ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದಿನ ಜನನಿ ರಾವ್ ಎಂಬ ಸ್ವಿಗ್ಗಿ ಡೆಲಿವರಿ ಗರ್ಲ್ ಮನದ ಮಾತು

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 19: ಸ್ವಿಗ್ಗಿ ಡೆಲಿವರಿ ಕೆಲಸ ಮಾಡುವುದೆಲ್ಲ ಮಹಿಳೆಯರಿಗೆ ಹೇಳಿಮಾಡಿಸಿದ್ದಲ್ಲ ಎಂಬ ಪೂರ್ವಗ್ರಹದಲ್ಲಿದ್ದವರಿಗೆ ಹೈದರಾಬಾದಿನ ಈ ಹುಡುಗಿ ಉತ್ತರ ನೀಡಿದ್ದಾಳೆ.

ಜನನಿ ರಾವ್ ಎಂಬ 20 ರ ಹುಡುಗಿ ತನ್ನ ಸ್ಕೂಟರ್ ನಲ್ಲಿ ಹೈದರಾಬಾದಿನ ಬೀದಿ ಬೀದಿ ಅಲೆಯುತ್ತಾಳೆ. ಹಸಿದವರಿಗೆ ಅನ್ನ ನೀಡುತ್ತಾಳೆ.

ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!

"ನಾನು ಈ ಕೆಲಸಕ್ಕೆ ಸೇರಿ ಎರಡೂವರೆ ತಿಂಗಳಾಯ್ತು. ಈ ಕೆಲಸದಲ್ಲಿ ನನಗೆ ಸಂಭ್ರಮವಿದೆ. ಇದೊಂದು ಇಂಟರೆಸ್ಟಿಂಗ್ ಕೆಲಸ. ನಾನು ಪ್ರತಿದಿನ ಎಷ್ಟೊಂದು ಜನರನ್ನು ಭೇಟಿ ಮಾಡುತ್ತೇನೆ. ಇದೊಂದು ವಿಭಿನ್ನ ಅನುಭವ" ಎನ್ನುತ್ತಾರೆ ಜನನಿ ರಾವ್.

Hyderabad Girl Working As Food Delivery Executive

"ನನ್ನ ಪ್ರಕಾರ ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ದದಲ್ಲ. ಈ ಕೆಲಸಕ್ಕೆ ಗ್ರಾಹಕರ ಪ್ರತಿಕ್ರಿಯೆಯನ್ನು ನೋದಿದಾಗ ಬಹಳ ಖುಶಃಇಯಾಗುತ್ತದೆ. ಇಂಥ ಕೆಲಸದಲ್ಲಿ ಪ್ರತಿದಿನವೂ ನೂರಾರು ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾಗಬಹುದು. ಇದು ಬದುಕಿನಲ್ಲಿ ಉತ್ತಮ ಅನುಭವ ನೀಡುತ್ತದೆ" ಎಂದು ಜನನಿ ರಾವ್ ಹೇಳುತ್ತಾರೆ.

"ಕೆಲಸವೆಂದರೆ ಹೆಚ್ಚಿನ ಸಂಬಳ ನೀಡುವುದು, ಅಥವಾ ಎಸಿ ರೂಮಿನಲ್ಲಿ ಕುಳಿತು ಮಾಡುವುದಷ್ಟೇ ಅಲ್ಲ. ನಾವು ಮಾಡುವ ಕೆಲಸ ನಮಗೆ ಖುಷಿ ಕೊಡಬೇಕು. ಇಲ್ಲವೆಂದರೆ ಎಷ್ಟು ಸಂಬಳ ಬಂದರೂ ಪ್ರಯೋಜನವಿಲ್ಲ. ನಾವು ನಮ್ಮ ಕೆಲಸವನ್ನು ಹೆಚ್ಚು ಸಂಭ್ರಮಿಸಿದಷ್ಟೂ ಅದು ಇಷ್ಟವಾಗುತ್ತದೆ" ಎನ್ನುತ್ತಾರೆ ಜನನಿ ರಾವ್.

ಬೈಕ್ ರೈಡಿಂಗ್ ಮೂಲಕ ದೇಶ ಸುತ್ತಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿಬೈಕ್ ರೈಡಿಂಗ್ ಮೂಲಕ ದೇಶ ಸುತ್ತಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿ

"ಈ ಕೆಲಸ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತಿದೆ. ಆದರೆ ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಹೈದರಾಬಾದ್ ತೆಲಂಗಾಣದ ರಾಜ್ಯದ ಅತ್ಯಂತ ಸಯರಕ್ಷಿತ ನಗರಗಳಲ್ಲೊಂದು. ಆದ್ದರಿಂದ ಭಯಪಡುವ ಅಗತ್ಯವೇ ಇಲ್ಲ. ನನಗೆ ಎಂದಿಗೂ ಅಭದ್ರತೆಯ ಭಯ ಕಾಡಲಿಲ್ಲ" ಎನ್ನುತ್ತಾರೆ ಅವರು.

English summary
Hyderabad Girl Working As Food Delivery Executive
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X