• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಿ ನಡೆಸುತ್ತಿದ್ದ 1,100 ಕೋಟಿ ರು ಬೆಟ್ಟಿಂಗ್ ದಂಧೆ ಬಂದ್!

|

ಹೈದರಾಬಾದ್, ಆ. 14: ದೆಹಲಿಯಲ್ಲಿ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಚೀನಿಯರು ಸಿಕ್ಕಿಬಿದ್ದ ಸುದ್ದಿಯ ಬೆನ್ನಲ್ಲೇ ಮುತ್ತಿನ ನಗರಿ ಹೈದರಾಬಾದಿನಲ್ಲಿ ಚೀನಿಯೊಬ್ಬ ಸ್ಥಳೀಯರ ನೆರವಿನಿಂದ ನಡೆಸುತ್ತಿದ್ದ ಕೋಟ್ಯಂತರ ರುಪಾಯಿ ಬೆಟ್ಟಿಂಗ್ ದಂಧೆಗೆ ಬ್ರೇಕ್ ಹಾಕಲಾಗಿದೆ.

ಅಕ್ರಮ ಜೂಜು ಅಡ್ಡಾವೊಂದರ ಮೇಲೆ ದಾಳಿ ನಡೆಸಿದ ಹೈದರಾಬಾದ್ ಪೊಲೀಸರಿಗೆ ಅಕ್ರಮ ಬೆಟ್ಟಿಂಗ್ ದಂಧೆಯ ಸಂಪೂರ್ಣ ಜಾಲ ಪತ್ತೆಯಾಗಿದೆ. ಸುಮಾರು 1,100 ಕೋಟಿ ರು ಮೌಲ್ಯದ ಬೆಟ್ಟಿಂಗ್ ರಾಕೆಟ್ ಬಂದ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಟಿ ದಾಳಿ: ದೆಹಲಿಯ ಚೀನಿಯರ ಬಳಿ 1000 ಕೋಟಿ ರು ವಶಐಟಿ ದಾಳಿ: ದೆಹಲಿಯ ಚೀನಿಯರ ಬಳಿ 1000 ಕೋಟಿ ರು ವಶ

ಚೀನಾ ಮೂಲದ ಕಂಪನಿಯೊಂದರ ಉದ್ಯೋಗಿಯಾಗಿರುವ ಚೀನಾದ ವ್ಯಕ್ತಿ ಹಾಗೂ ಆತನ ಸಹಚರರು ಈ ಇಡೀ ಜಾಲವನ್ನು ನಿಯಂತ್ರಿಸುತ್ತಿದ್ದರು ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ. ಬಂಧಿತರನ್ನು ಯಾ ಹೋ, ಧೀರಜ್ ಸರ್ಕಾರ್, ಅಂಕಿತ್ ಕಪೂರ್ ಹಾಗೂ ನೀರಜ್ ತುಳಿ ಎಂದು ಗುರುತಿಸಲಾಗಿದೆ.

ಆನ್ ಲೈನ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳು 1.64 ಲಕ್ಷ ರು ಹಾಗೂ 97, 000 ರು ಕಳೆದುಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ದಾಳಿ ನಡೆಸಿದ್ದಾಗ ಬೆಟ್ಟಿಂಗ್ ಜಾಲ ಪತ್ತೆಯಾಗಿದ್ದು, ಎಲ್ಲರ ವಿರುದ್ಧ ವಂಚನೆ, ಸಂಚು, ಅಕ್ರಮ ಹಣ ಸಾಗಣೆ ಆರೋಪದಡಿಯಲ್ಲಿ ದೂರು ದಾಖಲಿಸಿಕೊಂಡು ಪ್ರಕರಣ ಹಾಕಲಾಗಿದೆ.

ಚೀನಾ ಮೂಲದ ಕಂಪನಿಯ ಬ್ಯಾಂಕ್ ಖಾತೆಯಿಂದ ಅನಾಮಿಕ ಖಾತೆಗಳಿಗೆ ಹಣ ರವಾನೆಯಾಗಿರುವ ಮಾಹಿತಿ ಸಿಕ್ಕಿದೆ. ಸುಮಾರು 30 ಕೋಟಿ ರು ಬ್ಯಾಂಕ್ ಖಾತೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದರು.

ಆನ್ ಲೈನ್ ಜೂಜಾಟದ ವೆಬ್ ಸೈಟ್ ಗಳು ಚೀನಾ ಮೂಲದ್ದಾಗಿದ್ದು, ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಬಳಸಿಕೊಂಡು ಹಣಕಾಸು ವ್ಯವಹಾರ ನಡೆಸಲಾಗಿದೆ. ಟೆಲಿಗ್ರಾಮ್ ಗ್ರೂಪ್ ಮೂಲಕ ಗ್ರಾಹಕರನ್ನು ಅಕರ್ಷಿಸಲಾಗಿದೆ. ಸದಸ್ಯರ ಶಿಫಾರಸ್ಸಿನ ಮೇರೆಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಎಲ್ಲವೂ ವೃತ್ತಿಪರರಿಂದ ನಡೆಯುತ್ತಿತ್ತು. ವೆಬ್ ಸೈಟ್ ವಿಳಾಸ ಪ್ರತಿ ದಿನ ಬದಲಾಗುತ್ತಿತ್ತು ಯುಎಸ್ ಕ್ಲೌಡ್ ಆಧಾರಿತ ಸರ್ವೀಸ್ ಇದಾಗಿದ್ದರೂ ಚೀನಾದ ಕಂಪನಿಯ ನಿರ್ದೇಶಕರು ಎಲ್ಲವನ್ನು ನಿಯಂತ್ರಿಸುತ್ತಿದ್ದರು ಎಂದು ಆಯುಕ್ತರು ವಿವರಿಸಿದರು.

English summary
A Chinese national and three of his Indian associates have been arrested in a crackdown on an illegal gambling racket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X