ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಕೇಳಲು ಎಷ್ಟು ಧೈರ್ಯ ಅವರಿಗೆ? ಮೋದಿ

|
Google Oneindia Kannada News

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಹೆಗಲ ಮೇಲೆ ಬಂದೂಕನ್ನು ಇರಿಸಿ, ಕಾಂಗ್ರೆಸ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಾಳಿ ನಡೆಸಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಭಾಷಣ ಮಾಡಿದ ಅವರು, ಕಾಂಗ್ರೆಸ್ ನ ಅತಿ ದೊಡ್ಡ ಸಹವರ್ತಿ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿ ಬೇಕು ಎಂದು ಕೇಳಿದೆ. ನೀವು ನನಗೆ ಹೇಳಿ, ಕಾಂಗ್ರೆಸ್ ನ ಮಿತ್ರ ಪಕ್ಷದ ಬೇಡಿಕೆಗೆ ನಿಮ್ಮ ಒಪ್ಪಿಗೆ ಇದೆಯಾ?

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

-ಹೀಗೆ ಪ್ರಶ್ನೆ ಮಾಡಿದ್ದಾರೆ ನರೇಂದ್ರ ಮೋದಿ. ಈ ಗಡಿಯಾರವನ್ನು ಹಿಂದಕ್ಕೆ ತಿರುಗಿಸುತ್ತೇವೆ, ಅರವತ್ತಾರು ವರ್ಷದ ಹಿಂದಿನ ಸ್ಥಿತಿಗೆ ತೆಗೆದುಕೊಂಡು ಹೋಗುತ್ತೇವೆ. ಹಿಂದೂಸ್ತಾನದಲ್ಲಿ ಇಬ್ಬರು ಪ್ರಧಾನಿ ಇರುತ್ತಾರೆ. ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಇರುತ್ತಾರೆ. ಇದೀಗ ಕಾಂಗ್ರೆಸ್ ಉತ್ತರ ನೀಡಬೇಕಾಗುತ್ತದೆ. ಅವರ ಸಹವರ್ತಿ ಪಕ್ಷಕ್ಕೆ ಹೀಗೆ ಹೇಳಲು ಧೈರ್ಯ ಬರಲು ಕಾರಣ ಏನು ಎಂದು ಪ್ರಶ್ನಿಸಿದ್ದಾರೆ.

How can we agree separate PM for Kashmir? Questions PM Modi

ಅವರ ಭಾಷಣದ ಇತರ ಮುಖ್ಯಾಂಶಗಳು:

* ಶಿಕ್ಷಣ, ಏರುತ್ತಿರುವ ಬೆಲೆ ಇಂಥ ವಿಚಾರದಲ್ಲಿ ಕೇಂದ್ರ ಸರಕಾರವು ಮಧ್ಯಮವರ್ಗಗಳ ನೆರವಿಗೆ ಬಂದಿದೆ.

* ಈ ಹಿಂದಿನ ಸರಕಾರಗಳಲ್ಲಿ ಯೋಜನೆಗಳಲ್ಲಿ ಪಾರದರ್ಶಕತೆ ಇರಲಿಲ್ಲ.

* ಶಿಕ್ಷಣ, ಗೃಹ ಸಾಲವನ್ನು ಕಡಿಮೆ ಇಎಂಐನಲ್ಲಿ ನಮ್ಮ ಸರಕಾರ ನೀಡಿದೆ.

ಪಕ್ಕದ ತೆಲಂಗಾಣ ರಾಜ್ಯದ ಸಂಸದರ ಶೈಕ್ಷಣಿಕ ವಿವರ

* ಒಂದು ವೇಳೆ ವಿಪಕ್ಷಗಳು ಅಧಿಕಾರಕ್ಕೆ ಬಂದರೆ ಶೂನ್ಯ ತೆರಿಗೆ ಅನುಕೂಲ ಕೊನೆಯಾಗುತ್ತದೆ.

* ಸೈನದಿಂದ ಬುಲೆಟ್ ಪ್ರೂಫ್ ಗಾಗಿ ಕೇಳಿದಾಗ ನಮ್ಮ ಬಳಿ ಹಣ ಇಲ್ಲ ಎಂದಿದ್ದರು.

* ನನ್ನ ಕರ್ತವ್ಯ ಏನೆಂದರೆ ಮಧ್ಯಮ ವರ್ಗದವರ ಹಿತಾಸಕ್ತಿಯನ್ನು ಮನಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡುವುದು, ಅವರ ಕನಸು ನನಸು ಮಾಡಲು ಪ್ರಯತ್ನಿಸುವುದು.

English summary
How can we agree separate PM for Kashmir? Questions PM Narendra Modi in Telangana on Monday, referring to National Conference, which has alliance with Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X