ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಆದ ಕೊರೊನಾ ಸೋಂಕಿತನ ಕೊನೆ ಕ್ಷಣದ ವಿಡಿಯೋ

|
Google Oneindia Kannada News

ಹೈದರಾಬಾದ್, ಜೂನ್ 29 : ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತ ರೋಗಿಯೊಬ್ಬ ಮೃತಪಟ್ಟಿದ್ದಾನೆ. ಕುಟುಂಬದವರಿಗೆ ಆತ ಮಾಡಿ ಕಳಿಸಿರುವ ವಿಡಿಯೋ ಆಸ್ಪತ್ರೆಗಳ ಕಾರ್ಯ ವೈಖರಿ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಜೂನ್ 24ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 35 ವರ್ಷದ ರೋಗಿ ಶುಕ್ರವಾರ ಮೃತಪಟ್ಟಿದ್ದಾನೆ. ಸಾವಿನ ಬಳಿಕ ಆತ ಕಳಿಸಿದ್ದ ವಿಡಿಯೋ ವೈರಲ್ ಆಗಿದೆ. ಆಸ್ಪತ್ರೆಯ ವ್ಯವಸ್ಥೆ ಮತ್ತು ವೆಂಟಿಲೇಟರ್ ಇಲ್ಲದ ಕುರಿತು ವಿಡಿಯೋವಿದೆ.

ಮತ್ತೆ 15 ದಿನ ಸಂಪೂರ್ಣ ಲಾಕ್ ಡೌನ್; ಸುಳಿವು ಕೊಟ್ಟ ಸಿಎಂಮತ್ತೆ 15 ದಿನ ಸಂಪೂರ್ಣ ಲಾಕ್ ಡೌನ್; ಸುಳಿವು ಕೊಟ್ಟ ಸಿಎಂ

ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ ಎಂದು ಹೇಳಿದೆ. ಮೃತ ರೋಗಿಯ ಕುಟುಂಬದವರು ಸಾವಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಹೊಣೆ ಎಂದು ಆರೋಪ ಮಾಡುತ್ತಿದ್ದಾರೆ.

ಕೊವಿಡ್-19 ರೋಗಿ ದಾಖಲಿಸಿಕೊಳ್ಳದ್ದಕ್ಕೆ ಆಸ್ಪತ್ರೆಗೆ 77 ಲಕ್ಷ ದಂಡಕೊವಿಡ್-19 ರೋಗಿ ದಾಖಲಿಸಿಕೊಳ್ಳದ್ದಕ್ಕೆ ಆಸ್ಪತ್ರೆಗೆ 77 ಲಕ್ಷ ದಂಡ

Hospital Negligence COVID Patient Video Goes Viral

ರೋಗಿಯು ಕಳಿಸಿರುವ ವಿಡಿಯೋದಲ್ಲಿ ಆತ ಉಸಿರಾಡಲು ಕಷ್ಟ ಪಡುತ್ತಿರುವುದು ದಾಖಲಾಗಿದೆ. ಆಸ್ಪತ್ರೆ ಸಿಬ್ಬಂದಿ ಮೂರು ಗಂಟೆಗಳ ಕಾಲ ಆತನ ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದಿದ್ದರು ಎಂದು ಆತ ಹೇಳಿದ್ದಾನೆ. ಕೊನೆಯ ಕೆಲವು ಕ್ಷಣಗಳಲ್ಲಿ ಆತ ತಂದೆ ಬಾಯ್ ಬಾಯ್ ಎಂದು ಹೇಳಿರುವುದು ದಾಖಲಾಗಿದೆ.

"ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಚಿಕಿತ್ಸೆ ದರ ಶಾಕ್ ಆಗುವಂತಿದೆ"

ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ಕುಟುಂಬಕ್ಕೆ ಬೇರೆ ರೋಗಿಯ ಶವ ಹಸ್ತಾಂತರ ಮಾಡಿದ್ದ ಪ್ರಕರಣ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಖಾಸಗಿ ಆಸ್ಪತ್ರೆಗಳು ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡುವ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

English summary
35 year old Covid-19 patient was undergoing treatment at the private hospital in Hyderabad died in Friday. The video he sent to family members goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X