• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದ್ ಸ್ಫೋಟ, ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ ಶಿಕ್ಷೆ

By Mahesh
|

ಹೈದರಾಬಾದ್, ಸೆಪ್ಟೆಂಬರ್ 10: ಗೋಕುಲ್ ಚಾಟ್ ಹಾಗೂ ಲುಂಬುನಿ ಪಾರ್ಕ್ ಬಳಿ 2007ರಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಲಯವು ಅನೀಕ್ ಸಯದ್ ಹಾಗೂ ಇಸ್ಮಾಯಿಲ್ ಚೌಧರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ತಾರೀಖ್ ಅಂಜುಮ್ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

ಈ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ನ್ಯಾಯಾಲಯವು ಘೋಷಿಸಲಾಗಿದ್ದು, ಇಬ್ಬರಿಗೆ ಖುಲಾಸೆಯಾಗಿದೆ. ಅನೀಕ್ ಶಫೀಕ್ ಸೈಯದ್, ಅಕ್ಬರ್ ಇಸ್ಮಾಯಿಲ್ ಚೌಧರಿ ಇಬ್ಬರನ್ನು ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಫರೂಕ್ ಶರ್ಫುದ್ದೀನ್ ತರ್ಕಶ್ ಹಾಗೂ ಮೊಹಮ್ಮದ್ ಸಾದಿಕ್ ಇಸ್ರಾಸ್ ಅಹ್ಮದ್ ಶೈಕ್ ಅವರಿಗೆ ಖುಲಾಸೆಯಾಗಿದೆ

ಹೈದರಾಬಾದ್ : ಅವಳಿ ಸ್ಫೋಟ ಪ್ರಕರಣದಲ್ಲಿ ಇಬ್ಬರು ದೋಷಿ, ಇಬ್ಬರಿಗೆ ಖುಲಾಸೆ

ಇಂಡಿಯನ್ ಮುಜಾಹೀದ್ದೀನ್ ಸ್ಥಾಪಕರಾದ ಕರ್ನಾಟಕ ಮೂಲದ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಅವರ ವಿರುದ್ಧ ಕೂಡಾ ತೆಲಂಗಾಣ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರು ಸದ್ಯ ನಾಪತ್ತೆಯಾಗಿದ್ದಾರೆ.

2007ರಲ್ಲಿ ಹೈದರಾಬಾದ್​ ನಗರದಲ್ಲಿ ನಡೆದ ಒಂದು ಬಾಂಬ್ ಸ್ಫೋಟದಲ್ಲಿ 32 ಮಂದಿ ಮೃತಪಟ್ಟರೆ, ಮತ್ತೊಂದರಲ್ಲಿ 11 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ತೆಲಂಗಾಣ ಪೊಲೀಸ್​ ಇಲಾಖೆಯ ದಿ ಕೌಂಟರ್​ ಆಫ್​ ಇಂಟಲಿಜೆನ್ಸ್​ ತಂಡವು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿತ್ತು

ಭಟ್ಕಳ ಸೋದರರು ಸೇರಿದಂತೆ ಐವರ ಮೇಲೆ ಚಾರ್ಜ್ ಶೀಟ್

ಭಟ್ಕಳ ಸೋದರರು ಸೇರಿದಂತೆ ಐವರ ಮೇಲೆ ಚಾರ್ಜ್ ಶೀಟ್

ಭಟ್ಕಳ ಸೋದರರು ಸೇರಿದಂತೆ ಐವರ ಮೇಲೆ ಮೂರು ಚಾರ್ಜ್​ಶೀಟ್​ಗಳನ್ನು ಸಲ್ಲಿಸಲಾಗಿತ್ತು. 2008 ಅಕ್ಟೋಬರ್​ನಲ್ಲಿ ಆರೋಪಿಗಳನ್ನು ಮಹಾರಾಷ್ಟ್ರ ಎಟಿಎಸ್ ಪಡೆ ಬಂಧಿಸಿತ್ತು. ಆರೋಪಿಗಳನ್ನು ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಲ್ಲಿರಿಸಲಾಗಿದೆ. ಅನೀಕ್ ಸಯೀದ್, ಇಸ್ಮಾಯಿಲ್ ಚೌಧರಿ, ತಾರೀಕ್ ಅಂಜುಮ್, ಫರೂಕ್ ಶರ್ಫುದ್ದೀನ್, ಮೊಹಮ್ಮದ್ ಸಾದೀಕ್ ಇಸ್ರಾಸ್ ಶೇಖ್ ಅಪರಾಧಿಗಳಾಗಿದ್ದಾರೆ.

ಅವಳಿ ಸ್ಫೋಟದ ದಿನದ CCTV ದೃಶ್ಯಾವಳಿ

ಅವಳಿ ಸ್ಫೋಟದ ದಿನದ CCTV ದೃಶ್ಯಾವಳಿ

ಅವಳಿ ಸ್ಫೋಟದಲ್ಲಿ ಬಾಂಬ್ ಇಟ್ಟವರ ಪೈಕಿ ಒಬ್ಬ ಕರ್ನಾಟಕದ ಸಯ್ಯದ್ ಅಹಮದ್ ಝರಾರ್ ಸಿದ್ದಿಬಪ್ಪಾ ಅಲಿಯಾಸ್ ಯಾಸಿನ್ ಭಟ್ಕಳನೇ ಎಂದು CCTV ದೃಶ್ಯಾವಳಿಗಳನ್ನು ಆಧರಿಸಿ NIA ತಿಳಿಸಿತ್ತು. ವ್ಯಕ್ತಿಯೊಬ್ಬ ಬಾಂಬ್ ತುಂಬಿರುವ ಚೀಲವನ್ನು ಕೈಯಲ್ಲಿ ಹಿಡಿದುರುವುದು CCTVಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಮತ್ತೊಂದು ಸ್ಫೋಟದಲ್ಲಿ ಸೈಕಲಿನಲ್ಲಿ ಬಾಂಬ್ ಸಾಗಿಸಿಟ್ಟವನು ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಎಂದೂ ಹೇಳಿದ್ದರು. ಅಸಾದುಲ್ಲಾ ಅಖ್ತರ್ ಅಜಂನಗರದ ನಿವಾಸಿ. 2008 ರಲ್ಲಿ ಇವನು ಪರಾರಿಯಾಗಿದ್ದ.

ತೆಲಂಗಾಣ ಪೊಲೀಸರು ಕೈಗೊಂಡಿದ್ದ ತನಿಖೆ

ತೆಲಂಗಾಣ ಪೊಲೀಸರು ಕೈಗೊಂಡಿದ್ದ ತನಿಖೆ

2007ರಲ್ಲಿ ಹೈದರಾಬಾದ್​ ನಗರದಲ್ಲಿ ನಡೆದ ಒಂದು ಬಾಂಬ್ ಸ್ಫೋಟದಲ್ಲಿ 32 ಮಂದಿ ಮೃತಪಟ್ಟರೆ, ಮತ್ತೊಂದರಲ್ಲಿ 11 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ತೆಲಂಗಾಣ ಪೊಲೀಸ್​ ಇಲಾಖೆಯ ದಿ ಕೌಂಟರ್​ ಆಫ್​ ಇಂಟಲಿಜೆನ್ಸ್​ ತಂಡವು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿತು.

ಬೆಂಗಳೂರು ಸ್ಫೋಟದ ರೂವಾರಿ ಮದನಿ

ಬೆಂಗಳೂರು ಸ್ಫೋಟದ ರೂವಾರಿ ಮದನಿ

ಬೆಂಗಳೂರು ಮತ್ತು ಹೈದರಾಬಾದ್ ಸ್ಫೋಟದ ರೂವಾರಿಗಳು ಹತ್ತಿರದ ಸಂಬಂಧಿಗಳು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿತ್ತು. ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಹಾಗೂ ಹೈದರಾಬಾದ್ ಸ್ಫೋಟದ ಆರೋಪಿ ಅಬು ಉಸ್ತಾದ್ ನಡುವೆ ಸಂಪರ್ಕವಿರುವುದು ಖಾತ್ರಿಯಾಗಿತ್ತು. ಮದನಿಯಂತೆ ಉಸ್ತಾದ್ ಕೂಡಾ ಮದರಸಾಗಳಲ್ಲಿ ಉಗ್ರ ಭಾಷಣ ಮಾಡಿದ್ದು ಪತ್ತೆಯಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Hyderabad blasts case
English summary
The National Investigation Agency (NIA) Special Court on Monday awarded Aneeq Sayeed and Ismail Chaudhary, the main accused in the Hyderabad twin blasts, death sentence while Tariq Anjum, who provided shelter to convicted terrorists, was given life imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more