ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗದ ಆಮಿಷ; ಹೈದರಾಬಾದ್ ಯುವತಿಗೆ ಸೌದಿಯಲ್ಲಿ ಹಿಂಸೆ

|
Google Oneindia Kannada News

ಹೈದರಾಬಾದ್, ಫೆಬ್ರವರಿ 04: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮುಸ್ಲಿಂ ಯುವತಿಯನ್ನು ಸೌದಿ ಅರೇಬಿಯಾದಲ್ಲಿ ಮನೆ ಕೆಲಸಕ್ಕೆ ಸೇರಿಸಲಾಗಿದೆ. ಮಗಳನ್ನು ದೇಶಕ್ಕೆ ವಾಪಸ್ ಕರೆಸಲು ತಾಯಿ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ.

ಹೈದರಾಬಾದ್ನ ನಿವಾಸಿ ಸೈಯದ್ ಸುಲ್ತಾನ ತಮ್ಮ ಮಗಳು ಅಮೀರ್ ಸುಲ್ತಾನರನ್ನು ಮಾನವ ಕಳ್ಳ ಸಾಗಣೆ ಮೂಲಕ ರಿಯಾದ್‌ಗೆ ಕರೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಿದ್ದಾರೆ. ದಾಖಲೆಗಳನ್ನು ನಕಲು ಮಾಡಿ ಅಮೀರ್ ಸುಲ್ತಾನಗೆ 28 ವರ್ಷ ಎಂದು ಹೇಳಲಾಗಿದೆ ಎಂದು ದೂರಿದ್ದಾರೆ.

ಸೌದಿ ದೊರೆ ವಿರುದ್ಧ ಪೋಸ್ಟ್‌; ಹರೀಶ್ ನಿವಾಸಕ್ಕೆ ಅಧಿಕಾರಿಗಳ ಭೇಟಿ ಸೌದಿ ದೊರೆ ವಿರುದ್ಧ ಪೋಸ್ಟ್‌; ಹರೀಶ್ ನಿವಾಸಕ್ಕೆ ಅಧಿಕಾರಿಗಳ ಭೇಟಿ

ಇಬ್ಬರು ಏಜೆಂಟ್‌ಗಳು ರಿಯಾದ್‌ನಲ್ಲಿ ಬ್ಯುಟಿಷಿಯನ್ ಕೆಲಸ ಕೊಡಿಸುವುದಾಗಿ 2017ರಲ್ಲಿ ಅಮೀರ್ ಸುಲ್ತಾನರನ್ನು ಕರೆದುಕೊಂಡು ಹೋದರು. ಬಲವಂತವಾಗಿ ಆಕೆಯನ್ನು ಮನೆಯ ಕೆಲಸಕ್ಕೆ ಸೇರಿಸಲಾಗಿದೆ ಎಂದು ಆರೋಪಿಸಿದರು.

ನಿಯಮ ಸಡಿಸಿಲಿದ ಸೌದಿ: ಗಂಡು-ಹೆಣ್ಣು ಒಂದೇ ಕೋಣೆಯಲ್ಲಿರಬಹುದುನಿಯಮ ಸಡಿಸಿಲಿದ ಸೌದಿ: ಗಂಡು-ಹೆಣ್ಣು ಒಂದೇ ಕೋಣೆಯಲ್ಲಿರಬಹುದು

Hyderabad Girl Human Trafficked To Saudi Arabias Riyadh

ಮನೆ ಕೆಲಸಕ್ಕೆ ಸೇರಿರುವ ಜಾಗದಲ್ಲಿ ಆಕೆಗೆ ಆಹಾರ, ನೀರು ಮತ್ತು ಸರಿಯಾದ ವೇತನ ನೀಡುತ್ತಿಲ್ಲ. ಆಕೆಗೆ ದೈಹಿಕ ಹಿಂಸೆಯನ್ನು ನೀಡಲಾಗುತ್ತಿದೆ ಎಂದು ಸೈಯದ್ ಸುಲ್ತಾನ ಪುತ್ರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆಕೆಗೆ ಈಗ 16 ವರ್ಷ ವಯಸ್ಸು ಎಂದು ಹೇಳಿದ್ದಾರೆ.

ಸೌದಿ ಅರೆಬಿಯಾ: ಭೀಕರ ರಸ್ತೆ ಅಪಘಾತದಲ್ಲಿ 35 ವಿದೇಶಿಗರು ಸಾವುಸೌದಿ ಅರೆಬಿಯಾ: ಭೀಕರ ರಸ್ತೆ ಅಪಘಾತದಲ್ಲಿ 35 ವಿದೇಶಿಗರು ಸಾವು

ಅಮೀರ್ ಸುಲ್ತಾನರನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಬೇಕು ಎಂದು ಸೈಯದ್ ಸುಲ್ತಾನ ಭಾರತೀಯ ವಿದೇಶಾಂಗ ಇಲಾಖೆಗೆ ಮನವಿಯನ್ನು ಮಾಡಿದ್ದಾರೆ.

ಇಬ್ಬರು ಏಜೆಂಟರುಗಳು ಪುತ್ರಿಯನ್ನು ಸೌದಿ ಅರೇಬಿಯಾಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾನವ ಕಳ್ಳ ಸಾಗಣೆ ಮೂಲಕ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

English summary
Hyderabad based Syeda Sulatana claims that her daughter Amreen Sultana was human trafficked to Saudi Arabia's Riyadh by 2 agents. Who promised to give her beautician's job. But she was employed as a servant in Riyadh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X