ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬುಲೆನ್ಸ್‌ಗೆ ದಾರಿ ಮಾಡಲು 2 ಕಿಮೀ ಓಡಿದ ಪೊಲೀಸ್: ವೈರಲ್ ವಿಡಿಯೋ

|
Google Oneindia Kannada News

ಹೈದರಾಬಾದ್, ನವೆಂಬರ್ 6: ಕರ್ತವ್ಯ ಪ್ರಜ್ಞೆ ಮೆರೆದ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಆಂಬುಲೆನ್ಸ್‌ಗೆ ದಾರಿ ಕಲ್ಪಿಸುವ ಸಲುವಾಗಿ ಎರಡು ಕಿ.ಮೀ. ಓಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಂಚಾರ ಪೊಲೀಸ್ ಸಿಬ್ಬಂದಿಯ ಬದ್ಧತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ಹೈದರಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಅನಿಲ್ ಕುಮಾರ್, ಸಂಚಾರ ದಟ್ಟಣೆ ನಡುವೆ ಆಂಬುಲೆನ್ಸ್ ಸಾಗಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲು ಓಡಿದ ವಿಡಿಯೋವನ್ನು ಹಂಚಿಕೊಂಡದ್ದಾರೆ.

ವಿಡಿಯೋ; ಬಾನೆಟ್ ಮೇಲೆ ಪೊಲೀಸ್, ಕಾರು ನಿಲ್ಲಿಸದ ಚಾಲಕವಿಡಿಯೋ; ಬಾನೆಟ್ ಮೇಲೆ ಪೊಲೀಸ್, ಕಾರು ನಿಲ್ಲಿಸದ ಚಾಲಕ

'ಅಬ್ದಿದ್ಸ್ ಸಂಚಾರ ಪೊಲೀಸ್ ಠಾಣೆಯ ಎಚ್‌ಟಿಪಿ ಅಧಿಕಾರಿ ಬಾಬ್ಜಿ ಅವರು ಆಂಬುಲೆನ್ಸ್‌ಗಾಗಿ ದಟ್ಟಣೆಯನ್ನು ತೆರವುಗೊಳಿಸುತ್ತಿರುವುದು. ಒಳ್ಳೆಯ ಕಾರ್ಯ. ಎಚ್‌ಟಿಪಿಯು (ಹೈದಾರಾಬಾದ್ ಟ್ರಾಫಿಕ್ ಪೊಲೀಸ್) ನಾಗರಿಕರ ಸೇವೆಗಾಗಿ ಇದೆ' ಎಂದು ವಿಡಿಯೋದೊಂದಿಗೆ ಅನಿಲ್ ಕುಮಾರ್ ಬರೆದಿದ್ದಾರೆ.

 Hyderabad Cop Babji Runs 2 KMs To Clear Traffic For Ambulance: Viral Video

ತೀವ್ರ ಸಂಚಾರ ದಟ್ಟಣೆ ನಡುವೆ ತಮ್ಮ ಹಿಂದೆ ಬರುತ್ತಿದ್ದ ಆಂಬುಲೆನ್ಸ್ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಟ್ರಾಫಿಕ್ ಅಧಿಕಾರಿ ಬಾಬ್ಜಿ ಅವರು ವಾಹನಗಳ ನಡುವೆ ಓಡುವುದು ಒಂದು ನಿಮಿಷಕ್ಕೂ ಹೆಚ್ಚು ದೊಡ್ಡದಾದ ವಿಡಿಯೋದಲ್ಲಿ ಕಾಣಿಸಿದೆ.

61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ! 61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ!

ಕೋಟಿ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಜಿ. ಬಾಬ್ಜಿ, ಸೋಮವಾರ ಸಂಜೆ ಸಂಚಾರದ ದಟ್ಟಣೆ ನಡುವೆ ಆಂಬುಲೆನ್ಸ್ ಸಿಕ್ಕಿಕೊಂಡಿರುವುದನ್ನು ಗಮನಿಸಿದ್ದರು. ಕೂಡಲೇ ಕರ್ತವ್ಯ ಪ್ರಜ್ಞೆ ಮೆರೆದ ಅವರು ಸುಮಾರು ಎರಡು ಕಿ.ಮೀ. ಸಂಚಾರ ದಟ್ಟಣೆಯನ್ನು ತೆರವುಗೊಳಿಸುತ್ತಾ ಓಡಿದ್ದಾರೆ. ಈ ಮೂಲಕ ರೋಗಿಯನ್ನು ಆದಷ್ಟು ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

English summary
Hyderabad traffic cop runs for almost 2 KMs on road to make way for an ambulance. The video has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X