ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ ಹೆರಿಟೇಜ್ ಫುಡ್ಸ್

|
Google Oneindia Kannada News

ಬೆಂಗಳೂರು/ಹೈದರಾಬಾದ್, ಮಾರ್ಚ್ 29: ಜಾಗತಿಕ ಮಟ್ಟದಲ್ಲಿ ಕೋವಿಡ್-19 ಸಾಂಕ್ರಾಮಿಕ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತ ಕೂಡಾ ಕೋವಿಡ್-19ನ ಬಿಸಿಯನ್ನು ಅನುಭವಿಸುತ್ತಿದ್ದು, ದೇಶಾದ್ಯಂತ ವ್ಯಾಪಕವಾಗಿ ಸೋಂಕು ಹರಡುತ್ತಿದೆ.

ಕೋವಿಡ್-19 ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ, ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ಹೆರಿಟೇಜ್ ಫುಡ್ಸ್ ಲಿಮಿಟೆಡ್ ಸರ್ಕಾರದ ಜತೆ ಕೈಜೋಡಿಸಿದೆ.

Heritage Foods donates Rs 1 Cr to Six states CM Relief Funds

ಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆ ಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆ

ದೇಶಾದ್ಯಂತ ವಿವಿಧ ಕಾರ್ಯಾಚರಣೆ ಕ್ಷೇತ್ರಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಒಂದು ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಲು ಕಂಪನಿ ನಿರ್ಧರಿಸಿದೆ. ದೇಣಿಗೆಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:
1. ಮುಖ್ಯಮಂತ್ರಿ ಪರಿಹಾರ ನಿಧಿ ಆಂಧ್ರಪ್ರದೇಶ- 30 ಲಕ್ಷ ರೂಪಾಯಿ
2. ಮುಖ್ಯಮಂತ್ರಿ ಪರಿಹಾರ ನಿಧಿ ತೆಲಂಗಾಣ- 30 ಲಕ್ಷ ರೂಪಾಯಿ
3. ಮುಖ್ಯಮಂತ್ರಿ ಪರಿಹಾರ ನಿಧಿ ಕರ್ನಾಟಕ- 10 ಲಕ್ಷ ರೂಪಾಯಿ
4. ಮುಖ್ಯಮಂತ್ರಿ ಪರಿಹಾರ ನಿಧಿ ತಮಿಳುನಾಡು- 10 ಲಕ್ಷ ರೂಪಾಯಿ
5. ಮುಖ್ಯಮಂತ್ರಿ ಪರಿಹಾರ ನಿಧಿ ಮಹಾರಾಷ್ಟ್ರ- 10 ಲಕ್ಷ ರೂಪಾಯಿ
6. ಮುಖ್ಯಮಂತ್ರಿ ಪರಿಹಾರ ನಿಧಿ ದೆಹಲಿ- 10 ಲಕ್ಷ ರೂಪಾಯಿ

21 ದಿನಗಳ Lockdown:ಅಗತ್ಯ ಸೇವೆ ಲಭ್ಯ, ಸಂಪೂರ್ಣ ವಿವರ ಇಲ್ಲಿದೆ21 ದಿನಗಳ Lockdown:ಅಗತ್ಯ ಸೇವೆ ಲಭ್ಯ, ಸಂಪೂರ್ಣ ವಿವರ ಇಲ್ಲಿದೆ

ಕೋವಿಡ್-19 ವಿರುದ್ಧದ ಹೋರಾಟದ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಸಂಸ್ಥೆಯ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಭುವನೇಶ್ವರಿ ನಾರಾ, ''ನಾವು ಹಿಂದೆಂದೂ ಕೇಳರಿಯದ ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದೇವೆ. ದೇಶದ ಪ್ರತಿಯೊಬ್ಬರೂ ಮನೆಗಳಲ್ಲೇ ಸುರಕ್ಷಿತವಾಗಿ ಉಳಿದುಕೊಳ್ಳುವಂತೆ ನಾನು ಒತ್ತಾಯಪೂರ್ವಕವಾಗಿ ಮನವಿ ಮಾಡುತ್ತಿದ್ದೇನೆ. ದೇಶದ ಜವಾಬ್ದಾರಿಯುತ ಪ್ರಜೆಯಾಗಿ, ಸ್ವಯಂ ನಿರ್ಬಂಧ ಹೇರಿಕೊಂಡು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಜಾಗತಿಕ ಸಾಂಕ್ರಾಮಿಕವಾದ ಕೋವಿಡ್-19 ತಡೆಯಲು ನಿಮ್ಮದೇ ಮಾರ್ಗದಲ್ಲಿ ಕೊಡುಗೆ ನೀಡಬೇಕು'' ಎಂದು ಕರೆ ನೀಡಿದ್ದಾರೆ.

Heritage Foods donates Rs 1 Cr to Six states CM Relief Funds

''ಹೆರಿಟೇಜ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಲಿತವಾಗಿ ಪೂರೈಸಲು ಅಗತ್ಯ ಕ್ರಮ ಕೈಗೊಂಡಿದೆ. ಮನೆಗಳಿಗೇ ನೇರವಾಗಿ ವಿತರಿಸುವ ಹಾಗೂ ಇ-ಕಾಮರ್ಸ್ ವಾಹಿನಿ ಮೂಲಕ ಕ್ರಮಗಳನ್ನು ಕೈಗೊಂಡಿದೆ. ನಮ್ಮ ಗ್ರಾಹಕರು ಹೆಚ್ಚುವರಿ ಮುಂಜಾಗ್ರತಾ ಕ್ರಮವಾಗಿ ಹಾಲು/ ಮೊಸರು ಪ್ಯಾಕೆಟ್‍ಗಳನ್ನು ಬಳಸುವ ಮುನ್ನ ನೀರಿನಿಂದ ತೊಳೆದು, ಒರೆಸಿದ ಬಳಿಕ ಪ್ಯಾಕೆಟ್ ತೆರೆಯಬೇಕು'' ಎಂದು ಹೆರಿಟೇಜ್ ಫುಡ್ಸ್ ಲಿಮಿಡೆಟ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಹ್ಮಿಣಿ ನಾರಾ ಸಲಹೆ ನೀಡಿದ್ದಾರೆ.

English summary
Heritage Foods Ltd has decided to contribute a sum of Rs. 1 crore in its major operating areas across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X