ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಗಂಟೆ ಸ್ಪಾಟ್ ನಲ್ಲಿ ಬಿದ್ದಿದ್ದವು ಅತ್ಯಾಚಾರಿಗಳ ಮೃತದೇಹ!

|
Google Oneindia Kannada News

Recommended Video

DIsha issue should be a lesson to everyone | Oneindia kannada | JUSTICE SERVED

ಹೈದ್ರಾಬಾದ್, ಡಿಸೆಂಬರ್.06: ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಕಾಮುಕರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಹೈದ್ರಾಬಾದ್ ನಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ಗೆ ದೇಶಾದ್ಯಂತ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಹಗಲೊತ್ತಿನಲ್ಲಿ ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದಲ್ಲಿ ಜನರೇ ಹಲ್ಲೆಗೆ ಮುಂದಾಬಹುದು ಎಂಬ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವ 3 ಗಂಟೆ ವೇಳೆಗೆ ನಾಲ್ವರು ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಲಾಗಿತ್ತು.

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?

ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋದಾಗ ಮಾಡಿದ ಒಂದೇ ಒಂದು ತಪ್ಪಿನಿಂದ ಕಳೆದ 10 ಗಂಟೆಗಳಿಂದ ಅದೇ ಸ್ಥಳದಲ್ಲಿ ಆರೋಪಿಗಳು ಹೆಣವಾಗಿ ಬಿದ್ದಿದ್ದಾರೆ. ಬೆಳಗಿನ ಜಾವ ಎನ್ ಕೌಂಟರ್ ನಡೆದ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Hyderabad Encounter: Accused Deadbody In The Spot Around 10 hours

ಸ್ಪಾಟ್ ನಲ್ಲೇ ಬಿದ್ದಿದ್ದ ಮೃತದೇಹಗಳು:

ಹೈದ್ರಾಬಾದ್ ಹೊರವಲಯ ಚಟಾನ್ ಪಲ್ಲಿ ಬಳಿ ಸ್ಥಳ ಮಹಜರು ಮಾಡಲು ಆರೋಪಿ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಚನ್ನಕೇಶವುಲುರನ್ನು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.

ಎನ್‌ಕೌಂಟರ್ ಹೇಗೆ ಮತ್ತು ಯಾವಾಗ ನಡೆಯುತ್ತದೆ? ನಿಯಮಗಳು ಏನು?ಎನ್‌ಕೌಂಟರ್ ಹೇಗೆ ಮತ್ತು ಯಾವಾಗ ನಡೆಯುತ್ತದೆ? ನಿಯಮಗಳು ಏನು?

ಈ ವೇಳೆ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ವಾರ್ನಿಂಗ್ ಗೆ ಬಗ್ಗದಿದ್ದಾಗ ನಾಲ್ವರ ಮೇಲೂ ಫೈರಿಂಗ್ ನಡೆಸಿದ್ದಾರೆ. ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ನಾಲ್ವರು ಆರೋಪಿಗಳು ಬಲಿಯಾಗಿದ್ದು, ಈ ಘಟನೆ ಬೆಳಗಿನ ಜಾವ 3.30ರ ವೇಳೆಗೆ ನಡೆದಿತ್ತು. ಇದಾಗಿ ಮಧ್ಯಾಹ್ನ 2 ಗಂಟೆ ಕಳೆದರೂ ಮೃತದೇಹಗಳನ್ನು ಅಲ್ಲಿಂದ ರವಾನೆ ಮಾಡಿರಲಿಲ್ಲ. ರಕ್ಷಣಾ ದೃಷ್ಟಿಯಿಂದ ಮೃತದೇಹಗಳನ್ನು ಸ್ಪಾಟ್ ನಲ್ಲಿ ಬಿಟ್ಟಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ನಂತರದಲ್ಲಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

English summary
Hyderabad Encounter: Accused Deadbody In The Spot Around 10 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X