ರೆಯಲ್ಲಿ ಬೆಂಕಿ, ಮಗು ಸಾವು, ಕಾರಣ ಬಹಿರಂಗ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 24: ಇಲ್ಲಿನ ಶೈನ್ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಜವಾದ ಕಾರಣ ಏನು ಎಂಬುದು ಈಗ ಬಹಿರಂಗಗೊಂಡಿದೆ.

ಶೈನ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಾಲ್ಕು ತಿಂಗಳ ಶಿಶು ಮೃತಪಟ್ಟಿದ್ದು, ಇನ್ನೂ ನಾಲ್ಕು ಮಕ್ಕಳಿಗೆ ಗಂಭೀರ ಗಾಯಗಳಾಗಿತ್ತು.

ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಡ್ರಿಪ್ ಬಾಟಲಿ ಸಮೇತ ಹೊರಗೋಡಿ ಬಂದ ರೋಗಿಗಳುಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಡ್ರಿಪ್ ಬಾಟಲಿ ಸಮೇತ ಹೊರಗೋಡಿ ಬಂದ ರೋಗಿಗಳು

ಆದರೆ ಯಾವುದೇ ಅಗ್ನಿ ಸುರಕ್ಷತಾ ಕ್ರಮಗಳನ್ನು ಆಸ್ಪತ್ರೆ ಅನುಸರಿಸುತ್ತಿರಲಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಬೆಂಕಿ ಹೇಗೆ ತಗುಲಿತೋ ಗೊತ್ತೇ ಇಲ್ಲ, ಎಲ್ಲಾ ಸುರಕ್ಷತಾ ಕ್ರಮಗಳನ್ನು ಸನುರಿಸಲಾಗುತ್ತಿದೆ ಎಂದು ಸಬೂಬು ಹೇಳಿದ್ದರು.

Hyderabad Hospital Fire Accident Main Reason Is Lack Of Safety Measures

ಆಸ್ಪತ್ರೆಯಲ್ಲಿ ಕೇವಲ 20 ಬೆಡ್‌ಗಳಿಗೆ ಮಾತ್ರ ಅವಕಾಶವಿದ್ದರೂ ನಿಯಮವನ್ನು ಗಾಳಿಗೆ ತೂರಿ 30 ಬೆಡ್‌ಗಳನ್ನು ಇರಿಸಲಾಗಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಂಗಾರೆಡ್ಡಿ ತಿಳಿಸಿದ್ದಾರೆ.

ಆಸ್ಪತ್ರೆಯು ಕೇವಲ ಒಂದು ಎಂಟ್ರಿ, ಒಂದು ಎಕ್ಸಿಟ್ ಹೊಂದಿದೆಯೇ ಹೊರತು, ಫೈರ್ ಎಂಜಿನ್‌ಗೆ ಯಾವುದೇ ಎಂಟ್ರಿ ಇಟ್ಟಿರಲಿಲ್ಲ.

ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಾಗ 42 ಮಕ್ಕಳು ಸೇರಿದಂತೆ ಅವರ ಕುಟುಂಬದವರು ಆಸ್ಪತ್ರೆಯಲ್ಲಿದ್ದರು. 20 ಬೆಡ್‌ಗಳಿರುವಲ್ಲಿ 50 ಹಾಸಿಗೆಗಳನ್ನು ಇರಿಸಲಾಗಿತ್ತು. ಈ ಘಟನೆ ಎಲ್‌ಬಿ ನಗರದ ಶೈನ್ ಆಸ್ಪತ್ರೆಯಲ್ಲಿ ನಡೆದಿದೆ.

ಈ ರೀತಿ ಘಟನೆಗಳು ನಡೆದಾಗ ಆಸ್ಪತ್ರೆ ಸಿಬ್ಬಂದಿ ಹೇಗೆ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನಾಗಲಿ ಅಥವಾ ಕಾರ್ಯಕ್ರಮಗಳನ್ನಾಗಲಿ ನಿಯೋಜಿಸಿರಲಿಲ್ಲ.

ಮಗುವಿನ ತಂದೆ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿದ್ದಾರೆ.

English summary
Hyderabad Hospital Where An Infant Died In Fire Accident Main Reason Is Lack Of Safety Measures. Shine Hospital in LB Nagar, Hyderabad which resulted in the death of a baby and left four other infants injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X