ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಕೊರೊನಾವೈರಸ್ ಕೊಲ್ಲುವ ಹೊಸ ತಂತ್ರಜ್ಞಾನ ಅಭಿವೃದ್ಧಿ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 16: ತೆಲಂಗಾಣದ ಸ್ಥಳೀಯ ಸಂಶೋಧಕ ನರಸಿಂಹ ಚಾರಿ ಕೊರೊನಾವೈರಸ್ ಕೊಲ್ಲುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ನೇರಳಾತೀತ ಪೆಟ್ಟಿಗೆಯಲ್ಲಿ ಫಿಲಾಮೆಂಟ್(ತಂತು)ಲೆಸ್ ಯುವಿ(ತರಂಗ) ಬೆಳಕನ್ನು ಬಳಸಿ ಕೊರೊನಾ ವೈರಸ್‌ನ್ನು ಕೊಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಸಾಮಾನ್ಯ ನೆಗಡಿಯಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿ: ವೈದ್ಯರ ಸಲಹೆಸಾಮಾನ್ಯ ನೆಗಡಿಯಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿ: ವೈದ್ಯರ ಸಲಹೆ

Recommended Video

Diganth ಹಾಗು Aindrita Ray ಮೊದಲ ದಿನದ ವಿಚಾರಣೆ ಹೇಗಾಯ್ತು | Oneindia Kannada

ಸೆಂಟರ್ ಸೆಲ್ಯುಲರ್ ಮಲಿಕ್ಯೂಲರ್ ಬಯಾಲಜಿ ನೀಡಿರುವ ಮಾಹಿತಿ ಪ್ರಕಾರ ಇದು ಶೇ.99ರಷ್ಟು ವೈರಲ್ ಕಣಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಬಲ್ಲದು ಎಂಬುದು ತಿಳಿದುಬಂದಿದೆ.

Hyderabad-Based CSIR Validates Rural Innovator’s Technology To Kill Coronavirus

ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ಅವರ ಇನ್‌ಸ್ಟಿಟ್ಯೂಟ್ ನರಸಿಂಹ ಚಾರಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ರಾಕೇಶ್ ಮಿಶ್ರಾ ಮಾತನಾಡಿ, ಸಣ್ಣ ಸ್ಟಾರ್ಟ್‌ಅಪ್‌ಗಳು ಈ ರೀತಿಯ ಸಂಶೋಧನೆಯನ್ನು ಮಾಡುತ್ತಿರುವುದು ಸಂತಸದ ವಿಚಾರ ಸಿಸಿಎಂಬಿಯು ತಾಂತ್ರಿಕ ಸಲಹೆ ನೀಡಲು ಬದ್ಧವಿದೆ.

ಕೊರೊನಾ ವೈರಸ್ ಸೀಸನಲ್ ಆಗುವ ಆತಂಕ: ಬೀರುವ ದುಷ್ಪರಿಣಾಮಗಳೇನು?ಕೊರೊನಾ ವೈರಸ್ ಸೀಸನಲ್ ಆಗುವ ಆತಂಕ: ಬೀರುವ ದುಷ್ಪರಿಣಾಮಗಳೇನು?

ಫಿಲಾಮೆಂಟ್(ತಂತು) ಟ್ಯೂಬ್ ಇಲ್ಲದೆಯೇ ಮೊದಲ ಬಾರಿಗೆ ಈ ಪ್ರಯೋಗ ನಡೆಸಲಾಗಿದೆ.30ವ್ಯಾಟ್ 250 ನ್ಯಾನೋಮೀಟರ್ ಯುವಿ ಲೈಟ್(ತರಂಗ) 15ರಿಂದ 1200 ಸೆಕೆಂಡುಗಳಲ್ಲಿ 30 ಸೆಂ.ಮೀ ದೂರವಿರುವ ವೈರಸ್‌ನ್ನು ನಾಶಪಡಿಸಬಲ್ಲದಾಗಿದೆ.

ಫಿಲಾಮೆಂಟ್ ಟ್ಯೂಟ್ ಇಂಟೆನ್ಸಿಟಿ ಹೆಚ್ಚಾದಾಗ ಸ್ಫೋಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಇದನ್ನು ಮರ್ಕ್ಯೂರಿ ಲೈಟ್‌ನಿಂದ ಅಭಿವೃದ್ಧಿಪಡಿಸಲಾಗಿದ್ದು, ತಂತುವಿನ ತೀವ್ರತೆ ಎಷ್ಟೇ ಹೆಚ್ಚಾದರೂ ಯಾವುದೇ ತೊಂದರೆಯಾಗುವುದಿಲ್ಲ.

English summary
Hyderabad-based CSIR-Centre for Cellular and Molecular Biology(CCMB) has tested and validated the technology developed by one Narsimha Chary to generate optimum lux in a filament-less UV-C light that kills SARS-CoV-2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X