ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕನ ಶ್ವಾಸಕೋಶದಲ್ಲಿ ಸಿಲುಕಿದ್ದ ಬಲ್ಬ್‌ ತೆಗೆದ ಹೈದರಾಬಾದ್ ವೈದ್ಯರು

|
Google Oneindia Kannada News

ಹೈದರಾಬಾದ್, ಜನವರಿ 06: ಒಂಬತ್ತು ವರ್ಷದ ಬಾಲಕ ಆಟದ ಸಾಮಾನಿನಲ್ಲಿದ್ದ ಬಲ್ಬ್ ಅನ್ನು ಆಕಸ್ಮಿಕವಾಗಿ ನುಂಗಿದ್ದು, ಹೈದರಾಬಾದ್ ಆಸ್ಪತ್ರೆಯ ವೈದ್ಯರ ತಂಡ ಬಾಲಕನ ಶ್ವಾಸಕೋಶದಿಂದ ಯಶಸ್ವಿಯಾಗಿ ಆ ಬಲ್ಬ್ ಅನ್ನು ಹೊರತೆಗೆದಿದ್ದಾರೆ.

ತೆಲಂಗಾಣದ ಮಹಬೂಬ್ ನಗರದ ಪ್ರಕಾಶ್ ಎಂಬ ಬಾಲಕ ಜ.4ರಂದು ಆಕಸ್ಮಿಕವಾಗಿ ಆಟದ ಸಾಮಾನಿನಲ್ಲಿದ್ದ ಬಲ್ಬ್ ನುಂಗಿದ್ದ. ಆ ನಂತರ ಆತನಲ್ಲಿ ಇದ್ದಕ್ಕಿದ್ದಂತೆ ಕೆಮ್ಮು ಹಾಗೂ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಬಾಲಕನನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಅಚ್ಚರಿ; ಆಪರೇಷನ್ ಮಾಡಿಸಿಕೊಳ್ಳುತ್ತಾ ಪಿಯಾನೋ ನುಡಿಸಿದ ಬಾಲಕಿಏನಿದು ಅಚ್ಚರಿ; ಆಪರೇಷನ್ ಮಾಡಿಸಿಕೊಳ್ಳುತ್ತಾ ಪಿಯಾನೋ ನುಡಿಸಿದ ಬಾಲಕಿ

ವೈದ್ಯರು ಸಿಟಿ ಸ್ಕ್ಯಾನ್ ನಡೆಸಿದಾಗ, ಆತನ ಶ್ವಾಸಕೋಶದಲ್ಲಿ ಆಟಿಕೆ ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಹಾಗೆಯೇ ಬಿಟ್ಟರೆ ಜೀವಕ್ಕೇ ಮಾರಕವಾಗಬಹುದು ಎಂದು ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ನಂತರ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಲಾಗಿದೆ.

Hyderabad Doctors Removed Toy Bulb From Boy Lungs

ಇದಕ್ಕಾಗಿ ಮೆಡಿಕವರ್ ಆಸ್ಪತ್ರೆಯ ವೈದ್ಯರ ತಂಡ ಪೀಡಿಯಾಟಿಕ್ ರಿಜಿಡ್ ಬ್ರೋಂಕೊಸ್ಕೋಪಿ ನಡೆಸಲು ತೀರ್ಮಾನಿಸಿ, ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಫಲ ಕೊಟ್ಟಿದ್ದು, ಚೂಪಾದ ಬಲ್ಬ್‌ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಂಗಳವಾರ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

English summary
A team of doctors at a Hyderabad hospital removed a bulb from a 9 year-old boy's lungs after he had accidentally swallowed it,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X