ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ವಿಧಾನಸಭೆ ಚುನಾವಣೆ : ಅಂಕಿ-ಅಂಶಗಳು

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 09 : ತೆಲಂಗಾಣ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 2014ರಲ್ಲಿ ಹೊಸದಾಗಿ ರಾಜ್ಯ ಸ್ಥಾಪನೆಯಾದ ಬಳಿಕ 2ನೇ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

ಚುನಾವಣಾ ಆಯೋಗ ತೆಲಂಗಾಣ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದೆ. 120 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಡಿಸೆಂಬರ್ 7ರಂದು ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.

ತೆಲಂಗಾಣದ ಸಾವಿರಾರು ಮತದಾರರ ವಯಸ್ಸು 2000 ವರ್ಷಕ್ಕೂ ಹೆಚ್ಚು!ತೆಲಂಗಾಣದ ಸಾವಿರಾರು ಮತದಾರರ ವಯಸ್ಸು 2000 ವರ್ಷಕ್ಕೂ ಹೆಚ್ಚು!

ಹೊಸದಾಗಿ ರಚನೆಯಾದ ತೆಲಂಗಾಣದಲ್ಲಿ 2014ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಕೆ.ಚಂದ್ರಶೇಖರರಾವ್ ನೇತೃತ್ವದ ಟಿಆರ್‌ಎಸ್ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು. ಅವಧಿಗೂ ಮೊದಲೇ ಅವರು ವಿಧಾನಸಭೆ ವಿಸರ್ಜನೆ ಮಾಡಿದ್ದು, ಈಗ ಚುನಾವಣೆ ಎದುರಾಗಿದೆ.

ಮಿಷನ್ 60: ತೆಲಂಗಾಣ ಜಿದ್ದಾಜಿದ್ದಿಗೆ ಅಮಿತ್ ಶಾ ನೀಡಿದ ಟಾರ್ಗೆಟ್ಮಿಷನ್ 60: ತೆಲಂಗಾಣ ಜಿದ್ದಾಜಿದ್ದಿಗೆ ಅಮಿತ್ ಶಾ ನೀಡಿದ ಟಾರ್ಗೆಟ್

How Telangana voted in the 2014 election

2014ರ ಚುನಾವಣೆಯಲ್ಲಿ ಟಿಆರ್‌ಎಸ್ 63 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 21, ಟಿಡಿಪಿ 15 ಸ್ಥಾನಗಳಲ್ಲಿ ಜಯಗಳಿಸಿದ್ದವು. ಎಐಎಂಐಎಂ 7, ಬಿಜೆಪಿ 5, ವೈಎಸ್‌ಆರ್‌ಸಿಪಿ 3, ಬಿಎಸ್‌ಪಿ 2 ಸ್ಥಾನ ಪಡೆದಿದ್ದವು.

ಬಿಜೆಪಿಗೆ ಬಿಗ್ ಶಾಕ್! NDA ಜೊತೆ ಖಂಡಿತ ಕೈಜೋಡಿಸೋಲ್ಲ ಎಂದ TRS!ಬಿಜೆಪಿಗೆ ಬಿಗ್ ಶಾಕ್! NDA ಜೊತೆ ಖಂಡಿತ ಕೈಜೋಡಿಸೋಲ್ಲ ಎಂದ TRS!

ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಯಾವುದೇ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. 120 ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳಲ್ಲಿ ಶೇ 10ರಷ್ಟು ಮುಸ್ಲಿಂ ಮತಗಳಿವೆ. ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂಬ ನಿರೀಕ್ಷೆ ಇದೆ.

English summary
Telangana India's youngest state votes on December 7, 2018. This is the second time that polls are being held in the state after its formation in 2014. The last time elections were held were in the months of April-May 2014 along with the Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X